ಎ.22: ಗುರು ಫ್ರೆಂಡ್ಸ್ ಆಶ್ರಯದಲ್ಲಿ ‘ಸುರ್‌ಗುದ್ದ್ 2017’

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಗುರು ಫ್ರೆಂಡ್ಸ್ ರಿ. ಮಯ್ಯಾಡಿ ಸಂಸ್ಥೆಯ ಆಶ್ರಯದಲ್ಲಿ 12ನೇ ಬಾರಿಗೆ ಹೊನಲು ಬೆಳಕಿನ ಪುರುಷರ ಹಾಗೂ ಮಹಿಳೆಯರ ಪ್ರೋ ಮಾದರಿಯ ಅಂತರ್ ಜಿಲ್ಲಾ ಮಟ್ಟದ ಕಬ್ಬಡ್ಡಿ ಪಂದ್ಯಾಟ ’ಸುರ್‌ಗುದ್ದ್ 2017’ ಎಪ್ರಿಲ್ 22ರ ಶನಿವಾರ ಸಂಜೆ ಮಯ್ಯಾಡಿ ಮಹಾಸತಿ ವಠಾರದಲ್ಲಿ ಜರುಗಲಿದೆ.

Call us

ತಿರುಮಲ ಟ್ರೋಫಿ:
ಗುರು ಫ್ರೆಂಡ್ಸ್ ಆಶ್ರಯದಲ್ಲಿ ಜರುಗುವ ಸುರ್‌ಗುದ್ದ್ 2017 – ತಿರುಮಲ ಟ್ರೋಫಿ ವಿಜೇತರಿಗೆ ಭಾರಿ ಬಹುಮಾನ ಕಾದಿದೆ. ಮ್ಯಾಟ್ ಪಿಚ್‌ನಲ್ಲಿ ಜರುಗಲಿರುವ ಪುರುಷ ಹಾಗೂ ಮಹಿಳೆಯರ ಪ್ರತ್ಯೇಕ ತಂಡದ ಕಬ್ಬಡ್ಡಿ ಪಂದ್ಯಾಟದಲ್ಲಿ ವಿಶೇಷ ಆಕರ್ಷಣೆಗಳಿವೆ. ಪುರುಷರ ವಿಭಾಗದಲ್ಲಿ ಪ್ರಥಮ 25,001 ಹಾಗೂ 5 ಅಡಿ ಎತ್ತರದ ಶಾಶ್ವತ ಫಲಕ, ದ್ವೀತಿಯ 15,001 ಹಾಗೂ 4 ಅಡಿ ಎತ್ತರದ ಶಾಶ್ವತ ಫಲಕ, ತೃತೀಯ 8,001 ಹಾಗೂ 3 ಅಡಿ ಎತ್ತರದ ಶಾಶ್ವತ ಫಲಕ ಬಹುಮಾನ ಹಾಗೂ ಎಲ್ಲರಿಗೂ, ಅತಿ ಶಿಸ್ತಿನ ತಂಡ, ಉತ್ತಮ ಹಿಡಿತಗಾರ, ದಾಳಿಗಾರ, ಸವ್ಯಸಾಚಿ ತಂಡ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಬಹುಮಾನಗಳಿವೆ. ಮಹಿಳೆಯರ ವಿಭಾಗದಲ್ಲಿ ಪ್ರಥಮ 10,001 ಹಾಗೂ ದ್ವಿತೀಯ 5,001 ಹಾಗೂ ತೃತೀಯ ಚತುರ್ಥ ಬಹುಮಾನ, ಶಾಶ್ವತ ಫಲಕವಿದೆ. ಉತ್ತಮ ಹಿಡಿತಗಾರ್ತಿ, ದಾಳಿಗಾರ್ತಿ ಹಾಗೂ ಸವ್ಯಸಾಚಿ ಆಟಗಾರ್ತಿಯರಿಗೂ ಬಹುಮಾನವಿದೆ.

