ಗುಲ್ವಾಡಿ ಟಾಕೀಸ್ ನಿರ್ಮಾಣದ ‘ರಿಸರ್ವೆಶನ್’ ಚಿತ್ರ ಮುಹೂರ್ತ, ಚಿತ್ರೀಕರಣಕ್ಕೆ ಚಾಲನೆ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಜಾತಿ ಹಾಗೂ ಮೀಸಲಾತಿ ವ್ಯವಸ್ಥೆಯ ಪ್ರಭಾವ ಹಾಗೂ ತಲ್ಲಣಗಳು ಕುಟುಂಬದ ಮೇಲೆ ಬೀರಬಹುದಾದ ಪರಿಣಾಮವನ್ನು ಕಥಾವಸ್ತುವಾಗಿಸಿಕೊಂಡು ಗುಲ್ವಾಡಿ ಟಾಕೀಸ್ ಬ್ಯಾನರ್‌ನಲ್ಲಿ ಯಾಕೂಬ್ ಖಾದರ್ ಗುಲ್ವಾಡಿ ನಿರ್ಮಿಸಿ, ನಿಖಿಲ್ ಮಂಜೂ ನಿರ್ದೇಶಿಸುತ್ತಿರುವ ‘ರಿಸರ್ವೆಶನ್’ ಕನ್ನಡ ಚಲನಚಿತ್ರದ ಮುಹೂರ್ತ ಸಮಾರಂಭ ಹಟ್ಟಿಯಂಗಡಿ ನಮ್ಮಭೂಮಿ ಸ್ಟಡಿ ಸೆಂಟರ್‌ನಲ್ಲಿ ಜರುಗಿತು.

Call us

Call us

Call us

ಅಕ್ಕ ಅಮೇರಿಕಾದ ಮಾಜಿ ಅಧ್ಯಕ್ಷ ಡಾ. ವಿಶ್ವಾಮಿತ್ರ ಹಳೆಕೋಟೆ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ ಕರಾವಳಿಯನ್ನು ಕೇಂದ್ರವಾಗಿಟ್ಟುಕೊಂಡು ನಿರ್ಮಾಣವಾಗಿರುವ ಕಲಾತ್ಮಕ ಚಿತ್ರಗಳು ಅಂತರಾಷ್ಟ್ರೀಯ ಮಟ್ಟದಲ್ಲೂ ಮಾನ್ಯತೆ ಪಡೆಯುತ್ತಿರುವುದಲ್ಲದೇ, ಪ್ರಶಸ್ತಿಗಳನ್ನು ಮುಡಿಗೇರಿಸಿಕೊಳ್ಳುತ್ತಿರುವುದು ಹೆಮ್ಮೆಯ ಸಂಗತಿ. ಲಾಭದ ನಿರೀಕ್ಷೆ ಇಲ್ಲದ ಕಲಾತ್ಮಕ ಚಿತ್ರವನ್ನು ನಿರ್ಮಿಸುವ ದೊಡ್ಡ ಕೆಲಸಕ್ಕೆ ಯಾಕೂಬ್ ಖಾದರ್ ಮುಂದಾಗಿರುವುದು ಅವರಲ್ಲಿನ ಕಲೆಯ ಸೆಳೆತವೇ ಸಾಕ್ಷಿ ಎಂದರು.

Call us

Call us

ಚಿತ್ರ ನಿರ್ಮಾಪಕ ಯಾಕೂಬ್ ಖಾದರ್ ಗುಲ್ವಾಡಿ ಮಾತನಾಡಿ, ಚಿತ್ರಗಳಲ್ಲಿ ನಟನೆ ಹಾಗೂ ದೇಶ ವಿದೇಶ ಸುತ್ತಿ ಜನಜೀವನವನ್ನು ಅರಿತ ಬಳಿಕ ಕಲಾತ್ಮಕ ಚಿತ್ರಗಳನ್ನು ಮಾಡಬೇಕು ಎನ್ನುವ ಆಸೆ ಮೂಡಿತ್ತು. ಅದು ನಿರ್ದೇಶಕ ನಿಖಿಲ್ ಮಂಜೂ ಹಾಗೂ ಉತ್ತಮ ತಂಡದ ಮೂಲಕ ಸಾಕಾರಗೊಳ್ಳುತ್ತಿದೆ ಎಂದರು.

