ವಕ್ವಾಡಿ ಗುರುಕುಲ ವಿದ್ಯಾಸಂಸ್ಥೆಯಲ್ಲಿ 12ನೇ ವಾರ್ಷಿಕೋತ್ಸವ ಹಾಗೂ ಸಾಂಸ್ಕ್ರತಿಕ ಕಲರವ

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಪರಿಪೂರ್ಣತೆ ಮತ್ತು ಪರಿಪಕ್ವತೆ ಸಾಧನೆ ಎಂಬ ನಾಣ್ಯದ ಎರಡು ಮುಖಗಳಿದ್ದಂತೆ. ವಿದ್ಯಾರ್ಥಿಗಳು ತಮ್ಮ ಶಾಲಾ ಮತ್ತು ಕಾಲೇಜು ಹಂತಗಳಲ್ಲಿ ವಿಷಯವಾರು ಪರಿಕಲ್ಪನೆಗಳನ್ನು ಮಾತ್ರ ಕರಗತ ಮಾಡಿಕೊಳ್ಳದೇ, ಜೀವನದ ಮೌಲ್ಯದ ಬಗ್ಗೆ ಸಂಪೂರ್ಣವಾದ ಅರಿವನ್ನು ತಂದುಕೊಳ್ಳಬೇಕು. ಯಾವ ವಿದ್ಯಾಸಂಸ್ಥೆ ವಿದ್ಯಾರ್ಥಿಗಳ ಸಮಗ್ರ ವಿಕಾಸಕ್ಕೆ ವಿಫುಲವಾದ ಅವಕಾಶವನ್ನು ಹಾಗೂ ವೇದಿಕೆಯನ್ನು ನಿರ್ಮಾಣಮಾಡಿಕೊಡುತ್ತದೆಯೋ ಅಂತಹ ಶಿಕ್ಷಣ ಸಂಸ್ಥೆ ಸಮಾಜದ ಮುಂದಿನ ಆಶೋತ್ತರಗಳನ್ನು ಈಡೇರಿಸಲು ಉತ್ತಮ ವೇದಿಕೆಯಾಗುತ್ತದೆ ಎಂದು ಗುರುಕುಲ ವಿದ್ಯಾಸಂಸ್ಥೆಯ 12ನೇ ವರ್ಷದ ವಾರ್ಷಿಕೋತ್ಸವದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ  ಎಮ್.ಜಿ.ಎಮ್ ಕಾಲೇಜು ಉಡುಪಿ ನಿರ್ವತ್ತ ಪ್ರಾಂಶುಪಾಲರು ಕುಸುಮ ಕಾಮತ್ ತಮ್ಮ ಅನುಭವನ್ನು ಹಂಚಿಕೊಂಡರು.

Call us

Call us

ಗುರುಕುಲ ವಿದ್ಯಾಸಂಸ್ಥೆಯ ವಿಶಾಲವಾದ ಆವರಣದಲ್ಲಿ ರಂಗು ರಂಗಿನ ಬೆಳಕಿನ ನಡುವೆ ತನ್ನ 12ನೇ ವರ್ಷದ ವಾರ್ಷಿಕೋತ್ಸವವನ್ನು ಆಚರಿಸಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಸಂಸ್ಥಾಪಕರಾದ ಶ್ರೀ.ಬಸ್ರೂರು ಅಪ್ಪಣ್ಣ ಹೆಗ್ಡೆ ರವರು ವಹಿಸಿದ್ದರಲ್ಲದೇ ತಮ್ಮ ಅಧ್ಯಕ್ಷೀಯ ಮಾತುಗಳಲ್ಲಿ ಗುರುಕುಲ ಹೇಗೆ ಸಮಾಜಮುಖಿ ಶಿಕ್ಷಣ ಸಂಸ್ಥೆಯಾಗುದೆ ಹಾಗೂ ಇದರ ಮುನ್ನೋಟದ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು.

ಈ ಕಾರ್ಯಕ್ರಮದಲ್ಲಿ ಬಾಂಡ್ಯಾ ಏಜ್ಯುಕೇಶನ್ ನ ಜಂಟಿ ಕಾರ್ಯನಿರ್ವಾಹಕರುಗಳಾದ  ಸುಭಾಶ್ಚಂದ್ರ ಶೆಟ್ಟಿ ಹಾಗೂ ಅನುಪಮ.ಎಸ್.ಶೆಟ್ಟಿ ಉಪಸ್ಥಿತರಿದ್ದರು. ಶೈಕ್ಷಣಿಕ ವರ್ಷ 2016-17 ರ ವಾರ್ಷಿಕ ಪರೀಕ್ಷೇಯಲ್ಲಿ ಅತೀ ಹೆಚ್ಚು ಅಂಕಗಳನ್ನು ಪಡೆದ ಎಲ್ಲಾ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ನೀಡಿ ಪ್ರೋತ್ಸಾಹಿಸಲಾಯಿತು.

Call us

Call us

ಗುರುಕುಲ ವಿದ್ಯಾಸಂಸ್ಥೆಯ ಪ್ರಾಂಶುಪಾಲರಾದ ಸಾಯಿಜು.ಕೆ.ಆರ್.ನಾಯರ್ ಹಾಗೂ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಸನ್ನೀ ಪಿ ಜಾನ್ ಕ್ರಮವಾಗಿ ಶಾಲಾ ಹಾಗೂ ಕಾಲೇಜಿನ ವಾರ್ಷಿಕ ವರದಿವಾಚನ ಮಾಡಿದರು.

ಈ ಸಭಾ ಕಾರ್ಯಕ್ರಮವನ್ನು  ಅನಘ ಶೆಟ್ಟಿ ನಿರೂಪಿಸಿದರು. ಅಲ್ಲದೇ,  ದಿಶಾ ಶೆಟ್ಟಿ ಸ್ವಾಗತಿಸಿದರು ಹಾಗೂ ಧೀರಜ್ ಮತ್ತು ವಿನಯ ಕ್ರಮವಾಗಿ ಅತಿಥಿಗಳ ಪರಿಚಯ ಮತ್ತು ಸರ್ವರನ್ನು ವಂದಿಸಿದರು. ತದ ನಂತರ ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕ್ರತಿಕ ಕಲರವವಾಗಿ ನೃತ್ಯೋತ್ಸವ ಸುಮಾರು 5 ಗಂಟೆಗಳ ಕಾಲ ವಿಭಿನ್ನ ವಸ್ತುಗಳನ್ನಿಟ್ಟುಕೊಂಡು ಕಾರ್ಯಕ್ರಮ ಎಲ್ಲರ ಪ್ರಶಂಸೆಗೆ ಪಾತ್ರವಾಯಿತು.

 

Leave a Reply

Your email address will not be published. Required fields are marked *

12 + eleven =