ಪ್ರಾಚೀನ ಗುರುಕುಲಕ್ಕೆ ಅನ್ವರ್ಥ, ಗುಣಮಟ್ಟದ ಶಿಕ್ಷಣಕ್ಕೆ ಖ್ಯಾತಿವೆತ್ತ ವಕ್ವಾಡಿಯ ಗುರುಕುಲ ಶಿಕ್ಷಣ ಸಂಸ್ಥೆಗಳು

Call us

Call us

Call us

Call us

ಕುಂದಾಪ್ರ ಡಾಟ್ ಕಾಂ ವರದಿ |
ಸುತ್ತಲೂ ಗಿಡಮರಗಳಿಂದ ಕಂಗೊಳಿಸುವ ಪ್ರಶಾಂತ ಪರಿಸರದ ನಡುವೆ ಪ್ರಾಚೀನ ಮಾದರಿಯ ಶಿಕ್ಷಣ ಪದ್ದತಿಯನ್ನು ನೆನಪಿಸುವ ಸುಂದರ ವಾತಾವರಣ. ಇದರ ನಡುವೆ ಆಧುನಿಕ ಶಿಕ್ಷಣದ ಎಲ್ಲಾ ಆಯಾಮಗಳನ್ನು ಒಳಗೊಂಡು ರಾಷ್ಟ್ರ ಮಟ್ಟದಲ್ಲಿ ಗುರುತಿಸಬಹುದಾದ ಉತ್ಕೃಷ್ಟ ಶೈಕ್ಷಣಿಕ ಸಂಸ್ಥೆಯಾಗಿ ಖ್ಯಾತಿವೆತ್ತಿರುವ ಗುರುಕುಲ ಸಮೂಹ ಶಿಕ್ಷಣ ಸಂಸ್ಥೆಗಳು. ಕ್ಯಾಂಪಸ್‌ನ ಹೊರನೋಟದಲ್ಲೇ ಒಂದು ಸಾತ್ವಿಕ ಶೈಕ್ಷಣಿಕ ವಾತಾವರಣ ಮನಸ್ಸಿನ ಒಡಮೂಡುತ್ತದೆ. ನೋಟಕ್ಕೆ ನಿಲುಕಿದಂತೆ ಎಲ್ಲವೂ ಅಚ್ಚುಕಟ್ಟಾಗಿ ಅನುಷ್ಠಾನಗೊಂಡಿದೆ. ಕುಂದಾಪುರ ತಾಲೂಕಿನ ವಕ್ವಾಡಿಯಲ್ಲಿರುವ ಪ್ರತಿಷ್ಠಿತ ಗುರುಕುಲ ಪಬ್ಲಿಕ್ ಸ್ಕೂಲ್ ಹಾಗೂ ಗುರುಕುಲ ಪಿಯು ಕಾಲೇಜು ತನ್ನದೇ ಆದ ಹತ್ತಾರು ವೈಶಿಷ್ಟ್ಯತೆಗಳಿಂದ ಇಂದು ಮನೆಮಾತಾಗಿದೆ.

Call us

Click Here

Click here

Click Here

Call us

Visit Now

Click here

ಶಿಕ್ಷಣವೂ ಅರಿವು, ಉದ್ಯೋಗವನ್ನು ನೀಡುವುದರ ಜೊತೆಗೆ ಅದು ಪ್ರತಿ ವಿದ್ಯಾರ್ಥಿಯನ್ನು ಒಬ್ಬ ಸಜ್ಜನ ನಾಗರಿಕನನ್ನಾಗಿಸಬೇಕು ಎಂಬ ಮಾತಿಗೆ ಕಟಿಬದ್ಧರಾಗಿ, ವಿಶ್ವಾಸವೇ ನಮ್ಮ ಯಶಸ್ಸೆಂಬ ಧ್ಯೇಯವಾಕ್ಯದೊಂದಿಗೆ ಬಾಂಡ್ಯ ಎಜುಕೇಶನಲ್ ಟ್ರಸ್ಟ್ ಮೂಲಕ ಆರಂಭಗೊಂಡ ಗುರುಕುಲ ಸಮೂಹ ಶಿಕ್ಷಣ ಸಂಸ್ಥೆಗಳು ಇಂದು ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯೆಯ ಬೆಳಕು ಚಲ್ಲಿ ಆಂತರ್ಯದಲ್ಲಿ ಜ್ಞಾನಜ್ಯೋತಿಯನ್ನು ಬೆಳಗಿಸಿದೆ. |ಕುಂದಾಪ್ರ ಡಾಟ್ ಕಾಂ ವರದಿ|

