ಸೌತ್ ಏಷ್ಯನ್ ಗೇಮ್ಸ್: ಚಿನ್ನದ ಪದಕ ಗೆದ್ದ ಕುಂದಾಪುರ ಚಿತ್ತೂರಿನ ಯುವಕ

Call us

Call us

ಕುಂದಾಪ್ರ ಡಾಟ್ ಕಾಂ ವಿಶೇಷ ವರದಿ
ಕುಂದಾಪುರ: ಅಸ್ಸಾಂನ ಗುವಾಹಟಿಯಲ್ಲಿ ಜರುಗುತ್ತಿರುವ 12ನೇ ಸೌತ್ ಏಷ್ಯನ್ ಗೇಮ್ಸ್‌ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದ ಕುಂದಾಪುರ ತಾಲೂಕಿನ ಚಿತ್ತೂರು/ವಂಡ್ಸೆಯ ಯುವಕ ಗುರುರಾಜ್, 56ಕೆ.ಜಿ ವೇಯ್ಟ್ ಲಿಫ್ಟಿಂಗ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದು ನಾಡಿಗೆ ಕೀರ್ತಿ ತಂದಿದ್ದಾನೆ. ಬಡತನದ ನಡುವೆಯೂ ಶ್ರದ್ಧೆ ಹಾಗೂ ಸತತ ಪರಿಶ್ರಮದಿಂದ ಏನನ್ನೂ ಸಾಧಿಸಬಹುದು ಎಂಬುದನ್ನು  ಡ್ರೈವರ್ ಮಗ ತೋರಿಸಿಕೊಟ್ಟಿದ್ದಾನೆ! 

Call us

Call us

Call us

ಬಾಲ್ಯದಿಂದಲೇ ಕ್ರೀಡೆಯಲ್ಲಿ ಅದಮ್ಯ ಆಸಕ್ತಿ. ಬಿಡದೇ ಸಾಧಿಸುವ ಛಲ. ಬಡತನದ ನಡುವೆಯೂ ಮಗನ ಆಸಕ್ತಿಗೆ ನೀರೆರೆದು ಪೋಷಿಸಿದ ಪೋಷಕರು, ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಿದ ಗುರುಗಳು. ಇವೆಲ್ಲದರ ಸಮ್ಮೀಳಿತದ ಫಲವೇ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದ ಗುರುರಾಜ್ ಎಂಬ ಕುಂದಾಪುರದ ಯುವಕನ ರಾಷ್ಟ್ರ ಮಟ್ಟದ ಸಾಧನೆ. (ಕುಂದಾಪ್ರ ಡಾಟ್ ಕಾಂ ವರದಿ)

Call us

Call us

ಚಿತ್ತೂರು ಗ್ರಾಮದ ಜಡ್ಡು ಮಹಾಬಲ ಪೂಜಾರಿ ಹಾಗು ಪದ್ದು ದಂಪತಿಗಳ ಆರು ಮಕ್ಕಳಲ್ಲಿ ಐದನೇಯವರಾದ ಗುರುರಾಜಗೆ ಓದಿನಷ್ಟೇ ಕ್ರೀಡೆಯಲ್ಲಿಯೂ ಆಸಕ್ತಿ. ತಂದೆ ತಾಯಿಯೂ ಅಷ್ಟೇ. ಮಗನ ಮನದ ಇಂಗಿತ ಅರಿತು ಅವರ ಸಾಧನೆಗೆ ಶಕ್ತಿ ಮೀರಿ ನೆರವಾಗುತ್ತಿದ್ದರು. ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳ ಪ್ರೌಢಶಾಲೆ ಹಾಗೂ ಪಿಯು ಕಾಲೇಜಿನಲ್ಲಿ ಕಲಿಯುತ್ತಿದ್ದ ಸಂದರ್ಭದಲ್ಲಿ ರ್ವೆಸ್ಲಿಂಗ್ ನಲ್ಲಿ ಹೆಚ್ಚು ಆಸಕ್ತಿ ತೋರುತ್ತಿದ್ದ ಗುರುರಾಜ್‌ಗೆ ಸುಕೇಶ್ ಶೆಟ್ಟಿ ಅವರು ತರಬೇತಿ ನೀಡಿದ್ದರು. (ಕುಂದಾಪ್ರ ಡಾಟ್ ಕಾಂ ವರದಿ)

