ವಕ್ವಾಡಿ ಗುರುಕುಲ ಪದವಿಪೂರ್ವ ಮಹಾವಿದ್ಯಾಲಯ: ವಿದ್ಯಾರ್ಥಿಗಳಿಗೆ ಅವಕಾಶಗಳ ಆಗರ!

Click Here

Call us

Call us

ಕುಂದಾಪ್ರ ಡಾಟ್ ಕಾಂ ವರದಿ |
ಶಿಕ್ಷಣದ ಮೂಲ ಉದ್ದೇಶ ವಿಕಾಸ. ಪ್ರಸ್ತುತ ಬದಲಾವಣೆಗೆ ತಕ್ಕಂತೆ ಅಗತ್ಯ ಶಿಕ್ಷಣ ಮಾದರಿಯನ್ನು ಪರಿಣಾಮಕಾರಿಯಾಗಿ ಅಳವಡಿಸಿಕೊಂಡು ವಿಕಾಸದೆಡೆಗೆ ದೃಷ್ಠಿಕೋನವನ್ನಿರಿಸಿಕೊಂಡು ರೂಪುಗೊಂಡ ಬಾಂಡ್ಯ ಶಿಕ್ಷಣ ಸಂಸ್ಥೆಯ ಗುರುಕುಲ ಪದವಿ ಪೂರ್ವ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ ಕುಂದಾಪುರ ತಾಲೂಕಿನಲ್ಲಿಯೇ ವಿಶಿಷ್ಠವಾಗಿ ಕಂಗೊಳಿಸುತ್ತಿದೆ. ಗುರುಕುಲದಲ್ಲಿ ಸಮಗ್ರ ಅಧ್ಯಯನಕ್ಕೆ ಬೇಕಾಗುವ ಕಲಿಕಾ ಸಾಮಗ್ರಿಗಳ ಪೂರೈಕೆ ಪ್ರತಿ ವಿಷಯಗಳ ಅಧ್ಯಾಯಗಳಿಗೂ ಬೇಕಾಗುವಂತಹ ಸಾರಾಂಶ ಮತ್ತು ಕಲಿಕಾ ಪರಿಸರ ಒದಗಿಸುವುದರ ಮೂಲಕ ವಿದ್ಯಾರ್ಥಿಗಳ ಗುಣಮಟ್ಟದಲ್ಲಿ ಪ್ರಶಂಸನಾರ್ಹ ಬದಲಾವಣೆಯನ್ನು ತರುತ್ತಲಿದೆ.

Call us

Call us

Visit Now

ಅಧ್ಯಯನ ಆಯ್ಕೆಯ ವಿಷಯಗಳು:
ಗುರುಕುಲ ಪದವಿಪೂರ್ವ ಮಹಾ ವಿದ್ಯಾಲಯದಲ್ಲಿ ವಿದ್ಯಾರ್ಥಿಗಳು ವಿಜ್ಞಾನ ಅಥವಾ ವಾಣಿಜ್ಯ ವಿಭಾಗವನ್ನು ಆಯ್ಕೆಮಾಡಲು ಅವಕಾಶವಿದೆ. ವಿಜ್ಞಾನ ವಿಷಯದಲ್ಲಿ ಪಿ.ಸಿ.ಎಮ್.ಬಿ ಅಥವಾ ಪಿ.ಸಿ.ಎಮ್.ಸಿ.ಎಸ್ ಎಂಬ ಕೋರ್ಸ್‌ಗಳನ್ನು ಹೊಂದಿದೆ. ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಬ್ಯುಸಿನೆಸ್ ಸ್ಟಡೀಸ್, ಅಕೌಂಟೆನ್ಸಿ, ಸ್ಟ್ಯಾಟ್, ಇಕಾನಾಮಿಕ್ಸ್ ಹಾಗೂ ಕಂಪ್ಯೂಟರ್ ಸಾಯನ್ಸ್ ವಿಷಯಗಳಿವೆ.