ಸುಂದರ ಪರಿಸರ, ಶಿಕ್ಷಣಕ್ಕೆ ಪೂರಕ ವಾತಾವರಣ, ನುರಿತ ಭೋದಕ-ಭೋದಕೇತರರು
ವಕ್ವಾಡಿ ಗ್ರಾಮದ ಸುಮಾರು 36 ಎಕರೆ ವಿಶಾಲ ಪ್ರದೇಶದಲ್ಲಿ ಗಿಡಮರಗಳ ಮಗ್ಗುಲಲ್ಲಿರುವ ಅನುಪಮ್ ಎನ್‌ಕ್ಲೇವ್‌ದಲ್ಲಿ ತಲೆಯೆತ್ತಿ ನಿಂತಿರುವ ಗುರುಕುಲ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ 2015-16ನೇ ಸಾಲಿನಲ್ಲಿ 1,400 ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡಿದ್ದಾರೆ. ಗುರುಕುಲ ಪದವಿಪೂರ್ವ ಶಿಕ್ಷಣದ ವಿಜ್ಞಾನ ಮತ್ತು ಕಾಮರ್ಸ್ ವಿಭಾಗ, ಗುರುಕುಲ ಪಬ್ಲಿಕ್ ಸ್ಕೂಲ್‌ನಲ್ಲಿ ಕಿಂಡರ್ ಗಾರ್ಡ್‌ನಿಂದ ಹತ್ತನೇ ತರಗತಿಗಳಿಗೆ 60ಕ್ಕೂ ಹೆಚ್ಚು ಮಂದಿ ನುರಿತ ಭೋದಕ ವರ್ಗ. ಜ್ಞಾನಾರ್ಜನೆಗೆ ಪೂರಕ ವಾತಾವರಣ ಕಲ್ಪಿಸಲು ಬೋಧಕೇತರ ವರ್ಗ. ಎಲ್ಲವನ್ನು ಸಮನ್ವಯ ಮಾಡಿಕೊಂಡು ಉತ್ಕೃಷ್ಣ ಶಿಕ್ಷಣದ ಗುರಿ ಹೊತ್ತ ಆಡಳಿತ ಮಂಡಳಿ. ಇವೆಲ್ಲದರ ಜೊತೆಗೆ ಯಾವುದೇ ಸದ್ದುಗದ್ದಲವಿಲ್ಲದೇ ಜ್ಞಾನಾರ್ಜನೆಗೆ ಹೇಳಿ ಮಾಡಿಸಿದಂತಹ ಪೂರಕ ವಾತಾವರಣ.

ಆಧುನಿಕ ಶಿಕ್ಷಣ ಪದ್ಧತಿಗೆ ಅನುಗುಣವಾಗಿಯೇ ಸುಸಜ್ಜಿತ ಕಟ್ಟಡ, ವ್ಯವಸ್ಥಿತ ಪ್ರಯೋಗಾಲಯ, ದೃಶ್ಯ-ಶ್ರವಣ ಬೋಧನಾ ಉಪಕರಣಗಳು, ಸ್ಮಾರ್ಟ್ ಕ್ಲಾಸ್, ಕಂಪ್ಯೂಟರ್ ತರಗತಿಗಳು, ಅತ್ಯುತ್ತಮ ಪುಸ್ತಕಗಳ ಸಂಗ್ರಹದ ಗ್ರಂಥಾಲಯ, ವಿಜ್ಞಾನ ವಿಷಯಗಳ ಸ್ವತಂತ್ರ ಅಧ್ಯಯನಕ್ಕೆ ಗ್ಯಾನ್ ಲ್ಯಾಬ್ ಸೇರಿದಂತೆ ಹತ್ತು ಹಲವು ಸೌಕರ್ಯಗಳನ್ನು ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಮುತುವರ್ಜಿ ವಹಿಸಿ ಒದಗಿಸಲಾಗಿದೆ.

