ಕೋವಿಡ್ ನಿರ್ವಹಣೆಯಲ್ಲಿ ಸರಕಾರ ವಿಫಲ, ಎಚ್ಚೆತ್ತುಕೊಳ್ಳದಿದ್ದರೆ ಅಪಾಯ: ಕಾನ್ಮಕ್ಕಿ ಹರಿಪ್ರಸಾದ್ ಶೆಟ್ಟಿ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕೋವಿಡ್ 19 ಎರಡನೇ ಅಲೆಯಿಂದ ರಾಜ್ಯಾದ್ಯಂತ ಜನ ತತ್ತರಿಸಿ ಹೋಗಿದ್ದಾರೆ. ಸೊಂಕು ಪೀಡಿತರಿಗೆ ವೈದ್ಯಕೀಯ ಸೌಲಭ್ಯಗಳು, ವೆಂಟಿಲೇಟರ್ ಬೆಡ್, ಆಕ್ಸಿಜನ್ ಮತ್ತು ಸೂಕ್ತ ಚಿಕಿತ್ಸೆ ಸಿಗದೆ ಪ್ರಾಣ ಕಳೆದುಕೊಂಡಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಪ್ರತಿ ದಿನ ಸಾವಿರಕ್ಕೂ ಹೆಚ್ಚು ಸೋಂಕು ಪೀಡಿತರ ಪ್ರಕರಣಗಳು ದಾಖಲಾಗಿ ಮರಣ ಪ್ರಮಾಣದಲ್ಲೂ ಹೆಚ್ಚಳವಾಗುತ್ತಿದೆ. ಒಂದನೇ ಅಲೆಯಲ್ಲಿ ಇದ್ದಂತ ಹೋಮ್ ಕ್ವಾರಂಟೈನ್ , ಕಂಟೈನ್ಮೆಂಟ್ ಝೋನ್ ನಿರ್ಮಾಣ ಮುಂತಾದ ಕಠಿಣ ಪ್ರಕ್ರಿಯೆಗಳು ಈಗ ಕಾಣೆಯಾಗಿದ್ದು ಪರಿಸ್ಥಿತಿ ನಿರ್ವಹಿಸುವಲ್ಲಿ ಸರಕಾರ ಮತ್ತು ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದೆ ಎಂದು ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾನ್ಮಕ್ಕಿ ಹರಿಪ್ರಸಾದ್ ಶೆಟ್ಟಿ ಹೇಳಿದ್ದಾರೆ.

Call us

Call us

Call us

ಈಗಾಗಲೇ ವೆಂಟಿಲೇಟರ್ ಬೆಡ್ ಗಳಿಗೆ ಜನರು ಪರದಾಡುತ್ತಿದ್ದಾರೆ. ಹಳ್ಳಿಗಳಲ್ಲಿ ಸೋಂಕು ಪೀಡಿತರ ಸಂಖ್ಯೆ ಹೆಚ್ಚುತ್ತಿದೆ. ಸೋಂಕು ಪೀಡಿತರಿಗೆ ಮನೆಯಲ್ಲಿಯೇ ಹೊಂ ಐಸೋಲೇಷನ್ ಪಡೆಯಲು ವ್ಯವಸ್ಥೆ ಮಾಡಿರುವುದರಿಂದ ಕೆಲವು ಸೋಂಕಿತರು ರಾಜಾರೋಷವಾಗಿ ತಿರುಗಾಡಿ, ಮನೆಮಂದಿಯ ಜೊತೆಗೆ ಅಕ್ಕಪಕ್ಕದ ಮನೆಯವರಿಗೂ ಸೋಂಕು ಹರಡಿಸುತ್ತಿರುವುದು ಸೋಂಕಿತರ ಪ್ರಮಾಣ ಹೆಚ್ಚಳಕ್ಕೆ ಕಾರಣವಾಗಿದೆ.

