ಫೆ.5 ಕೋಟೇಶ್ವರದಲ್ಲಿ ಗುರುಕುಲ ಗಾಳಿಪಟ ಉತ್ಸವ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಮಕ್ಕಳಲ್ಲಿ ಗಾಳಿಪಟದ ಬಗೆಗೆ ಆಸಕ್ತಿ ಮೂಡಿಸುವುದರೊಂದಿಗೆ, ಸುಂದರ ಕಡಲ ಕಿನಾರೆಯನ್ನು ಜಾಗತಿಕ ಪ್ರವಾಸಿ ತಾಣವನ್ನಾಗಿ ಬೆಳೆಸುವ ಉದ್ದೇಶಕ್ಕಾಗಿ ವಕ್ವಾಡಿ ಗುರುಕುಲ ಪಬ್ಲಿಕ್ ಶಾಲೆ ಮತ್ತು ಪದವಿ ಪೂರ್ವ ಮಹಾವಿದ್ಯಾಲಯದ ನೇತ್ರತ್ವದಲ್ಲಿ ತಾಲೂಕಿನ ಕೊಟೇಶ್ವರದ ಕಡಲ ಕಿನಾರೆಯಲ್ಲಿ ಫೆಬ್ರವರಿ 5ರ ಭಾನುವಾರ ಅಪರಾಹ್ನ 2:30 ಗಂಟೆಗೆ ವಿದ್ಯಾರ್ಥಿಗಳಿಗಾಗಿ ಗಾಳಿಪಟ ಸ್ಪರ್ಧೆ ಹಾಗೂ ಪ್ರದರ್ಶನದ ಗುರುಕುಲ ಗಾಳಿಪಟ ಉತ್ಸವ ವನ್ನು ನಡೆಯಲಿದೆ.

Click Here

Call us

Call us

ದಶಮಾನೋತ್ಸವದ ಸಂಭ್ರಮಾಚರಣೆಯಲ್ಲಿರುವ ಬಾಂಡ್ಯ ಎಜುಕೇಶನ್ ಟ್ರಸ್ಟ್ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗಾಗಿ ಹಲವಾರು ಸಾಂಸ್ಕ್ರತಿಕ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ವಿಶಿಷ್ಟ ಕಾರ್ಯಕ್ರಮವನ್ನು ನಿರಂತರವಾಗಿ ಆಯೋಜಿಸುತ್ತಿರುವ ಸಂಸ್ಥೆಯು ಸತತ ೩ನೇ ಬಾರಿಗೆ ಗುರುಕುಲ ’ಕೈಟ್ ಫೆಸ್ಟ್ 2017 ಸಾರ್ವಜನಿಕರ ಸಹಕಾರದೊಂದಿಗೆ ಯಶಸ್ವಿಯಾಗಿ ಆಯೋಜಿಸುತ್ತಿದೆ.

Click here

Click Here

Call us

Visit Now

ಮುಗಿಲಂಗಳದಲ್ಲಿ ಕಾಗದದ ಹಕ್ಕಿಗಳ ಕಲರವ ಹಾಗೂ ಸ್ವದೇಶೀಯ ಸಂಸ್ಕ್ರತಿಯನ್ನು ಪ್ರತಿನಿಧಿಸುವ ಈ ಉತ್ಸವದಲ್ಲಿ ಅಂತರಾಷ್ಟ್ರೀಯ ಮಟ್ಟದ ಗಾಳಿಪಟ ಸ್ಪರ್ಧೆಯಲ್ಲಿ ಹಾಗೂ ಲಿಮ್ಕಾ ಬುಕ್ ಆಫ್ ರೆಕಾರ್ಡ್‌ನಲ್ಲಿ ದಾಖಲೆಗೈದ ಟೀಮ್ ಮಂಗಳೂರು ಮತ್ತು ಭಾರತದ ಪ್ರಥಮ ವೃತ್ತಿಪರ ಗಾಳಿಪಟ ತಂಡ ಎಂಬ ಹೆಗ್ಗಳಿಕೆಯ ಒನ್ ಇಂಡಿಯಾ ಕೈಟ್ ಟೀಮ್ ಕೇರಳ ಗಗನದಲ್ಲಿ ಗಾಳಿಪಟದ ಚಿತ್ತಾರವನ್ನು ಬಿಡಿಸಲಿದ್ದಾರೆ. ಕುಂದಾಪ್ರ ಡಾಟ್ ಕಾಂ ಸುದ್ದಿ.

ಪ್ರಾಥಮಿಕ (5-7ನೇ ತರಗತಿ), ಪ್ರೌಢಶಾಲೆ ( 8-10ನೇ ತರಗತಿ) ಹಾಗೂ ಕಾಲೇಜು (ಪಿ.ಯು.ಸಿ) ವಿದ್ಯಾರ್ಥಿಗಳಿಗಾಗಿ ಗಾಳಿಪಟ ಸ್ಪರ್ಧೆ ನಡೆಯಲಿದೆ. ಪ್ರತಿ ವಿಭಾಗದಲ್ಲೂ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ನೀಡಲಾಗುವುದಲ್ಲದೇ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರವನ್ನು ನೀಡಲಾಗುವುದು. ಆಸಕ್ತ ವಿದ್ಯಾರ್ಥಿಗಳು 3-2-17 ರ ಒಳಗೆ ತಮ್ಮ ಹೆಸರನ್ನು ಶಾಲೆಯ ಪರವಾನಿಗೆಯ ಮೇರೆಗೆ ನೊಂದಾಯಿಸಿಕೊಳ್ಳಬಹುದು. ಆಸಕ್ತ ಸಾರ್ವಜನಿಕರು ಈ ಉತ್ಸವದಲ್ಲಿ ಗಾಳಿಪಟವನ್ನು ಹಾರಿಸಲು ಮುಕ್ತವಾದ ಅವಕಾಶವನ್ನು ಕಲ್ಪಿಸಲಾಗಿದೆ.

