ಕೋಟೇಶ್ವರದ ಕಿನಾರೆಯಲ್ಲಿ ಗುರುಕುಲ ಗಾಳಿಪಟ ಉತ್ಸವದ ಮೋಡಿ

Click Here

Call us

Call us

ಕುಂದಾಪ್ರ ಡಾಟ್ ಕಾಂ ವರದಿ.
ಕುಂದಾಪುರ: ಬಾನಲ್ಲಿ ಬಣ್ಣದ ಗಾಳಿಪಟ ಚಿಟ್ಟೆಗಳ ಹಾರಾಟ, ಚಾರ್ಲಿ ಚಾಪ್ಲಿನಿಂದ ಹಿಡಿದು, ಮಿಕಿಮೌಸ್ ವರೆಗೆ, ಯಕ್ಷಗಾನ ಬಣ್ಣದ ಒಡ್ಡೋಲಗ ಮೊದಲ್ಗೊಂಡು ಪುಟಾಣಿ ಗಾಳಿಪಟಗಳು ಬಾನೆತ್ತರದಲ್ಲಿ ವೈಯ್ಯಾರದಲ್ಲಿ ವಾಲಿ, ಅಕ್ಕಪಕ್ಕ ತೇಲಿ, ಒಮ್ಮೆ ಕೆಳಕ್ಕೆ ಬಂದು ಮತ್ತೆ ಸರಕ್ಕಂತ ಮೇಲಕ್ಕೇರುವ ಮೂಲಕ ಕೋಡಿಯಲ್ಲಿ ಗಾಳಿಪಟ ಮಾಡಿದ ಮೋಡಿ ಅವರ್ಣಿನೀಯ.

Call us

Call us

Visit Now

ವಕ್ವಾಡಿ ಗುರುಕುಲ ಪಬ್ಲಿಕ್ ಶಾಲೆ ಕೋಟೇಶ್ವರ ಕಿನಾರೆಯಲ್ಲಿ ಮೂರನೇ ಬಾರಿಗೆ ಆಯೋಜಿಸಿದ್ದ ಗಾಳಿಪಟ ಉತ್ಸವ ಆಕರ್ಷಣೆಯ ಕೇಂದ್ರಬಿಂದುವಾಗಿತ್ತು.. ಟೀಮ್ ಮಂಗಳೂರು ಮತ್ತು ಒನ್ ಇಂಡಿಯಾ ಕೈಟ್ ಟೀಮ್ ಕೇರಳ ಉತ್ಸವದಲ್ಲಿ ಪಾಲ್ಗೊಂಡಿತ್ತು. ಕಡಲಬ್ಬರದ ಅಲೆಗಳ ಜೋರಿಗೆ ಗಾಳಿ ಪಟ ಹಾರಿಸುವ ಉಮೇದು ಜೋರಾಗಿಯೇ ನಡೆದಿತ್ತು. ಕಿರಿಕ್ ಪಾರ್ಟಿ ಸಿನೇಮಾ ನಿರ್ದೇಶಕ ರಿಶಬ್ ಶೆಟ್ಟಿ ಹಾಗೂ ಅವರ ಉತ್ಸವದ ಮೆರಗು ಹೆಚ್ಚಿಸಿದ್ದವು. ಒಂದು ಕಡೆ ಗಾಳಿಪಟದೊಟ್ಟಿಗೆ ಸೆಲ್ಫಿ ತೆಗೆದುಕೊಳ್ಳುತ್ತಿದ್ದರೆ, ಮತ್ತಷ್ಟು ಜನ ಸಿನೇಮಾ ಮಂದಿಯೊಟ್ಟಿಗೆ ಸೆಲ್ಫಿ ಕ್ರೇಜಿಗೆ ಬಿದ್ದಿದ್ದರು. ಅಲ್ಲೆ ಅರಳಿದ ಮರಳು ಶಿಲ್ಪ ಕಲೆ ಸಮುದ್ರ ತೀರಕ್ಕೊಂದು ರಂಗು ನೀಡಿದ್ದರೆ, ಗಾಳಿಪಟ ಬಾನೆತ್ತರದಲ್ಲಿ ಬಿಡಿಸಿದ ರಂಗೋಲಿ ಚಿತ್ತಾರ!