Call us

Call us

ಪರಿಸ್ಥಿತಿ ಈಗಾಲೇ ಕೈ ಮೀರಿದೆ. ಶುಭಸಮಾರಂಭಗಳಲ್ಲಿ ಭಾಗವಹಿಸಿ ಬಂದ ಹೆಚ್ಚಿನವರು ಸೋಂಕು ಪೀಡಿತರಾಗಿದ್ದಾರೆ, ಅಲ್ಲದೇ ಎಪ್ರಿಲ್ ಮೇ ತಿಂಗಳಿನಲ್ಲಿ ಜಿಲ್ಲೆಯಲ್ಲಿ ನಡೆದ ಕೆಲವು ಮದುವೆ ಹಾಗೂ ಇನ್ನಿತರ ಶುಭಸಮಾರಂಭಗಳಿಂದಲೂ ಸೋಂಕು ಪೀಡಿತರು ಹೆಚ್ಚಾಗಲು ಕಾರಣವಾಗಿದೆ. ಆದುದರಿಂದ ಕರ್ಫ್ಯೂವನ್ನು ಕಟ್ಟುನಿಟ್ಟಾಗಿ ಜನತೆ ಪಾಲನೆ ಮಾಡುವಂತೆ ಕ್ರಮ ವಹಿಸುವ ಅಗತ್ಯವಿದೆ. ಜನಸಂದಣಿಯಾಗದ ರೀತಿಯಲ್ಲಿ ಅಗತ್ಯವಸ್ತುಗಳಿಗೆ ಮಾತ್ರ ಸೀಮಿತ ಅವಧಿಗೆ ಅವಕಾಶ ಕೊಟ್ಟು, ಜನ ಸಂಚಾರವನ್ನು ಸಂಪೂರ್ಣ ನಿರ್ಬಂಧಿಸಬೇಕಾಗಿದೆ. ಸೋಂಕು ಹರಡುವುದಕ್ಕೆ ಕಡಿವಾಣ ಹಾಕಬೇಕಾಗಿದೆ, ಇಲ್ಲದಿದ್ದಲ್ಲಿ ಜಿಲ್ಲೆಯಲ್ಲಿ ಮುಂದಿನ ಕೆಲ ದಿನಗಳು ತುಂಬಾ ಕಠಿಣವಾಗಲಿವೆ.

ಹಳ್ಳಿಯಲ್ಲಿ ಮಾಸ್ಕ್ ಧರಿಸುವವರ ಸಂಖ್ಯೆ ತೀರಾ ಕಡಿಮೆ. ಸರಕಾರವೇನೋ ಕೋವಿಡ್ ಕೇರ್ ಸೆಂಟರ್ ಆರಂಭಿಸುವುದಾಗಿ ಹೇಳಿಕೊಂಡಿದೆ. ಆದರೆ ಸೋಂಕು ಈಗಾಗಲೇ ಗ್ರಾಮೀಣ ಪ್ರದೇಶಕ್ಕೆ ವ್ಯಾಪಿಸಿಯಾಗಿದೆ. ಕೋವಿಡ್ ಎದುರಿಸಲು ಸಮರೋಪಾದಿಯ ಕಾರ್ಯಾಚರಣೆ ಅಗತ್ಯವಿದೆ. ತುರ್ತಾಗಿ ಹಳ್ಳಿಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರು ಮತ್ತು ಸಿಬ್ಬಂದಿಗಳ ಸೇವೆಯನ್ನು ದಿನದ 24 ಗಂಟೆಯೂ ಒದಗಿಸಲು ಹೆಚ್ಚುವರಿ ಸಿಬ್ಬಂದಿಗಳ ನೇಮಕಕ್ಕೆ ಕೂಡಲೇ ಕ್ರಮವಹಿಸಬೇಕು.ಇರುವ ಸಿಬ್ಬಂದಿಗಳಿಗೆ ಸಮಸ್ಯೆಯಾಗದಂತೆ ಕೋವಿಡ್ ಸೇವೆಯಲ್ಲೂ ಸಮಸ್ಯೆ ಬಾರದಂತೆ ಕ್ರಮವಹಿಸಬೇಕು. ಸೋಂಕಿಗೊಳಗಾದವರಿಗೆ ಸಕಾಲದಲ್ಲಿ ಔಷಧಿ ಕಿಟ್ ನೀಡಬೇಕು. ಆಶಾಕಾರ್ಯಕರ್ತೆಯರಿಗೆ ಅಗತ್ಯವಿರುವ ಉತ್ತಮ ಗುಣಮಟ್ಟದ ಪಲ್ಸ್ ಆಕ್ಸಿಮೀಟರ್ ಮತ್ತು ಕೋವಿಡ್ ಪ್ರೊಟೆಕ್ಷನ್ ಕಿಟ್ ಗಳನ್ನು ಒದಗಿಸಬೇಕು.

ತುರ್ತು ಅಗತ್ಯವಿರುವ ವೆಂಟಿಲೇಟರ್ ಬೆಡ್ ಗಳನ್ನು ಹೆಚ್ಚಿಸಲು ಕ್ರಮವಹಿಸಬೇಕು. ಜಿಲ್ಲಾಸ್ಪತ್ರೆ ಮತ್ತು ತಾಲೂಕು ಆಸ್ಪತ್ರೆಯಲ್ಲಿ ಆದಷ್ಟು ಶೀಘ್ರ ಆಕ್ಸಿಜನ್ ಪ್ಲಾಂಟನ್ನು ಕಾರ್ಯಾರಂಭ ಮಾಡಬೇಕು. ಜಿಲ್ಲಾ ಉಸ್ತವಾರಿ ಸಚಿವರು ಜಿಲ್ಲೆಯಲ್ಲಿಯೇ ವಾಸ್ತವ್ಯವಿದ್ದು ಶಾಸಕರು ಮತ್ತು ಜನಪ್ರತಿನಿಧಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಕೋವಿಡ್ ಸಂಬಂಧೀತ ಪ್ರಗತಿ ಪರಿಶೀಲನೆ ನಡೆಸಿ ಚುರುಕುಮುಟ್ಟಿಸುವ ಕೆಲಸಮಾಡಬೇಕಿದೆ.