[quote font_size=”15″ bgcolor=”#ffffff” bcolor=”#f7cc22″ arrow=”yes” align=”right”]ದಾಖಲೆಯ ಫಲಿತಾಂಶ
ಗುರುಕುಲದ ವಿದ್ಯಾರ್ಥಿಗಳು ಪ್ರತಿ ಶೈಕ್ಷಣಿಕ ವರ್ಷದಲ್ಲೂ ಉತ್ತಮ ಫಲಿತಾಂಶ ದಾಖಲಿಸಿದ್ದಾರೆ. ಗುರುಕುಲ ಪಬ್ಲಿಕ್ ಸ್ಕೂಲ್ ಹಾಗೂ ಪಿಯು ವಿಭಾಗದಲ್ಲಿ ಶೇ.100 ಫಲಿತಾಂಶವನ್ನು ಪಡೆದ ಹೆಗ್ಗಳಿಕೆ ಸಂಸ್ಥೆಯದ್ದು. ಸ್ವರ್ಧಾತ್ಮಕ ಪರೀಕ್ಷೆಗಳಲ್ಲಿಯೂ ಗುರುಕುಲದ ವಿದ್ಯಾರ್ಥಿಗಳು ಉತ್ತಮ ಸಾಧನೆ ತೋರುತ್ತಿದ್ದಾರೆ.[/quote]

Call us

ರಾಜ್ಯದಲ್ಲೇ ಮೊದಲು ಫೌಂಡೇಶನ್ ಕೋರ್ಸ್. ಪ್ರತಿವರ್ಷವೂ ಸ್ವರ್ಧಾತ್ಮಕ ಪರೀಕ್ಷೆಗೆ ಪೂರಕ ಕೋರ್ಸ್
ಗುರುಕುಲದ ಪ್ರತಿ ವಿದ್ಯಾರ್ಥಿಯ ಬಗೆಗೂ ಸಂಸ್ಥೆ ವಹಿಸುವ ಕಾಳಜಿ ಮತ್ತು ಉತ್ತಮವಾದ ಶೈಕ್ಷಣಿಕ ವಾತಾವರಣವನ್ನು ನಿರ್ಮಿಸುವಲ್ಲಿ ಗುರುಕಲ ಕೈಗೊಂಡ ಕಾರ್ಯಗಳು ಶಿಕ್ಷಣ ತಜ್ಞರಿಂದ ಪ್ರಶಂಸೆಗೆ ಪ್ರಾತ್ರವಾಗಿದೆ. ಶಿಕ್ಷಣ, ಕ್ರೀಡೆ ಹಾಗೂ ಕಲಾ ಕ್ಷೇತ್ರದ ಸಾಧಕರು ಶಿಕ್ಷಣ ಸಂಸ್ಥೆಗೆ ಆಗಾಗ್ಗೆ ಸಂದರ್ಶಿಸಿ ವಿದ್ಯಾರ್ಥಿಗಳನ್ನು ಹುರಿದುಂಬಿಸುವ ಪ್ರಕ್ರಿಯೆ ಸಂಸ್ಥೆಯ ಆರಂಭಗೊಂಡಾಗಿನಿಂದಲೂ ನಡೆದು ಬಂದಿದೆ.

