ಗ್ರಾ.ಪಂ. ಚುನಾವಣಾ ಕಣದಲ್ಲಿ ಅಂಗವಿಕಲ ಸುಧಾಕರ ಪೂಜಾರಿ

Call us

Call us

ಹಂಗಳೂರು ಗ್ರಾಮ ಪಂಚಾಯತ್ ನಿಂದ ಚುನಾವಣೆಗೆ ಸ್ವರ್ಧೆ

Click Here

Call us

Call us

ಕುಂದಾಪುರ: ಸಮಾಜ ಸೇವೆಗೆ ಅಂಗವಿಕಲತೆ ಅಡ್ಡಿ ಇಲ್ಲ. ಮನಸ್ಸು ಮಾಡಿದರೆ ಎನನ್ನೂ ಬೇಕಾದರೂ ಮಾಡಬಹುದು ಎಂಬುದನ್ನು ತೋರಿಸಿಕೊಟ್ಟವರು ಸಾವಿರಾರು ಮಂದಿ ಇದ್ದಾರೆ. ಅಂತವರಲ್ಲಿ ಈ ಭಾರಿಯ ಗ್ರಾ.ಪಂ ಚುನಾವಣೆಯಲ್ಲಿ ಸ್ವರ್ಧಿಸುತ್ತಿರುವ ಸುಧಾಕರ ಪೂಜಾರಿಯೋ ಒಬ್ಬರು.

Click here

Click Here

Call us

Visit Now

ಬಾಲ್ಯದಲ್ಲೇ ಪೋಲಿಯೋ ಪೀಡಿತರಾಗಿ ಒಂದು ಕಾಲಿನ ಸಂಪೂರ್ಣ ಬಲವನ್ನು ಕಳೆದುಕೊಂಡಿರುವ ಮೂರುವರೆ ಅಡಿ ಎತ್ತರದ ಕುಂದಾಪುರದ ಹಂಗಳೂರು ನಿವಾಸಿ ಕೋಟಿ ಮನೆಯ ಬಾಲ ಪೂಜಾರಿಯವರ ಮಗ 42 ವರ್ಷ ಪ್ರಾಯದ ಸುಧಾಕರ ಪೂಜಾರಿ ತನ್ನದೇ ಗ್ರಾಮವಾದ ಹಂಗಳೂರಿನ ನಾಲ್ಕನೇ ವಾರ್ಡಿನಿಂದ ಸಾಮಾನ್ಯ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿದ್ದಾರೆ.

ವಿವಾಹಿತರಾಗಿ ಒಂದು ಗಂಡು ಮಗುವಿನ ತಂದೆಯಾಗಿರುವ ಇವರು ಕಳೆದ 25 ವರ್ಷಗಳಿಂದಲೂ ತನ್ನ ಅಂಗವೈಖಲ್ಯವನ್ನು ಮೆಟ್ಟಿ ನಿಂತು ತನ್ನ ಗ್ರಾಮದಲ್ಲಿ ಸಮಾಜಸೇವೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುತ್ತಾರೆ. ವೃತ್ತಿಯಲ್ಲಿ ಅರ್ಜಿ ಬರಹಗಾರರಾಗಿದ್ದು, ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದಾರೆ. ತನ್ನ ಕೆಲಸದಲ್ಲಿನ ಚುರುಕುತನದಿಂದ, ಹಾಸ್ಯಭರಿತ ಮಾತುಗಾರಿಕೆಯಿಂದ ಮತ್ತು ತನ್ನ ಅಂಗವೈಕಲ್ಯತೆಯ ನಡುವೆಯೂ ಪರರಿಗೆ ಸಹಕರಿಸುವ ತನ್ನ ಉತ್ತಮ ಗುಣಗಳಿಂದ ಇಡೀ ಗ್ರಾಮದ ಜನರಿಗೂ ಸುಧಾಕರ ಪೂಜಾರಿ ಪ್ರೀತಿಗೆ ಪಾತ್ರ. ಕಳೆದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಇದೇ ಕ್ಷೇತ್ರದಿಂದ ಸ್ಪರ್ಧಿಸಿದ್ದ ಇವರು ಬೆರಳೆಣಿಕೆಯ ಮತಗಳ ಅಂತರದಿಂದ ಸೋಲನ್ನಭವಿಸಿದ್ದರು.

ಕುಂದಾಪ್ರ ಡಾಟ್ ಕಾಂ- editor@kundapra.com

Call us

Leave a Reply

Your email address will not be published. Required fields are marked *

twelve + sixteen =