ಕುಂದಾಪುರ, ಬೈಂದೂರಿನಲ್ಲಿ ‘ಹರಿಕಥೆ ಅಲ್ಲ ಗಿರಿಕಥೆ’ ಸಿನೆಮಾ ಚಿತ್ರೀಕರಣ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ನಿರ್ದೇಶಕ, ನಟ ರಿಷಬ್ ಶೆಟ್ಟಿ ನಾಯಕರಾಗಿ ನಟಿಸುತ್ತಿರುವ ‘ಹರಿಕಥೆ ಅಲ್ಲ ಗಿರಿಕಥೆ’ ಸಿನೆಮಾದ ಹಾಡಿನ ಚಿತ್ರೀಕರಣ ಕುಂದಾಪುರ, ಮರವಂತೆ ಹಾಗೂ ಬೈಂದೂರು ಭಾಗದಲ್ಲಿ ನಡೆದಿದೆ. ಮೈಸೂರು ಮಡಿಕೇರಿಯನ್ನು ಮುಗಿಸಿ ಪ್ರಮುಖ ಊರುಗಳಲ್ಲಿ ಹಾಡು ಹಾಗೂ ಚಿತ್ರದ ಕೆಲವು ಸೀನ್‌ಗಳ ಚಿತ್ರೀಕರಣ ನಡೆಯಿತು.

Click Here

Call us

Call us

Click here

Click Here

Call us

Visit Now

ಸಂದೇಶ್ ನಾಗರಾಜ್ ಅವರ ಸಂದೇಶ್ ಪ್ರೊಡಕ್ಷನ್ಸ್ ಸಂಸ್ಥೆ ರಿಷಬ್ ಶೆಟ್ಟಿ ಫಿಲಂಸ್ ಸಹಯೋಗದೊಂದಿಗೆ ನಿರ್ಮಿಸುತ್ತಿರುವ, ಕರಣ್ ಅನಂತ್ ಹಾಗೂ ಅನಿರುದ್ಧ್ ಮಹೇಶ್ ಜಂಟಿಯಾಗಿ ನಿರ್ದೇಶಿಸುತ್ತಿದ್ದಾರೆ. ಗಿರಿಕೃಷ್ಣ ಕಥೆ ಹಾಗೂ ರಿಷಬ್ ಶೆಟ್ಟಿ, ಅನಿರುದ್ಧ್ ಮಹೇಶ್, ಕರಣ್ ಅನಂತ್ ಚಿತ್ರಕಥೆ ಬರೆದಿರುವ ಈ ಚಿತ್ರಕ್ಕೆ, ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ, ಚಂದ್ರಶೇಖರನ್, ರಂಗನಾಥ್ ಸಿ.ಎಂ ಛಾಯಾಗ್ರಹಣ, ಪ್ರಗತಿ ರಿಷಬ್ ಶೆಟ್ಟಿ ವಸ್ತ್ರ ವಿನ್ಯಾಸ ಹಾಗೂ ರಿತ್ವಿಕ್ ಅವರ ಸಂಕಲನ ಮಾಡುತ್ತಿದ್ದಾರೆ. ಪ್ರಮೋದ್ ಶೆಟ್ಟಿ ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ರಿಷಬ್ ಶೆಟ್ಟಿ ಅವರು ನಾಯಕನಾಗಿ ನಟಿಸುತ್ತಿರುವ ಮೂರನೇ ಸಿನಿಮಾ ಇದಾಗಿದು, ಈ ಸಿನಿಮಾದಲ್ಲಿ ರಿಷಭ್ ಶೆಟ್ಟಿ ಅವರಿಗೆ ನಾಯಕಿಯಾಗಿ ಸ್ಯಾಂಡಲ್‌ವುಡ್‌ಗೆ ಮೊದಲ ಭಾರಿಗೆ ಎಂಟ್ರಿ ಪಡೆದಿರುವ ತಪಸ್ವಿನಿ ಪೂಣಚ್ಚ ಸಾಥ್ ನೀಡಿದ್ದಾರೆ. ಹಾಸ್ಯ ಪ್ರಧಾನವಾದ ಈ ಚಿತ್ರದಲ್ಲಿ ರಿಷಬ್ ಶೆಟ್ಟಿ ಸ್ವತಂತ್ರ ಚಿತ್ರ ನಿರ್ದೇಶಕನ ಪಾತ್ರ ಮಾಡುತ್ತಿದ್ದಾರೆ. ಲವ್ ಮಾಕ್ಟೇಲ್ ಚಿತ್ರದಲ್ಲಿ ಅದಿತಿ ಪಾತ್ರದ ಮೂಲಕ ಪರಿಚಿತರಾದ ರಚನಾ ಇಂದರ್ ಕೂಡ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಉಳಿದಂತೆ ರಘು ಪಾಂಡೇಶ್ವರ್, ಹೊನ್ನವಳ್ಳಿ ಕೃಷ್ಣ, ಪ್ರಮೋದ್ ಶೆಟ್ಟಿ ಮುಂತಾದವರು ‘ಹರಿಕಥೆ ಅಲ್ಲ ಗಿರಿಕಥೆ’ ಚಿತ್ರದ ತಾರಾಬಳಗದಲ್ಲಿದ್ದಾರೆ. ಕುಮಟಾದ ಬಳಿಕ ಗೋವಾದಲ್ಲಿ ಚಿತ್ರದ ಕ್ಲೈಮಾಕ್ಸ್ ಚಿತ್ರೀಕರಣಗೊಳ್ಳಲಿದೆ. ಕುಂದಾಪ್ರ ಡಾಟ್ ಕಾಂ ಸುದ್ದಿ.