ಉಡುಪಿ ಜಿಲ್ಲೆಯಲ್ಲಿ ವ್ಯಾಕ್ಸಿನೇಷನ್ ಕೊರತೆಯಿದ್ದು, ಜಿಲ್ಲೆಗೆ ಅಗತ್ಯವಿರುವ ವ್ಯಾಕ್ಸಿನ್ ಸರಬರಾಜಿಗೆ ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು ಮತ್ತು ಜಿಲ್ಲೆಯ ಎಲ್ಲಾ ಶಾಸಕರು ರಾಜ್ಯ ಮತ್ತು ಕೇಂದ್ರ ಸರಕಾರಗಳ ಮೇಲೆ ಒತ್ತಡ ತಂದು ಹೆಚ್ಚಿನ ಲಸಿಕೆ ಜಿಲ್ಲೆಗೆ ದೊರೆಯುವಂತೆ ಮಾಡುವುದು ಆದ್ಯ ಕರ್ತವ್ಯವಾಗಿದೆ.ಈ ಸಂದರ್ಭದಲ್ಲಿ ಕೊಂಚ ನಿರ್ಲಕ್ಷ್ಯವನ್ನೂ ತಾಳದೇ, ನಿರ್ಲಕ್ಷ್ಯದಿಂದಾಗಬಹುದಾದ ಸಾವು ನೋವಿನ ಘಟನೆಗಳು ಉಡುಪಿ ಜಿಲ್ಲೆಯಲ್ಲಿ ಘಟಿಸದಂತೆ ಹೆಚ್ಚಿನ ಮುನ್ನೆಚ್ಚರಿಕಾ ಕ್ರಮವಹಿಸಬೇಕಾಗಿದೆ.

ಉಡುಪಿ ಜಿಲ್ಲೆಯ ಜನಪ್ರತಿನಿಧಿಗಳಳು ಆರಂಭದಲ್ಲಿ ತೋರಿದ ಆಸಕ್ತಿ ಸೋಂಕು ತೀವ್ರಗೊಂಡ ಸಂದರ್ಭದಲ್ಲಿ ತೋರಿಸದೆ ಇರುವುದು ಬೇಸರದ ಸಂಗತಿ. ಕೋವಿಡ್ ಆಸ್ವತ್ರೆಗಳಲ್ಲಿ ಕೆಲವೊಂದು ಔಷಧಗಳು ಲಭ್ಯವಿಲ್ಲದೆ ಹೊರಗಿನಿಂದ ರೋಗಿಗಳಿಂದ ತರಿಸತ್ತಿರುವುದು ವಿಫಲ ಆಡಳಿತಕ್ಕೆ ಹಿಡಿದ ಕೈಗನ್ನಡಿ.
ಗ್ರಾಮಪಂಚಾಯತ್ ಟಾಸ್ಕ್ ಪೊರ್ಸಗಳಿಂದ ಸಮರೋಪಾದಿಯಲ್ಲಿ ಕೆಲಸ ಮಾಡಿಸಲು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾದಿಕಾರಿಯವರು ಸಂಪೂರ್ಣ ವಿಫಲರಾಗಿದ್ದಾರೆ. ಸರಕಾರ ಮತ್ತು ಜಿಲ್ಲಾಡಳಿತ ಸೂಕ್ತ ಸಂದರ್ಭದಲ್ಲಿ ಸರಿಯಾದ ತಿರ್ಮಾನ ತೆಗೆದುಕೊಳ್ಳದಿರುವುದುರಿಂದ ಜಿಲ್ಲೆಯಲ್ಲಿ ಇಷ್ಟೊಂದು ಸಾವು ಸಂಭವಿಸಲು ಕಾರಣ. ಜಿಲ್ಲೆಯ ಎಲ್ಲಾ ಆಡಳಿತ ಬಿಜೆಪಿಗೆ ನೀಡಿದ ಜನರ ಋಣ ಸಂದಾಯಕ್ಕಾದರೂ ಜಿಲ್ಲೆಯ ಜನರು ಸಂಕಷ್ಟ ದಲ್ಲಿರುವ ಸಂದರ್ಭದಲ್ಲಿ ಜನಪರ ಕೆಲಸ ಮಾಡಿ ಎಂದು ಹರಿಪ್ರಸಾದ್ ಶೆಟ್ಟಿ ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *

2 + 1 =