Click here

Click Here

Call us

Call us

ಕೋಟೇಶ್ವರದಲ್ಲಿ ಕೇವಲ ಕುಂದಾಪುರ ನಾಗರಿಕಷ್ಟೇ ಅಲ್ಲದೆ ಉಡುಪಿ, ಮಂಗಳೂರು, ಕೇರಳ, ಬೈಂದೂರು, ಭಟ್ಕಳವಲ್ಲದೆ ಗ್ರಾಮೀಣ ಜನರು ಪಾಲ್ಗೊಳ್ಳುವ ಮೂಲಕ ಗಾಳಿಪಟ ಹಾರಿಸಿ ಸಂತಸಪಟ್ಟರು. ಪ್ರಾಥಮಿಕ, ಪ್ರೌಢ ಹಾಗೂ ಪದಿವಿಪೂರ್ವ ವಿದ್ಯಾರ್ಥಿಗಳು ತಾವೇ ಸಿದ್ದ ಪಡಿಸಿದ ಗಾಳಿಮಟ ಹಾರಿಸಿ, ಖುಷಿಪಟ್ಟರೆ ಸಾರ್ವಜನಿಕರು ಗಾಳಿಪಟ ಕೊಂಡು ಹಾರಿಸಿ ಸಂಭ್ರಮಿಸಿದರು. ಕಡಲ ತೀರವಂತೂ ಜನಜಂಗುಳಿಯಲ್ಲಿ ಮಿಂದೆದ್ದಿತು.

Click Here

ಗಾಳಿಮಟ ಆಕಾಶದೆತ್ತರಕ್ಕೆ ಏರಿದ ಸಂಭ್ರಮ ಒಂದೆಡೆಯಾದರೆ, ಇಷ್ಟು ಪ್ರಯತ್ನಿಸದರೂ ಮೇಲಕ್ಕೆಳದೆ ಸತಾಯಿಸುವ ಪಟ ಹಟಕ್ಕೆ ಮೂಡಿದ ನಿರಾಸೆ, ಗಾಳಿಪಟದ ಸೂತ್ರ ಹರಿದು ಹಾರಿ ಹೋದ ನೋವು, ದೊಡ್ಡ ದೊಡ್ಡ ಗಾಳಿಪಠ ಹಾರಿಸಲು ಸೂತ್ರ ಹಿಡಿದ ಓಡುವ ತಂಡದೊಟ್ಟಿಗೆ ಮಕ್ಕಳ ಮರಿಗಳು ಹರ್ಷೋದ್ಘಾರ ಒಂದೇ ಎರೆಡೇ, ಎಲ್ಲವನ್ನೂ ಮರೆತರು ಒಂದಾಗಿ ನಕ್ಕರು. ಇಲ್ಲಿರಲಿಲ್ಲ ಜಾತಿಧರ್ಮದ ಗೊಡವೆ, ಗಾಳಿಮಟ ಒಮ್ಮೆ ಎಲ್ಲರನ್ನೂ ತನ್ನ ಸೆಳೆದು ಪ್ರಪಂಚ ಮರೆಸುವ ಸುಖ ಕೊಟ್ಟಿದ್ದು ಸುಳ್ಳಲ್ಲ. ಗೆದ್ದವರು ಬಹುಮಾನ ಪಡೆದರೆ ಸೋತವರಿಗೆ ಗಾಳಿಪಟ ಹಾರಿಸಿದ ಖುಷಿ.

