ಹಟ್ಟಿಯಂಗಡಿ ವಸತಿ ಶಾಲೆ: 10ನೇ ತರಗತಿಯಲ್ಲಿ ಸತತ 17ನೇ ಬಾರಿ 100% ಸಾಧನೆ

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಐ.ಸಿ.ಎಸ್.ಸಿ.ಇ. ಕೇಂದ್ರೀಯ ಪಠ್ಯಕ್ರಮದ 10ನೇ ತರಗತಿಯ ವಾರ್ಷಿಕ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯು ಸತತ 17ನೇ ಬಾರಿಗೆ ದಾಖಲೆಯ 100% ಫಲಿತಾಂಶವನ್ನು ಸಾಧಿಸಿದೆ. ಪರೀಕ್ಷೆಗೆ ಕುಳಿತ 130 ವಿದ್ಯಾರ್ಥಿಗಳು ಅಮೋಘ ಸಾಧನೆಯೊಂದಿಗೆ ಶಾಲೆಗೆ ಕೀರ್ತಿ ತಂದಿದ್ದಾರೆ.

Call us

Call us

ಪ್ರತಿಶತ 97.4 ಅಂಕಗಳೊಂದಿಗೆ ಕನ್ನಿಕಾ ಜಿ. ಭಟ್ ಮತ್ತು ಆರ್ಯ ಯಡಿಯಾಳ ಪ್ರಥಮ ಸ್ಥಾನವನ್ನು, ಯುವನ್ ಮತ್ತು ಸುಜನ್ ವಿ.ಎಸ್. ಪ್ರತಿಶತ 96.0 ಅಂಕದೊಂದಿಗೆ ದ್ವಿತೀಯ ಸ್ಥಾನವನ್ನು ವಸುಂಧರಾ ಮತ್ತು ಪವನ್ ಎಸ್. ಶೆಟ್ಟಿ ಪ್ರತಿಶತ 95.4 ಅಂಕದೊಂದಿಗೆ ತೃತೀಯ ಸ್ಥಾನವನ್ನು ಪಡೆದರು. ಪರೀಕ್ಷೆಗೆ ಕುಳಿತ 130 ವಿದ್ಯಾರ್ಥಿಗಳಲ್ಲಿ 86 ವಿದ್ಯಾರ್ಥಿಗಳು ಡಿಸ್ಟಿಂಗ್‌ಕ್ಷನ್ ಪಡೆಯುವುದರ ಮೂಲಕ ಸಂಸ್ಥೆಗೆ ಕೀರ್ತಿಯನ್ನು ತಂದಿರುತ್ತಾರೆ.

ವಿದ್ಯಾರ್ಥಿಗಳ ಈ ಸಾಧನೆಗೆ ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷರಾದ ಎಲ್. ಟಿ. ತಿಮ್ಮಪ್ಪ ಹೆಗಡೆ, ಉಪಾಧ್ಯಕ್ಷರಾದ ಡಾ. ಹೆಚ್. ಶಾಂತಾರಾಮ್, ಕಾರ್ಯದರ್ಶಿಗಳಾದ ವೇ. ಹೆಚ್. ಬಾಲಚಂದ್ರ ಭಟ್ ಪ್ರಾಂಶುಪಾಲ ಶರಣ ಕುಮಾರ ಮತ್ತು ಶಿಕ್ಷಕ ವೃಂದದವರು ಶುಭಾಶಯ ಕೋರಿ ಹರ್ಷ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

nine + 15 =