ತರಗತಿಯ ಪಠ್ಯದೊಂದಿಗೆ ಆ ವಿಷಯದಲ್ಲಿ ವಿಧ್ಯಾರ್ಥಿಗಳನ್ನು ಮತ್ತಷ್ಟು ನುರಿತರನ್ನಾಗಿಸುವ ಮತ್ತು ಸ್ವರ್ಧಾತ್ವಕ ಪರೀಕ್ಷೆಗಳನ್ನು ಎದುರಿಸಲು ಬೇಕಾದ ಮಾಹಿತಿಯನ್ನು ಸಂಸ್ಥೆಯಲ್ಲಿ ಆಗಿಂದಾಗ್ಗೆ ನೀಡುತ್ತಾ ಬರಲಾಗುತ್ತಿದೆ. ಪಿಯುಸಿ, ಸಿಇಟಿ, ಕಾಮೆಡ್-ಕೆ, ಜೆಇಇ-ಮೈನ್ಸ್ & ಅಡ್ವಾಸ್ಸ್, ಮೆಡಿಕಲ್ ಮತ್ತು ಸಿಪಿಟಿ ಕೋರ್ಸ್‌ಗಳನ್ನು ಅಗತ್ಯ ವಿದ್ಯಾರ್ಥಿಗಳಗೆ ಪ್ರತಿವರ್ಷವೂ ನೀಡುತ್ತಿರುವುದರಿಂದ ಸಂಸ್ಥೆಯ ವಿದ್ಯಾರ್ಥಿಗಳು ಪ್ರತಿ ಪರೀಕ್ಷೆಯನ್ನು ಯಶಸ್ವಿಯಾಗಿ ಎದುರಿಸುತ್ತಿದ್ದಾರೆ.

ಕರ್ನಾಟಕದಲ್ಲಿಯೇ ಮೊದಲ ಭಾರಿಗೆ 8ರಿಂದ ಹತ್ತನೇ ತರಗತಿಯ ವಿದ್ಯಾರ್ಥಿಗಳನ್ನು ಸ್ವರ್ಧಾತ್ಮಕ ಪರೀಕ್ಷೆಗೆ ಅಣಿಗೊಳಿಸುವ ನಿಟ್ಟಿನಲ್ಲಿ ಐಐಟಿ ಫೌಂಡೇಶನ್ ಕೋರ್ಸ್ ಆರಂಭಿಸಿದ ಹೆಗ್ಗಳಿಕೆ ಗುರುಕುಲದ್ದು. ಸಂಸ್ಥೆಯು ಹೈದರಬಾದಿನ ನಾರಾಯಣ ಮತ್ತು ಶ್ರಿ ಚೈತನ್ಯ ಇನ್ಸ್ಟಿಟ್ಯೂಟ್ ಮೂಲಕ ಸಿಇಟಿ, ಜೆಇಇ, ಐಐಟಿ ಎಐಪಿಎಚಿಟಿ ಮುಂತಾದ ಪರೀಕ್ಷೆಗೆ ಬೇಕಾದ ತರಬೇತಿಯನ್ನು ನೀಡುತ್ತಿದೆ. ಗುರುಕುಲ ಪಿಯು ಕಾಲೇಜಿನಲ್ಲಿ ವಿಜ್ಞಾನ ಹಾಗೂ ಕಾಮರ್ಸ್ ವಿಭಾಗವಿದೆ. ವಿಜ್ಞಾನ ವಿಭಾಗದಲ್ಲಿ ಪಿಸಿಎಂಬಿ ಮತ್ತು ಪಿಸಿಎಂಸಿ ಕೋರ್ಸ್‌ಗಳು ಲಭ್ಯವಿದ್ದರೇ, ಕಾಮರ್ಸ್ ವಿಭಾಗದಲ್ಲಿ ಬಿಸಿನೆಸ್ ಸ್ಟಡಿಸ್, ಅಕೌಂಟೆನ್ಸಿ, ಸ್ಟಾಟಸ್ಟಿಕ್ಸ್, ಕಂಪ್ಯೂಟರ್ ಸೈನ್ಸ್ ಕೋರ್ಸ್‌ಗಳು ಲಭ್ಯವಿದೆ. |ಕುಂದಾಪ್ರ ಡಾಟ್ ಕಾಂ ವರದಿ|

[quote font_size=”15″ bgcolor=”#ffffff” bcolor=”#f7cc22″ arrow=”yes” align=”left”]ಪ್ರತಿಭಾನ್ವಿತರಿಗೆ ಶುಲ್ಕ ವಿನಾಯಿತಿ
ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುಕುಲ ಪ್ರೋತ್ಸಾಹಿಸುತ್ತದೆ. ಪದವಿಪೂರ್ವ ಶಿಕ್ಷಣಕ್ಕೆ ಸೇರಬಯಸುವ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಿದೆ. ಎಸ್.ಎಸ್.ಎಲ್.ಸಿಯಲ್ಲಿ ಶೇ.95 ಹೆಚ್ಚು ಅಂಕಗಳಿಸುವ ವಿದ್ಯಾರ್ಥಿಗಳಿಗೆ ಸಂಸ್ಥೆಯಲ್ಲಿ ಸಂಪೂರ್ಣ ಶಿಲ್ಕು ವಿನಾಯಿತಿ ಇದ್ದು, ಶೇ.90 ಹೆಚ್ಚು ಅಂಕಗಳಿಸುವ ವಿದ್ಯಾರ್ಥಿಗಳಿಗೆ 50%  ಶುಲ್ಕ ವಿನಾಯಿತಿಯನ್ನು ಸಂಸ್ಥೆ ನೀಡುತ್ತಿದೆ.[/quote]

