ಕುಂದಾಪುರ: ಗ್ರಾಮ ಸ್ವರಾಜ್ಯ ಕೇಂದ್ರದ ಲೋಗೋ ಅನಾವರಣ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಗ್ರಾಮ ಸ್ವರಾಜ್ಯ ಕೇಂದ್ರದ ಲೋಗೋವನ್ನು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಅವರು ಇತ್ತೀಚಿಗೆ ಅನಾವರಣಗೊಳಿಸಿದರು.

Click Here

Call us

Call us

ಈ ಸಂದರ್ಭದಲ್ಲಿ ಕುಂದಾಪುರ ಉಪವಿಭಾಗಾಧಿಕಾರಿ ರಾಜು ಕೆ., ತಹಶಿಲ್ದಾರ್ ಆನಂದಪ್ಪ, ಗ್ರಾಮ ಸ್ವರಾಜ್ಯ ಕೇಂದ್ರದ ಸಂಸ್ಥಾಪಕರಾದ ವೀರೇಂದ್ರ ಎಸ್ ಪೂಜಾರಿ, ರೂಪೇಶ್ ಬೈಂದೂರು, ಅಭಿಷೇಕ್, ನಾಗೇಶ್ ಪೂಜಾರಿ ಇತರರು ಇದ್ದರು.

Click here

Click Here

Call us

Visit Now

ಗ್ರಾಮ ಸ್ವರಾಜ್ಯ ಕೇಂದ್ರ:
ಈ ಗ್ರಾಮ ಸ್ವರಾಜ್ಯ ಕೇಂದ್ರವು ಗ್ರಾಮೀಣ ಭಾಗದಲ್ಲಿ ಉದ್ಯೋಗ ಸೃಷ್ಟಿಯ ಮೂಲಕ ಸದೃಢ ಭಾರತವನ್ನು ಕಟ್ಟುವ ಉದ್ದೇಶ ಹೊಂದಿದೆ. ಗ್ರಾಮೀಣಾಭಿವೃದ್ಧಿ, ಕೃಷಿ ಬಲವರ್ಧನೆ,ಉದ್ಯೋಗ ಸೃಷ್ಟಿ, ಬಡತನ ನಿರ್ಮೂಲನೆಯ ಉದ್ದೇಶದಿಂದ ಉಡುಪಿ ಜಿಲ್ಲೆಯ ಪ್ರತಿ ಗ್ರಾಮಪಂಚಾಯತ್ ಗಳಲ್ಲಿ ಗ್ರಾಮ ಸ್ವರಾಜ್ ಕೇಂದ್ರ ಸ್ಥಾಪನೆಯಾಗುತ್ತಿದೆ.ಮಹಾತ್ಮ ಗಾಂಧಿ ಹಾಗೂ ಎಪಿಜೆ ಕಲಾಂ ಕಂಡ ಕನಸ್ಸನ್ನ ನನಸು ಮಾಡಲು ಯುವಕರ ತಂಡ ಹೊರಟಿದೆ. ಜನರಿಗೆ ಸ್ವಗ್ರಾಮದಲ್ಲೇ ಉದ್ಯೋಗ ನೀಡುವ ಮೂಲಕ ಸದೃಡ ಗ್ರಾಮವನ್ನು ನಿರ್ಮಿಸಬಹುದು. ಕೃಷಿಯಲ್ಲಿ ಕುಂದುಕೊರತೆಗಳನ್ನು ನಿವಾರಿಸಿ, ಬೆಳೆ ವಿವರ, ಹವಾಮಾನ ವರದಿ, ಸರ್ಕಾರಿ ಯೋಜನೆಗಳ ಕುರಿತ ಮಾಹಿತಿ, ರೈತರ ಉತ್ಪನ್ನಕ್ಕೆ ನೇರ ಮಾರುಕಟ್ಟೆ ಕಲ್ಪಿಸಿ ಗ್ರಾಹಕರಿಗೆ ನೀಡುವ ಮೂಲಕ ರೈತರು ಮತ್ತು ಗ್ರಾಹಕರಿಗೆ ನೆರವು, ಬ್ಯಾಂಕಿಂಗ್ ಮತ್ತು ಇತರ ಸೇವೆ ದೊರೆಯುವಂತೆ ಆಗಬೇಕು ಎಂಬ ಉದ್ದೇಶದಿಂದ ಪ್ರತಿ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲೂ ಗ್ರಾಮ ಸ್ವರಾಜ್ಯ ಕೇಂದ್ರ ತೆರೆಯಲಾಗುತ್ತಿದೆ.

 

Call us

Leave a Reply

Your email address will not be published. Required fields are marked *

18 − 16 =