ಗರಿಗೆದರಿದ ಹಂಪಿ ಪಾರಂಪರಿಕ ನಡಿಗೆ. ನ. 3 ರಿಂದ 5 ಅದ್ದೂರಿ ಹಂಪಿ ಉತ್ಸವ

Click Here

Call us

Call us

ಅಪಾರ ಉಜಿರೆ
ವಿಜಯನಗರ ಸಾಮ್ರಾಜ್ಯದ ಗತ ವೈಭವವನ್ನು ಮೆಲುಕು ಹಾಕುವ ಹಂಪಿ ಉತ್ಸವವು ಇದೇ ನವೆಂಬರ್ ತಿಂಗಳ ೩, ೪ ಮತ್ತು ೫ರಂದು ಹಂಪಿಯಲ್ಲಿ ನಡೆಯಲಿದ್ದು, ಉತ್ಸವಕ್ಕೆ ಪೂರ್ವಬಾವಿಯಾಗಿ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಅದರಲ್ಲಿ ಪಾರಂಪರಿಕ ನಡಿಗೆಯು ೨೦೧೬ರ ಹಂಪಿ ಉತ್ಸವದ ವಿಶೇಷ ಆಕರ್ಷಣೆ. ಹಂಪಿ ಸ್ಮಾರಕಗಳನ್ನು ಪರಿಚಯಿಸುವ ಪಾರಂಪರಿಕ ನಡಿಗೆಯನ್ನು ನ೩೦ರಂದು ಬೆಳಗ್ಗೆ ವೀರೂಪಾಕ್ಷ ದೇವಳದ ಮುಂಭಾಗದಲ್ಲಿ ಬಳ್ಳಾರಿ ಜಿಲ್ಲಾಧಿಕಾರಿ ಡಾ. ವಿ. ರಾಮಪ್ರಸಾರ್ ಮನೋಹರ್ ಪಾರಂಪರಿಕ ನಡಿಗೆಗೆ ಚಾಲನೆ ನೀಡಿದರು

Call us

Call us

Visit Now

ಪಾರಂಪರಿಕ ನಡಿಗೆಯಲ್ಲಿ ಹಂಪಿಯ ಮಾರ್ಗದರ್ಶಕರ ನೇತೃತ್ವದಲ್ಲಿ ವೀರೂಪಾಕ್ಷ ದೇವಸ್ಥಾನ, ಬಜಾರ್, ಅಚ್ಚ್ಯುತ ದೇಗುಲ ಬಜಾರ್, ಪುಷ್ಕರಣಿ, ಚಕ್ರತೀರ್ಥ, ವರ್ಷ ದಏವಸ್ಥಾನ, ನರಸಿಂಹ ದೇವಸ್ಥಾನ, ಎರಡು ಅಂತಸ್ಥಿನ ಮಂಟಪ, ಸುಗ್ರೀವ ಕಾಲ್ವೆ, ಪುರಾತನ ಸೇತುವೆ, ಪುರಂದರ ಮಂಟಪ, ವಿಜಯವಿಠಲ ದೇವಸ್ಥಾನ, ಕಲ್ಲಿನ ರಥ, ಸಂಗೀತ ಮಂಟಪ ಮೊದಲಾದ ಸ್ಥಳಗಳಿಗೆ ಭೇಟಿ ನೀಡಲಾಯಿತು.

Click here

Click Here

Call us

Call us

ಪಾರಂಪರಿಕ ನಡಿಗೆಯಲ್ಲಿ ಕನ್ನಡ ವಿವಿ ಹಂಪಿ, ಹೋಟೆಲ್ ಮಾಲೀಕರ ಸಂಘ, ವ್ಯಾಪಾರಸ್ಥರ ಸಂಘ, ಸ್ಥಳೀಯ ಶಾಲಾ ಕಾಲೇಜುಗಳ ಅಧ್ಯಾಪಕರು, ವಿದ್ಯಾರ್ಥಿಗಳು, ನಾಗರೀಕರು ಮತ್ತು ವಿದೇಶಿ ಪ್ರವಾಸಿಗರು ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಧ್ವನಿ ಬೆಳಕು, ಹಂಪಿ ಬೈನೈಟ್, ಬೈಸ್ಕೈಗಳೊಂದಿಗೆ ಜನೋತ್ಸವವಾಗಿ ೨೦೧೬ರ ಹಂಪಿ ಉತ್ಸವ