ಶಿಕ್ಷಣದೊಂದಿಗೆ ವಿದ್ಯಾರ್ಥಿಗಳ ಬೌದ್ಧಿಕ ವಿಕಾಸಕ್ಕೆ ಆದ್ಯತೆ
ಶಿಕ್ಷಣದಷ್ಟೇ ಕಲೆ ಹಾಗೂ ಕ್ರೀಡಾ ಚಟುವಟಿಕೆಗಳಿಗೆ ಸಂಸ್ಥೆ ಪ್ರಾಮುಖ್ಯತೆ ನೀಡಿದೆ. ಅನಿಲ್ ಕುಂಬ್ಳೆಯಂತಹ ಕ್ರಿಕೆಟ್ ದಿಗ್ಗಜರನ್ನು ಸಂಸ್ಥೆ ಬರಮಾಡಿಕೊಂಡು ಟೆನ್ವಿಕ್ ಸ್ಟೋರ್ಟ್ಸ್ ಕ್ರಿಕೆಟ್ ಆರಂಭಿಸಿದೆ. ಕುದುರೆ ಸವಾರಿ, ಚೆಸ್ ತರಬೇತಿ, ಯೋಗ ತರಬೇತಿ, ಸ್ಕೆಟಿಂಗ್, ಕರಾಟೆ ಮುಂತಾದ ವಿಶೇಷ ಪರಿಣತಿಯ ಕ್ರೀಡೆಗಳನ್ನು ವಿದ್ಯಾರ್ಥಿಗಳಿಗೆ ಕಲಿಸಲಾಗುತ್ತಿದೆ. ಸಾದೃಶ್ಯ ಎಂಬ ಆರ್ಟ್ ಗ್ಯಾಲರಿಯನ್ನು ಸಂಸ್ಥೆಯಲ್ಲಿಯೂ ನಿರ್ಮಿಸಿರುವುದು ಮತ್ತು ರಾಜ್ಯ ಮಟ್ಟದ ಚಿತ್ರಕಲಾ ಶಿಬಿರಗಳು, ಸಾಹಿತ್ಯ, ನೃತ್ಯ, ಸಂಗೀತಕ್ಕೆ ಸೇರಿದ ವಿವಿಧ ಕಾರ್ಯಕ್ರಮಗಳು, ರಾಜ್ಯ ಮಟ್ಟದ ಗಾಳಿಪಟ ಉತ್ಸವ, ಅಜ್ಜ-ಅಜ್ಜಿಯಯಂದಿರ ದಿನಾಚರಣೆ, ಹಸಿರು ದಿನಾಚರಣೆ ಮುಂತಾದ ಕಾರ್ಯಕ್ರಮಗಳನ್ನು ಆಗಾಗ್ಗೆ ಆಯೋಜಿಸುತ್ತಿರುವುದು ಸಂಸ್ಥೆಯ ಕಲಾಸಕ್ತಿಯನ್ನು ಬಿಂಬಿಸುತ್ತದೆ. ಎನ್‌ಸಿಸಿ, ಎನ್‌ಎಸ್‌ಎಸ್, ವ್ಯಕ್ತಿತ್ವ ವಿಕಾಸನ ಶಿಬಿರ, ವಿವಿಧ ಕಾರ್ಯಾಗಾರಗಳು ಕೂಡ ಸಂಸ್ಥೆಯ ಪಠ್ಯೇತರ ಚಟುವಟಿಕೆಗಳಲ್ಲಿ ಸೇರಿಕೊಂಡಿದೆ. ವಿದ್ಯಾರ್ಥಿಗಳಿಗೆ ಪರಿಸರದೊಂದಿಗೆ ನಂಟು ಬೆಳೆಸುವ ಉದ್ದೇಶದಿಂದ ಸಂಸ್ಥೆಯ ವಿಶೇಷವಾಗಿ ಔಷಧಿ ಸಸ್ಯಗಳ ತೋಟವನ್ನೇ ಮಾಡಿ ಪರಿಸರ ಕಾಳಜಿ ಮೆರೆದಿದೆ. ಸಂಸ್ಥೆಯ ವಾರ್ಷಿಕೋತ್ಸವದಲ್ಲಿ ವಾರ್ಷಿಕ ಹಬ್ಬದಂತೆ ಮಾರ್ಪಟ್ಟು ವಿದ್ಯಾರ್ಥಿಗಳ ಪಠ್ಯೇತರ ಪ್ರತಿಭೆಗಳು ಅನಾವರಣಗೊಳಿಸಿತ್ತಿದೆ. |ಕುಂದಾಪ್ರ ಡಾಟ್ ಕಾಂ ವರದಿ|

ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯ ಅವಲೋಕನ, ಹಾಸ್ಟೆಲ್ ಸೌಲಭ್ಯ
ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯ ಅವಲೋಕನ ಗುರುಕುಲದಲ್ಲಿ ನಿರಂತವಾಗಿ ನಡೆಯುತ್ತಿರುತ್ತದೆ. ಶಿಕ್ಷಕ-ರಕ್ಷಕ ಸಭೆ, ವಿದ್ಯಾರ್ಥಿಯ ಶೈಕ್ಷಣಿಕ ಪ್ರಗತಿಯ ಬಗ್ಗೆ ಚರ್ಚೆ ಪೋಷಕರಿಗೆ ತಜ್ಞರಿಂದ ತರಬೇತಿ, ಸ್ಪೋಕನ್ ಇಂಗ್ಲಿಷ್ ತರಬೇತಿ ನಿಡಲಾಗುತ್ತಿದೆ. ಕಲಿಕೆಯಲ್ಲಿ ಹಿಂದಿರುವ ವಿದ್ಯಾರ್ಥಿಗಳಿಗೆ ಸೂಕ್ತ ಸಲಹೆ, ಮಾರ್ಗದರ್ಶನವನ್ನು ಸಂಸ್ಥೆಯಿಂದ ನಿಡಲಾಗುತ್ತಿದೆ.
ದೂರದ ವಿದ್ಯಾರ್ಥಿಗಳಿಗೆ ಉತ್ತಮವಾದ ಹಾಸ್ಟೆಲ್ ಸೌಲಭ್ಯ ಕೂಡ ಗುರುಕುಲದಲ್ಲಿದೆ. ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಯೋಗ, ಧ್ಯಾನ ತರಗತಿಗಳು, ಸಂಜೆ ಕೋಚಿಂಗ್ ಕ್ಲಾಸ್, ಪೌಷ್ಠಿಕ ಆಹಾರ, ಅಂತರ್ಜಾಲ ಸೌಲಭ್ಯ, ಗ್ರಂಥಾಲಯ, ಪ್ರತಿ ವಿಧ್ಯಾರ್ಥಿಗೂ ಆಕರ್ಷಕ ಕೊಠಡಿ ಸೌಲಭ್ಯವಿದೆ. ಕುಂದಾಪುರ ಉಡುಪಿ ತಾಲೂಕಿನಿಂದ ಬರುವ ಮಕ್ಕಳಿಗಾಗಿ ವಾಹನ ಸೌಕರ್ಯವಿದೆ.