ಕಬ್ಬಡ್ಡಿ ಪಂದ್ಯದಲ್ಲಿ ವಿಶೇಷ ಆಕರ್ಷಣೆ:
ಕಬ್ಬಡ್ಡಿ ಪಂದ್ಯಾಟ ಆರಂಭಕ್ಕೂ ಮುನ್ನ ರಿದಂ ಡಾನ್ಸ್ ಗ್ರೂಪ್ ಬೈಂದೂರು ತಂಡದಿಂದ ಸಾಂಸ್ಕೃತಿಕ ರಸಸಂಜೆ, ಆಯ್ದ ಶಾಲಾ ಮಕ್ಕಳಿಂದ ವಿವಿಧ ವಿನೋದಾವಳಿ, ಕೋಟ ಭಗತ್‌ಸಿಂಣ್ ಚಂಡೆ ಬಳಗದಿಂದ ಉರಿಚಂಡೆ ವಾದನ, ಮತ್ತು ಬಸ್ರೂರು ಸೌಮ್ಯ ಡ್ರಾಮಾ ಆರ್ಟ್ಸ್‌ನಿಂದ ಆಕರ್ಷಕ ಗೊಂಬೆ ನೃತ್ಯದೊಂದಿಗೆ ಕಬ್ಬಡ್ಡಿ ಅಂಕಣ ಉದ್ಘಾಟನೆ ನಡೆಯಲಿದೆ. ಪಂದ್ಯಾಟದಲ್ಲಿ ಹೀಗೆ ಹಲವು ವೈವಿಧ್ಯಗಳಿವೆ.

ಗ್ರಾಮೀಣ ಸೊಗಡು ನೆನಪಿಸಿದ್ದ ಕಬ್ಬಡ್ಡಿ:
2016ರಲ್ಲಿ ಗುರು ಫ್ರೆಂಡ್ಸ್ ಆಶ್ರಯದಲ್ಲಿ ತಗ್ಗರ್ಸೆಯಲ್ಲಿ ಜರುಗಿದ್ದ ಕಬ್ಬಡ್ಡಿ ಪಂದ್ಯಾಟ ಗ್ರಾಮೀಣ ಸೊಗಡನ್ನು ನೆನಪಿಸಿತ್ತು. ಎತ್ತಿನ ಬಂಡಿಯ ಮೂಲಕ ಕ್ರೀಡಾಪಟುಗಳು ಕಬ್ಬಡ್ಡಿ ಅಂಕಣ ಪ್ರವೇಶಿಸುವಂತೆ ಮಾಡಿದ್ದು, ಹಳ್ಳಿಮನೆ ಅಟ್ಟಣಿಗೆಯಲ್ಲಿ ಕುಳಿತು ವೀಕ್ಷಕ ವಿವರಣೆ ಹೇಳಿದ್ದು ಕಬ್ಬಡ್ಡಿ ಪಂದ್ಯಾಟದಲ್ಲಿ ಗ್ರಾಮೀಣ ಮೆರಗು ನೀಡಿತ್ತು. ಕಬ್ಬಡ್ಡಿಗೂ ಮೊದಲು ಆಯೋಜಿಸಲಾಗಿದ್ದು ಸಮಾರಂಭದಲ್ಲಿ ಸಾಧಕರಿಗೆ ಸನ್ಮಾನ ಮೊದಲಾದ ಕಾರ್ಯಕ್ರಮಗಳು ಹಮ್ಮಿಕೊಂಡಿದ್ದರು. ಕುಂದಾಪ್ರ ಡಾಟ್ ಕಾಂ ಸುದ್ದಿ.

ಒಟ್ಟಿನಲ್ಲಿ ವಿಭಿನ್ನವಾಗಿ ಕಬ್ಬಡ್ಡಿ ಪಂದ್ಯಾಟ ಆಯೋಜಿಸಿ ಗಮನ ಸೆಳೆದಿದ್ದ ಗುರು ಫ್ರೆಂಡ್ಸ್ ಮಯ್ಯಾಡಿ ತಂಡ ಈ ಭಾರಿಯೂ ಉತ್ತಮ ಪಂದ್ಯಾಟ ನಡೆಸುವ ತಯಾರಿ ನಡೆಸಿದೆ. ಜಿಲ್ಲಾ ಮಟ್ಟದ ವಿವಿಧ ತಂಡಗಳು ಈಗಾಗಲೇ ಹೆಸರು ನೊಂದಾಯಿಸಿದ್ದು, ರೋಚಕ ಪಂದ್ಯಾಟ ನಡೆಯಲಿದೆ. ಇದರೊಂದಿಗೆ ನಡೆಯಲಿರುವ ಸಾಂಸ್ಕೃತಿಕ ಕಾರ್ಯಕ್ರಮಗಳು ಕಾರ್ಯಕ್ರಮದ ಮೆರಗು ಹೆಚ್ಚಿಸಲಿದೆ/ಕುಂದಾಪ್ರ ಡಾಟ್ ಕಾಂ/

Leave a Reply

Your email address will not be published. Required fields are marked *

seventeen + eight =