ಗಾಳಿಪಟ ಉತ್ಸವವನ್ನು ಅದಾನಿ ಗ್ರೂಫ್‌ನ ಕಿಶೋರ್ ಆಳ್ವ, ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಕಿರಿಕ್ ಪಾರ್ಟಿ’ ಚಲನಚಿತ್ರದ ನಿರ್ದೇಶಕ ರಿಶಬ್ ಶೆಟ್ಟಿ ಮತ್ತು ತಂಡದವರು ಭಾಗವಹಿಸಲಿದ್ದಾರೆ. ಬಾಂಡ್ಯ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಬಸ್ರೂರು ಅಪ್ಪಣ್ಣ ಹೆಗ್ಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು ಜಂಟಿ ಕಾರ್ಯನಿರ್ವಹಕರುಗಳಾದ ಸುಬಾಶ್ಚಂದ್ರ ಶೆಟ್ಟಿ ಹಾಗೂ ಅನುಪಮ.ಎಸ್. ಶೆಟ್ಟಿ ಭಾಗವಹಿಸಲಿದ್ದಾರೆ.

Call us

ಗಾಳಿಪಟವನ್ನು ಭಾನೆತ್ತರಕ್ಕೆ ಹಾರಿಸುವ ಸಂಸ್ಕ್ರತಿ ಭಾರತೀಯ ಪ್ರಾಚೀನ ಮನೋರಂಜನಾ ಹವ್ಯಾಸವಾಗಿದ್ದರೂ ಇತ್ತೀಚಿನ ದಿನಗಳಲ್ಲಿ ವಿದೇಶಗಳಲ್ಲಿ ವಿಶೇಷವಾದ ಮನ್ನಣೆಗಳಿವೆ. ಆದರೆ ಇದು ಕೇವಲ ಮನೋರಂಜನೆಯಾಗಿರದೇ ಆರೋಗ್ಯಕ್ಕೂ ಅನುಕೂಲಕರವಾದ ಉತ್ತಮ ಹವ್ಯಾಸವಾಗಿದೆ. ಗಾಳಿಪಟವನ್ನು ಹಾರಿಸುವುದರ ಮೂಲಕ ಏಕಾಗ್ರತೆ, ಒತ್ತಡ, ನಿಭಾಯಿಸುವಿಕೆ, ಸೃಜನಶೀಲತೆ, ದೈಹಿಕಶ್ರಮ ಮತ್ತು ನಿಸರ್ಗದೊಟ್ಟಿಗೆ ಆತ್ಮೀಯತೆಯನ್ನು ಬೆಳೆಸಲು ಗಾಳಿಪಟ ಸಹಾಯಕವಾಗಲಿದೆ. – ಬಾಂಡ್ಯ ಸುಭಾಶ್ಚಂದ್ರ ಶೆಟ್ಟಿ, ಜಂಟಿ ಕಾರ್ಯನಿರ್ವಾಹಕ ನಿರ್ದೇಶಕ ಬಾಂಡ್ಯ ಏಜ್ಯುಕೇಶನ್ ಟ್ರಸ್ಟ್

ಮಕ್ಕಳಲ್ಲಿ ಗಾಳಿಪಟ ಬಗೆಗಿನ ಆಸಕ್ತಿ ಕುಂದುತ್ತಿದೆ. ಗಾಳಿಪಟ ತಯಾರಿಸುವುದು, ಗಾನೆತ್ತರಕ್ಕೆ ಹಾರಿಸುವುದನ್ನು ಮಕ್ಕಳಿಗೆ ಮರಳಿ ತಿಳಿಸುವ ಉದ್ದೇಶದೊಂದಿಗೆ ಗಾಳಿಪಟ ಉತ್ಸವ ಆಯೋಜಿಸಿದ್ದೇವೆ. ಮಕ್ಕಳಿಗೆ ಸ್ವರ್ಧೆಯಿದ್ದು ಸ್ವತಃ ಗಾಳಿಪಟ ತಯಾರಿಸಿ ಸ್ವರ್ಧೆಯಲ್ಲಿ ಭಾಗವಹಿಸಬಹುದಾಗಿದೆ. ಸಾರ್ವಜನಿಕರಿಗೆ ಗಾಳಿಪಟವನ್ನು ಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ. – ಅನುಪಮಾ ಎಸ್. ಶೆಟ್ಟಿ, ಜಂಟಿ ಕಾರ್ಯನಿರ್ವಾಹಕ ನಿರ್ದೇಶಕಿ ಬಾಂಡ್ಯ ಏಜ್ಯುಕೇಶನ್ ಟ್ರಸ್ಟ್

Leave a Reply

Your email address will not be published. Required fields are marked *

5 + twelve =