ಪ್ರತಿಷ್ಠಿತ Gurukula-trusteeಸಂಸ್ಥೆಯ ರೂವಾರಿಗಳು:
ಕಡಿಮೆ ಅವಧಿಯಲ್ಲಿ ಉತ್ಕೃಷ್ಟವಾದ ಶಿಕ್ಷಣವನ್ನು ನೀಡುವ ಮೂಲಕ ಮನೆಮಾತಾಗಿರುವ ಗುರುಕುಲ ಪಬ್ಲಿಕ್ ಸ್ಕೂಲ್ ಹಾಗೂ ಪಿಯು ಶಿಕ್ಷಣ ಸಂಸ್ಥೆಗಳು ಬಾಂಡ್ಯ ಎಜುಕೇಶನಲ್ ಟ್ರಸ್ಟ್ ಆಡಳಿತಕ್ಕೊಳಪಟ್ಟಿದೆ. ಟ್ರಸ್ಟ್‌ನ ಸ್ಥಾಪಕಾಧ್ಯಕ್ಷರಾಗಿ ಸಾಮಾಜಿಕ, ಧಾರ್ಮಿಕ ರಂಗದಲ್ಲಿ ತೊಡಗಿಸಿಕೊಂಡಿರುವ ಶಿಕ್ಷಣ ಚಿಂತಕ ಬಿ. ಅಪ್ಪಣ್ಣ ಹೆಗ್ಡೆ ಅವರಿದ್ದರೇ, ಸಂಸ್ಥೆಯ ಸರ್ವತೋಮುಖ ಬೆಳವಣಿಗೆಯಲ್ಲಿ ಟ್ರಸ್ಟೀಗಳಾದ ಬಾಂಡ್ಯ ಸುಭಾಶ್ಚಂದ್ರ ಶೆಟ್ಟಿ ಹಾಗೂ ಅನುಪಮಾ ಎಸ್. ಶೆಟ್ಟಿ ಶ್ರಮಿಸುತ್ತಿದ್ದಾರೆ. ಹೊಸ ಹೊಸ ಪರಿಕಲ್ಪನೆಗಳ ಮೂಲಕ ನಿರಂತರವಾಗಿ ಶೈಕ್ಷಣಿಕ ಸಾಧನೆಯನ್ನು ತೋರುತ್ತಿರುವುದಲ್ಲದೇ, ಕಲೆ, ಸಾಹಿತ್ಯ, ಸಂಗೀತ, ಕ್ರೀಡಾ ಕ್ಷೇತ್ರದಲ್ಲಿಯೂ ವಿದ್ಯಾರ್ಥಿಗಳ ಆಸಕ್ತಿಗನುಗುಣವಾಗಿ ಕಲಿಗೆ ನೆರವಾಗುವ ಮೂಲಕ ಗುರುಕುಲ ಬದುಕಿನ ಶಿಕ್ಷಣನವನ್ನು ಯಶಸಿಯಾಗಿ ನೀಡುತ್ತಿರುವುದರ ಹಿಂದೆ ಇವರುಗಳ ದೊಡ್ಡ ಶ್ರಮವಿದೆ. ಶಿಕ್ಷಣದ ನೈಜ ಉದ್ದೇಶವನ್ನು ಸಾರ್ಥಕ್ಯಗೊಳಿಸುವಲ್ಲಿ ಗುರುಕುಲ ಯಶಸ್ವಿಯಾಗಿದೆ.

ಗುರುಕುಲ ಇಲ್ಲಿದೆ:

ಗುರುಕುಲ ಪಬ್ಲಿಕ್ ಸ್ಕೂಲ್ & ಪಿಯು ಕಾಲೇಜು
ಬಾಂಡ್ಯ ಎಜುಕೇಶನಲ್ ಟ್ರಸ್ಟ್
ಅನುಪಮಾ ಎನ್‌ಕ್ಲೇವ್, ವಕ್ವಾಡಿ, ಕೋಟೇಶ್ವರ
ಕುಂದಾಪುರ ತಾಲೂಕು ಉಡುಪಿ ಜಿಲ್ಲೆ – 576257
Ph : +91 8254 262887, 311397
Mob : +91 94820 98367

Email : gurukulpublicschool@gmail.com

Website : www.bhandyagurukula.com

ರೆಸ್ಪಾನ್ಸ್ ಕಂಟೆಂಟ್

Gurukula1Gurukula Public school1 Gurukula Public school2 Gurukula Public school3 Gurukula Public school4 Gurukula Public school5 Gurukula Public school6 Gurukula Public school7Gurukula12Gurukula PU1Gurukula PU3Gurukula PU4Gurukula PU5

Leave a Reply

Your email address will not be published. Required fields are marked *

fifteen + twelve =