Click here

Click Here

Call us

Call us

ನಿರಂತರ ಸಿ.ಇ.ಟಿ. (ಜೆ.ಇ.ಇ, ಐ.ಐ.ಟಿ, ಎ.ಐ.ಪಿ.ಎಮ್.ಟಿ ಹಾಗೂ ಸಿ.ಪಿ.ಟಿ ) ತರಬೇತಿ:
ಕೇವಲ ನಗರ ಪ್ರದೇಶದ ವಿದ್ಯಾರ್ಥಿಗಳಿಗೆ ಲಭ್ಯವಿರುವಂತಹ ಸಿ.ಇ.ಟಿ, ಜೆ.ಇ.ಇ, ಐ.ಐ.ಟಿ, ಎ.ಐ.ಪಿ.ಎಮ್.ಟಿ ಹಾಗೂ ಸಿ.ಪಿ.ಟಿ ವಿಷಯಗಳಿಗೆ ಅತೀ ಕಡಿಮೆ ಶುಲ್ಕದಲ್ಲಿ ಅನುಭವಿ ಮತ್ತು ಕೌಶಲ್ಯಪೂರಿತ ಉಪನ್ಯಾಸಕ ವೃಂದದವರಿಂದ ನಿರಂತರ ಎರಡು ವರ್ಷಗಳ ಕಾಲ ತರಬೇತಿಯನ್ನು ನೀಡುತ್ತಿರುವುದು ಈ ಸಂಸ್ಥೆಯ ಪ್ರಮುಖ ಹೆಜ್ಜೆಯಾಗಿದೆ.

ನಿರಂತರ ಕಾಳಜಿ ಮತ್ತು ಕಳಕಳಿ:
ಪದವಿ ಪೂರ್ವ ಹಂತ ವಿದ್ಯಾರ್ಥಿಗಳ ವೃತ್ತಿಪರ ಬದುಕಿನ ಅಡಿಪಾಯವಾಗಿರುವುದರಿಂದ ಈ ಮಹಾ ವಿದ್ಯಾಲಯ ಪ್ರಥಮ ಮತ್ತು ದ್ವಿತೀಯ ಪಿ.ಯು.ವಿದ್ಯಾರ್ಥಿಗಳ ಕಲಿಕಾ ಮಟ್ಟದ ಅನುಸಾರ ನಿರಂತರ ಪರಿಹಾರ ಬೋಧನೆ ಮತ್ತು ವಿಶೇಷ ಅತಿಥಿ ಉಪಸ್ಯಾಸಕರಿಂದ ಪ್ರತಿ ವಿಷಯಕ್ಕೆ ಮಾರ್ಗದರ್ಶನವನ್ನು ನೀಡುತ್ತಿದೆ. ಇದರಿಂದಾಗಿ ವಿದ್ಯಾರ್ಥಿಗಳಿಗೆ ಬೇಕಾದ ಎಲ್ಲಾ ಮಾಹಿತಿಗಳು ಮತ್ತು ಪ್ರಶ್ನೆಪತ್ರಿಕೆಗೆ ಪೂರಕವಾದ ಸರಳ ಟಿಪ್ಪಣಿಗಳನ್ನು ನಿರಂತರವಾಗಿ ನೀಡುತ್ತಾ ಮಕ್ಕಳ ಆತ್ಮ ವಿಶ್ವಾಸವನ್ನು ಹೆಚ್ಚಿಸುತ್ತಿದೆ.

ಕಲಿಕಾ ಸಾಮಗ್ರಿಗಳ ಮಹಾಪೂರ:
ವಿದ್ಯಾರ್ಥಿಗಳಿಗೊಸ್ಕರ ಪ್ರಶ್ನೆಪತ್ರಿಕಾ ಬ್ಯಾಂಕ್, ಅಂತರ್ಜಾಲ ವ್ಯವಸ್ಥೆ, ಅಸಂಖ್ಯಾ ಪ್ರಕಾಶಕರ ಗುಣಮಟ್ಟದ ಪುಸ್ತಕದ ಸಂಗ್ರಹ ಕಲಿಕಾ ಚಟುವಟಿಕೆಗಳು ಅಲ್ಲದೇ ವಿದ್ಯಾರ್ಥಿಗಳು ಸ್ವತಂತ್ರವಾಗಿ ಪರಿಪೂರ್ಣವಾಗಿ ಕಲಿಕೆಯಲ್ಲಿ ತೊಡಗಿಕೊಳ್ಳಲು ಬೇಕಾದ ಕಲಿಕಾ ಸಾಮಗ್ರಿಗಳನ್ನು ನಿರಂತರವಾಗಿ ಒದಗಿಸಲಾಗುತ್ತಿದೆ.

ಪ್ರತಿಭಾವಂತರಿಗೆ ಪ್ರೋತ್ಸಾಹ:
ರಾಜ್ಯದ ನಾನಾ ಭಾಗಗಳಿಂದ ಬರುವ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ಅನೇಕ ಕಾರ್ಯಕ್ರಮಗಳನ್ನು ಈ ಸಂಸ್ಥೆ ರೂಪಿಸಿದೆ. ಅಲ್ಲದೇ ಅ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅತ್ಯುತ್ತಮ ಅಂಕಗಳನ್ನು ಪಡೆಯಲು ಬೇಕಾದ ವಾತಾವರಣವನ್ನು ಯಾ ಸೌಲಭ್ಯಗಳನ್ನು ಒದಗಿಸುತ್ತಿದೆ.