Click Here

ಈ ಬಾರಿಯ ಹಂಪಿ ಉತ್ಸವವನ್ನು ಜನರ ಉತ್ಸವವನ್ನಾಗಿ ಆಚರಿಸಲಿದ್ದು, ಆಗಸದಿಂದ ಹೆಲಿಕ್ಯಾಪ್ಟರ್ ಮೂಲಕ ಹಂಪಿಯನ್ನು ವೀಕ್ಷಿಸುವ ಹಂಪಿ ಬೈ ಸ್ಕೈ ಯೋಜನೆಯನ್ನು ನವೆಂಬರ್ ೧ರಿಂದ ಆರಂಭಿಸಲಾಗುತ್ತಿದೆ. ಅಲ್ಲದೆ ಈ ಬಾರಿ ಹಂಪಿ ಮ್ಯಾರಥಾನ್ ಮತ್ತು ಸ್ಥಳೀಯ ಮಾರ್ಗದರ್ಶಕರ ನರವಿನೊಂದಿಗೆ ಹಂಪಿಯೆಡೆಗೆ ಪಾರಂಪರಿಕ ನಡೆಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಕಳೆದ ಎಂಟು ವರ್ಷಗಳಿಂದ ನಡೆಯದ ಧ್ವನಿ ಬೆಳಕು ಕಾರ್ಯಕ್ರಮ ಈ ಬಾರಿಯ ಉತ್ಸವದಲ್ಲಿ ನಡೆಯಲಿದ್ದು ಉತ್ಸವಕ್ಕೆ ವಿಶೆಷ ಮೆರಗನ್ನು ನೀಡಲಿದೆ. ವಿಜಯನಗರದ ವೈಭವವನ್ನು ಕಟ್ಟಿಕೊಡುವುದಕ್ಕಾಗಿ ಕೇಂದ್ರದ ಸಂಸ್ಕೃತಿ ಸಚಿವಾಲಯ ಕಾರ್ಯಕ್ರಮಕ್ಕೆ ಅನುಮತಿ ನೀಡಿದೆ. ಈ ಕಾರ್ಯಕ್ರಮ ನ.೩ ರಿಂದ ನ.೭ರವರೆಗೆ ನಿತ್ಯ ರಾತ್ರಿ ೭ ಗಂಟೆಯಿಂದ ೯:೩೦ರ ವರೆಗೆ ಆನೆಸಾಲು ಬಳಿ ನಡೆಯಲಿದೆ. ನ.೨ರಂದು ಗಣ್ಯರಿಗಾಗಿ ಪ್ರದರ್ಶನ ನಡೆಯಲಿದೆ. ಹಂಪಿ ಬೈ ನೈಟ್ ಕಾರ್ಯಕ್ರಮವೂ ಶಾಶ್ವತವಾಗಿ ನಡೆಯಲಿದೆ.

ಈ ಬಾರಿಯ ಉತ್ಸವದಲ್ಲಿ ನಿತ್ಯವೂ ವಿವಿಧ ಗ್ರಾಮೀಣ ಕ್ರೀಡೆಗಳನ್ನು ಆಯೋಜಿಸಲಾಗಿದೆ. ಅಲ್ಲದೆ ಚಿತ್ರಕಲೆ, ಶಿಲ್ಪಕಲಾ ಶಿಬಿರ ಮತ್ತು ಸ್ಪರ್ಧೆಗಳೂ ನಡೆಯಲಿವೆ. ನ.೩ರಂದು ರೈತರ ಸಮಾವೇಶವನ್ನು ಆಯೋಜಿಸಲಾಗಿದೆ.

ಉತ್ಸವಕ್ಕೆ ೧೬೦ ಸ್ಥಳೀಯ ಕಲಾವಿದರ ತಂಡ

ನವೆಂಬರ್ ೩ರಿಂದ ನಡೆಯುವ ಹಂಪಿ ಉತ್ವಕ್ಕೆ ಸ್ಥಳೀಯ ೧೬೦ ಕಲಾವಿದರ ತಂಡಗಳು ಜೊತೆಗೆ ೫೫ ರಾಜ್ಯ, ೧೫ ರಾಷ್ಟ್ರೀಯ ಮತ್ತು ೧೨ ಅಂತಾರಾಷ್ಟ್ರೀಯ ಕಲಾವಿದರನ್ನು ಹಂಪಿ ಉತ್ಸವಕ್ಕೆ ಕರೆಸಲು ನಿರ್ಧರಿಸಲಾಗಿದೆ. ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ತಿಳಿಸಿದ್ದಾರೆ. ನವೆಂಬರ್ ೩ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ಸವಕ್ಕೆ ಚಾಲನೆ ನೀಡಲಿದ್ದು, ಈ ಬಾರಿ ಎಂಟು ವೇದಿಕೆಗಳಲ್ಲಿ ಕಾರ್ಯಕ್ರಮಗಳು ನಡೆಯಲಿವೆ. ಇದೇ ಮೊದಲ ಬಾರಿಗೆ ಕೃಷಿ ಮೇಳವನ್ನೂ ಉತ್ಸವದಲ್ಲಿ ಹಮ್ಮಿಕೊಳ್ಳಲಾಗಿದೆ.

news-hampi-utsava2 news-hampi-utsava4 news-hampi-utsava5

Leave a Reply

Your email address will not be published. Required fields are marked *

nineteen + eight =