Call us

ಲಾಕ್ ಡೌನ್ ಸಮಯದಲ್ಲಿ ರಿಷಬ್ ಶೆಟ್ಟಿ ಅವರು ಹೀರೋ ಚಿತ್ರದ ಶೂಟಿಂಗ್ ಮುಗಿಸಿಕೊಂಡಿದ್ದಾರೆ. ಭರತ್ ರಾಜ್ ನಿರ್ದೇಶನದ ಚಿತ್ರವಿದು. ಮತ್ತೊಂದು ಅಂಡರ್ ವರ್ಲ್ಡ್ ಡಾನ್ ಅಮರ್ ಆಳ್ವ ಪಾತ್ರವನ್ನು ಕೂಡ ಮಾಡುತ್ತಿದ್ದಾರೆ. ಇದಕ್ಕೆ ರಿಶಬ್ ಶೆಟ್ಟಿಯವರೇ ಚಿತ್ರಕಥೆ ಬರೆದಿದ್ದಾರೆ. ಈ ನಡುವೆ ಜಯಣ್ಣ ಪ್ರೊಡಕ್ಷನ್‌ನಲ್ಲಿ ರಿಷಬ್ ಅವರ ನಿರ್ದೇಶನದ ರುದ್ರಪ್ರಯಾಗ್ ಚಿತ್ರ ಕೂಡ ತಯಾರಾಗುತ್ತಿದೆ. ಇದರಲ್ಲಿ ಅನಂತ್‌ನಾಗ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಒಟ್ಟಿನಲ್ಲಿ ಕಿರಿಕ್ ಪಾರ್ಟಿ, ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಮೊದಲಾದ ಹಿಟ್ ಚಿತ್ರಗಳನ್ನು ನಿರ್ದೇಶಿಸಿರುವ ರಿಷಬ್ ಅವರು ನಟನೆ ಹಾಗೂ ನಿರ್ದೇಶನಲ್ಲಿ ಬ್ಯೂಸಿಯಾಗಿದ್ದಾರೆ/ಕುಂದಾಪ್ರ ಡಾಟ್ ಕಾಂ ಸುದ್ದಿ/

Leave a Reply

Your email address will not be published. Required fields are marked *

5 × five =