Click Here

ಅನುಭವಿ ಉಪನ್ಯಾಸಕ ವೃಂದ:
ನಿರಂತರ ಕಲಿಕೆಗೆ ಬೇಕಾದ ಕೌಶಲ್ಯ ಪೂರಿತ ಮತ್ತು ಅನುಭವಿ ಉಪನ್ಯಾಸಕ ವೃಂದದವರು ಆಯಾ ಕಾಲಕ್ಕೆ ಬೇಕಾದ ಬೋಧನೆಗಳನ್ನು ಮಾಡುತ್ತಾ ಮಕ್ಕಳಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸಲು ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಸಮರ್ಥವಾಗಿ ಎದುರಿಸಲು ಬೇಕಾದ ಕೌಶಲ್ಯಗಳನ್ನು ನೀಡುತ್ತಿದೆ.

ಸುಸಜ್ಜಿತವಾದ ಪ್ರಯೋಗಾಲಯ, ಗ್ರಂಥಾಲಯ:
ಭೌತಶಾಸ್ತ್ರ, ರಸಾಯನ ಶಾಸ್ತ್ರ ಹಾಗೂ ಜೀವಶಾಸ್ತ್ರದ ವಿವಿದ ಪರಿಕಲ್ಪನೆಗಳನ್ನು ಅರ್ಥಮಾಡಿಕೊಳ್ಳಲು ಸುಸಜ್ಜಿತವಾದ ಪ್ರಯೋಗಾಲಯವನ್ನು ಈ ಮಹಾವಿದ್ಯಾಲಯ ಹೊಂದಿರುವುದರ ಜೊತೆಗೆ ನುರಿತ ಉಪನ್ಯಾಸಕ ವೃಂದದವರಿಂದ ಪ್ರತಿ ವಾರಾಂತ್ಯದಲ್ಲಿ ಪ್ರಾಯೋಗಿಕ ಅವಧಿಗಳನ್ನಾಗಿ ಮಾರ್ಪಾಡು ಮಾಡಲಾಗಿದೆ. ಅಲ್ಲದೇ ಮಕ್ಕಳಿಗೆ ಓದಲು ಆಸಕ್ತಿಯನ್ನು ಹೆಚ್ಚಿಸಲು ಪ್ರಶಾಂತವಾದ ಗ್ರಂಥಾಲಯದ ವ್ಯವಸ್ಥೆ ಹೊಂದಿದೆ.

ಹಾಸ್ಟೆಲ್ ಸೌಲಭ್ಯ:
ಹುಡುಗ ಮತ್ತು ಹುಡುಗಿಯರಿಗೆ ಪ್ರತ್ಯೇಕವಾದ ಹಾಸ್ಟೆಲ್ ವ್ಯವಸ್ಥೆಯನ್ನು ರಾಜ್ಯದ ನಾನಾ ಭಾಗಗಳಿಂದ ಬರುವ ವಿದ್ಯಾರ್ಥಿಗಳಿಗೆ ಕಲ್ಪಿಸಲಾಗಿದೆ. ವಿಶಾಲವಾದ ಕೊಠಡಿಗಳ ವ್ಯವಸ್ಥೆ, ಶುಚಿತ್ವ ಮತ್ತು ಉತ್ತಮ ಗುಣಮಟ್ಟದ ಪೌಷ್ಠಿಕ ಆಹಾರ , ನಿರಂತರ ವೈದ್ಯಕೀಯ ಸೌಲಭ್ಯ ಇವೆ ಮುಂತಾದ ಸೌಲಭ್ಯಗಳನ್ನು ವಿದ್ಯಾರ್ಥಿಗಳಿಗೆ ಒದಗಿಸಲಾಗುತ್ತಿದೆ. ಇವಲ್ಲದೇ ವಿದ್ಯಾರ್ಥಿಗಳಿಗೆ ಒಳಾಂಗಣ ಕ್ರೀಡೆಗಳು ಹಾಗೂ ಸಮವಸ್ತ್ರದ ಶುಚಿತ್ವಕ್ಕಾಗಿ ಲಾಂಡ್ರಿ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