ಗಾಳಿಪಟ ಉತ್ಸವಕ್ಕೆ ಚಾಲನೆ:
ಅದಾನಿ ಪವರ್ ಕಾಪೊರೇಶನ್ ಜಂಟಿ ಅಧ್ಯಕ್ಷ ಕಿಶೋರ್ ಆಳ್ವಾ ಗಾಲಿಪಟ ಉತ್ಸವಕ್ಕೆ ಚಾಲನೆ ನಿಡಿ ಮಾತನಾಡಿ ಗಾಳಿಪಟ ಮನೋರಣಜನೆಗಷ್ಟೇ ಅಲ್ಲ. ಕಣ್ಣು ಹಾಗೂ ದೈಹಿಕ ಆರೋಗ್ಯಕ್ಕೆ ಪೂರಕ. ಗಾಳಿಪಟ ಹಾರಿಸುವ ಮೂಲಕ ಮಾನಸಿಕ ಏಕಾಗ್ರತೆ, ಸಮಾನತೆ ಭಾತೃತ್ವ ವೃದ್ಧಿಸುತ್ತದೆ. ಗಾಳಿಪಟ ಸ್ಪರ್ಧೆ ಆಯೋಜಿಸುವ ಮೂಲಕ ಗುರುಕುಲ ಪಬ್ಲಿಕ್ ಶಾಲಾ ಆರೋಗ್ಯ ಹಾಗೂ ಸೌಹಾರ್ದ ಸಮಾಜದ ಜೊತೆ ಪ್ರವಾಸೋದ್ಯಮ ಸ್ಥಳಗಳ ಪರಿಚಯಿಸುವ ಕೆಲಸ ಮಾಡಿದೆ ಎಂದು ಶ್ಲಾಘಿಸಿದರು.

ಚಿತ್ರ ನಿರ್ದೇಶಕ ರಿಷಬ್ ಶೆಟ್ಟಿ ಮಾತನಾಡಿ ಗಾಳಿ ಪಟ ಹಾರಿಸುವುದರಿಂದ ಮಾನಸಿಕ ಫಿಟ್‌ನೆಸ್ ವೃದೃದ್ಧಿಸುತ್ತಿದ್ದು, ಗಾಳಿ ಪಟ ಉತ್ಸವ ಶಾಲಾ ಜೀವನದ ನೆನಪುಗಳ ಮರಕಳಿಸುತ್ತುದೆ. ಶಾಲಾ ಮಕ್ಕಳು ವಿದ್ಯಾಭ್ಯಾಸ, ಶಿಕ್ಷಣ ಸಮಸ್ಯೆಗಳ ಬೆಳಕು ಚಿಲ್ಲುವ ಕನ್ನಡ ಸಿನೇಮಾ ಮಾಡಲು ಸಿದ್ಧತೆ ನಡೆಸಿದ್ದು, ಅತೀ ಉದ್ದದ ಅಂದರೆ ಸರಕಾರಿ ಪ್ರಾಥಮಿಕ ಶಾಲೆ ಕಾಸರಗೋಡು, ಕೊಡುಗೆ ರಾಮಣ್ಣ ರೈ ಎಂಬ ಹೆಸರಿಡಲಾಗಿದೆ. ಈ ಸಿನೇಮಾ ಶಿಕ್ಷಣ ವಿಷ್ಯಗಳ ಮೇಲೆ ಬೆಳಕು ಚೆಲ್ಲಲಿದೆ ಎಂದರು.

ರಿಶಬ್ ಶೆಟ್ಟಿ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಬಾಂಡ್ಯ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಬಿ.ಅಪ್ಪಣ್ಣ ಹೆಗ್ಡೆ, ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಜಿಪಂ ಸದಸ್ಯರಾದ ಲಕ್ಷ್ಮೀ ಮಂಜು ಬಿಲ್ಲವ, ಶ್ರೀಲತಾ ಸುರೇಶ್ ಶೆಟ್ಟಿ, ಕೋಟೇಶ್ವರ ಗ್ರಾಪಂ ಅಧ್ಯಕ್ಷೆ ಜನಕಿ ಬಿಲ್ಲವ. ವಕ್ವಾಡಿ ಗುರುಕುಲ ಪಬ್ಲಿಕ್ ಶಾಲೆ ಜಂಟಿ ಕಾರ್ಯನಿರ್ವಾಹಕ ನಿದೇರ್ಶಕರಾದ ಸುಭಾಶ್ಚಂದ್ರ ಶೆಟ್ಟಿ, ಅನುಪಮಾ ಎಸ್.ಶೆಟ್ಟಿ, ಪ್ರಾಂಶುಪಾಲ ಶಾಜಿ ನಾಯರ್, ಶಿಕ್ಷಕ ರಾಮಚಂದ್ರ ಹೆಬ್ಬಾರ್ ಮೊದಲಾದವರು ಜೊತೆಗಿದ್ದರು.

  

Leave a Reply

Your email address will not be published. Required fields are marked *

18 − two =