ಮುಂದೆ ಪದವಿ ವ್ಯಾಸಂಗಕ್ಕಾಗಿ ಉಜಿರೆಯ ಎಸ್.ಡಿ.ಎಂ ಕಾಲೇಜು ಸೇರಿದ ಬಳಿಕ ಗುರುರಾಜ್ ಬದುಕಿಗೊಂದು ತಿರುವು ದೊರೆತಿತ್ತು. ಈ ಅವಧಿಯಲ್ಲಿ ಎಂ. ರಾಜೇಂದ್ರ ಪ್ರಸಾದ್ ವೇಯ್ಡ್ ಲಿಫ್ಟಿಂಗ್ ತರಬೇತಿ ನೀಡಿ ಕ್ರೀಡಾ ಕ್ಷೇತ್ರದಲ್ಲಿ ಮುಂದುವರಿಯುವಂತೆ ಪ್ರೋತ್ಸಾಹಿಸಿದರು. ಗುರುರಾಜ್ ಎಸ್.ಡಿ.ಎಂ ಕ್ರೀಡಾ ತರಬೇತಿ ಸಂಸ್ಥೆಯ ಮೂಲಕ ನಿರಂತರವಾಗಿ ತರಬೇತಿ ಪಡೆದರು. ಅಲ್ಲಿಂದೀಚೆಗೆ ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗೈಯುತ್ತಲೇ ಬಂದಿರುವ ಗುರುರಾಜ್ ಇದೀಗ ಸೌತ್ ಏಷ್ಯನ್ ಗೇಮ್ಸ್  ವೇಯ್ಟ್ ಲಿಫ್ಟಿಂಗ್ ವಿಭಾಗದಲ್ಲಿ ಚಿನ್ನ ಗೆದ್ದು ಹೊಸ ಭರವಸೆ ಮೂಡಿಸಿದ್ದಾರೆ. ಪುರಷರ 56 ಕೆ.ಜಿ ವಿಭಾಗದಲ್ಲಿ ಒಟ್ಟು 241ಕೆ.ಜಿ ಭಾರ ಎತ್ತಿದ ಅವರು ಸ್ನಾಚ್ ವಿಭಾಗದಲ್ಲಿ 104ಕೆ.ಜಿ ಹಾಗೂ ಕ್ಲೀನ್ ಎಂಡ್ ಜರ್ಕ್ ನಲ್ಲಿ 137ಕೆ.ಜಿ ಎತ್ತಿ ಪದಕ ಪಡೆದಿದ್ದಾರೆ. ಇದು ಕುಂದಾಪ್ರ ಡಾಟ್ ಕಾಂ ವರದಿ

ಸ್ಟೋಟ್ಸ್ ಕೋಟಾದಲ್ಲಿ ಭಾರತೀಯ ವಾಯುಸೇನೆಗೆ ಆಯ್ಕೆಯಾಗಿ ತರಬೇತಿ ಪಡೆಯುತ್ತಿರುವ ಗುರುರಾಜ್, ಪ್ರತಿದಿನ ನಾಲ್ಕು ಗಂಟೆ ಅಭ್ಯಾಸ. ಸ್ವರ್ಧೆಗೆ ತೆರಳುವುದಿದ್ದರೇ ಮತ್ತೆರಡು ಗಂಟೆ ಜಾಸ್ತಿ ಶ್ರಮ ಹಾಕುವುದು ನಿಂತಲ್ಲ. ಚಿನ್ನ ಗೆದ್ದ ಖುಷಿಯಲ್ಲಿರುವ ಗುರುರಾಜ್ ತನ್ನ ಸಾಧನೆಗೆ ತಂದೆ-ತಾಯಿಯ ಪ್ರೋತ್ಸಾಹ ಹಾಗೂ ಕೋಚ್ ರಾಜೇಂದ್ರ ಪ್ರಸಾದ್ ಅವರ ಮಾರ್ಗದರ್ಶನವೇ ಕಾರಣ ಎಂದು ಹೇಳುವುದನ್ನು ಮರೆತಿಲ್ಲ.

Download our Mobile app – Click here

Kundapura Chitturu Gururaj Poojary Won Gold meddle in 12th South Asia Games Guhiwathi (2) Kundapura Chitturu Gururaj Poojary Won Gold meddle in 12th South Asia Games Guhiwathi (3) Kundapura Chitturu Gururaj Poojary Won Gold meddle in 12th South Asia Games Guhiwathi (1)

[box type=”custom” color=”#ff0547″ bg=”#ffffff” fontsize=”15″ radius=”5″ border=”#1e73be”]Note: Copy / reproduction of published contents of Kundapra.com, without consent is illegal. Such persons will be prosecuted.[/box]

Leave a Reply

Your email address will not be published. Required fields are marked *

11 − 4 =