ಪ್ರತಿಷ್ಠಿತ Gurukula-trusteeಸಂಸ್ಥೆಯ ರೂವಾರಿಗಳು:
ಕಡಿಮೆ ಅವಧಿಯಲ್ಲಿ ಉತ್ಕೃಷ್ಟವಾದ ಶಿಕ್ಷಣವನ್ನು ನೀಡುವ ಮೂಲಕ ಮನೆಮಾತಾಗಿರುವ ಗುರುಕುಲ ಪಬ್ಲಿಕ್ ಸ್ಕೂಲ್ ಹಾಗೂ ಪಿಯು ಶಿಕ್ಷಣ ಸಂಸ್ಥೆಗಳು ಬಾಂಡ್ಯ ಎಜುಕೇಶನಲ್ ಟ್ರಸ್ಟ್ ಆಡಳಿತಕ್ಕೊಳಪಟ್ಟಿದೆ. ಟ್ರಸ್ಟ್‌ನ ಸ್ಥಾಪಕಾಧ್ಯಕ್ಷರಾಗಿ ಸಾಮಾಜಿಕ, ಧಾರ್ಮಿಕ ರಂಗದಲ್ಲಿ ತೊಡಗಿಸಿಕೊಂಡಿರುವ ಶಿಕ್ಷಣ ಚಿಂತಕ ಬಿ. ಅಪ್ಪಣ್ಣ ಹೆಗ್ಡೆ ಅವರಿದ್ದರೇ, ಸಂಸ್ಥೆಯ ಸರ್ವತೋಮುಖ ಬೆಳವಣಿಗೆಯಲ್ಲಿ ಟ್ರಸ್ಟೀಗಳಾದ ಬಾಂಡ್ಯ ಸುಭಾಶ್ಚಂದ್ರ ಶೆಟ್ಟಿ ಹಾಗೂ ಅನುಪಮಾ ಎಸ್. ಶೆಟ್ಟಿ ಶ್ರಮಿಸುತ್ತಿದ್ದಾರೆ. ಹೊಸ ಹೊಸ ಪರಿಕಲ್ಪನೆಗಳ ಮೂಲಕ ನಿರಂತರವಾಗಿ ಶೈಕ್ಷಣಿಕ ಸಾಧನೆಯನ್ನು ತೋರುತ್ತಿರುವುದಲ್ಲದೇ, ಕಲೆ, ಸಾಹಿತ್ಯ, ಸಂಗೀತ, ಕ್ರೀಡಾ ಕ್ಷೇತ್ರದಲ್ಲಿಯೂ ವಿದ್ಯಾರ್ಥಿಗಳ ಆಸಕ್ತಿಗನುಗುಣವಾಗಿ ಕಲಿಗೆ ನೆರವಾಗುವ ಮೂಲಕ ಗುರುಕುಲ ಬದುಕಿನ ಶಿಕ್ಷಣನವನ್ನು ಯಶಸಿಯಾಗಿ ನೀಡುತ್ತಿರುವುದರ ಹಿಂದೆ ಇವರುಗಳ ದೊಡ್ಡ ಶ್ರಮವಿದೆ. ಶಿಕ್ಷಣದ ನೈಜ ಉದ್ದೇಶವನ್ನು ಸಾರ್ಥಕ್ಯಗೊಳಿಸುವಲ್ಲಿ ಗುರುಕುಲ ಯಶಸ್ವಿಯಾಗಿದೆ.

ಗುರುಕುಲ ಇಲ್ಲಿದೆ:
ಶೈಕ್ಷಣಿಕ ವರ್ಷ 2017-18ರ ಗುರುಕುಲ ಪದವಿಪೂರ್ವ ಮಹಾವಿದ್ಯಾಲಯದ ಪ್ರವೇಶಾತಿ ಪ್ರಾರಂಭವಾಗಿದ್ದು, ಆಸಕ್ತ ಪಾಲಕರು ಈ ಕೆಳಗಿನ ವಿಳಾಸಕ್ಕೆ ಸಂಪರ್ಕಿಸಬಹುದಾಗಿದೆ.

Gurukula Pre-University College
Anupam Enclave
Halady road, vakwady
Koteshwara- 576257
Kundapura taluk
Ph:08254-261887,262887
Mob:9482098367
[email protected]
www.bhandyagurukula.com

► ವಕ್ವಾಡಿ ಗುರುಕುಲ ಪಬ್ಲಿಕ್ ಶಾಲೆ: ಮಕ್ಕಳ ಸರ್ವತೋಮುಖ ವಿಕಾಸದ ದಿಕ್ಸೂಚಿ – http://kundapraa.com/?p=23057

Gurukula Public school5Gurukula PU1Gurukula PU3Gurukula PU4Gurukula PU5

Leave a Reply

Your email address will not be published. Required fields are marked *

nine + 3 =