ಡಬ್ಲ್ಯೂಕೆಸಿಸಿ ಅಧ್ಯಕ್ಷ ಕೆ.ಪಿ.ಮಂಜುನಾಥ ಸಾಗರ್ ಕ್ಯಾಮೆರಾಕ್ಕೆ ಚಾಲನೆ ನೀಡಿದರು. ಕೋಟೇಶ್ವರ ಯುವ ಮೆರಿಡಿಯನ್ ಪ್ರವರ್ತಕರಾದ ಉದಯಕುಮಾರ್ ಶೆಟ್ಟಿ, ವಿನಯಕುಮಾರ್ ಶೆಟ್ಟಿ, ಮನೋವೈದ್ಯ ಡಾ.ಪ್ರಕಾಶ್ ತೋಳಾರ್, ಮಾತಾ ಆಸ್ಪತ್ರೆ ವೈದ್ಯಕೀಯ ನಿರ್ದೇಶಕ ಡಾ. ಸತೀಶ್ ಪೂಜಾರಿ, ಕನ್ನಡ ವೇದಿಕೆ ಅಧ್ಯಕ್ಷ ಸುಬ್ರಹ್ಮಣ್ಯ ಶೆಟ್ಟಿ, ಲಾವಣ್ಯ ಬೈಂದೂರು ಅಧ್ಯಕ್ಷ ಗಿರೀಶ್ ಬ್ಷೈಂದೂರು, ಮಹಮ್ಮದ್ ಆಲಿ, ನಮ್ಮ ಭೂಮಿಯ ಬಿ ಶಿವಾನಂದ, ಶ್ರೀನಿವಾಸ ಮೊದಾದವರು ಉಪಸ್ಥಿತರಿದ್ದರು.

ಗುಲ್ವಾಡಿ ಟಾಕೀಸ್ ಅರ್ಪಿಸುವ ರಿಸರ್ವೆಶನ್ ಕನ್ನಡ ಚಲನಚಿತ್ರವನ್ನು ಖ್ಯಾತ ನಿರ್ದೇಶಕ ನಿಖಿಲ್ ಮಂಜು ನಿರ್ದೇಶಿಸುತ್ತಿದ್ದು, ನಟ, ಸಾಹಿತಿ ಯಾಕೂಬ್ ಖಾದರ್ ಗುಲ್ವಾಡಿ ಚಿತ್ರನಿರ್ಮಾಣಕ್ಕೆ ಮುಂದಾಗಿದ್ದಾರೆ. ಶ್ರೀಲಲಿತೆ ಅವರ ಕಥೆಯನ್ನಾಧರಿಸಿದ ಚಿತ್ರಕ್ಕೆ ಬಿ. ಶಿವಾನಂದ್ ಸಂಭಾಷಣೆ ಬರೆದಿದ್ದರೇ, ಪ್ರದೀಪ್ ಶೆಟ್ಟಿ ಕೆಂಚನೂರು, ನಿಖಿಲ್ ಮಂಜು ಹಾಗೂ ಬಿ. ಶಿವಾನಂದ ಚಿತ್ರಕಥೆ ಬರೆದಿದಾರೆ. ಪಿವಿಆರ್ ಸ್ವಾಮಿ ಅವರ ಛಾಯಾಗ್ರಹಣ, ಸಮೀರ್ ಅವರ ಸಂಗೀತದಲ್ಲಿ ನಾಲ್ಕೈದು ಕಲಾವಿದರು ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

The film Reservation is being Directed By Nikhil Manju and produced under the banner of Gulvadi talkies under the leadership of film actor and young author Yakub Khader Gulvadi

reservation-a-kannada-art-film-by-nikil-manju-and-yakub-kadhar-gulvady-gulvady-talkies-1 reservation-a-kannada-art-film-by-nikil-manju-and-yakub-kadhar-gulvady-gulvady-talkies-2 reservation-a-kannada-art-film-by-nikil-manju-and-yakub-kadhar-gulvady-gulvady-talkies-3 reservation-a-kannada-art-film-by-nikil-manju-and-yakub-kadhar-gulvady-gulvady-talkies-4 reservation-a-kannada-art-film-by-nikil-manju-and-yakub-kadhar-gulvady-gulvady-talkies-5reservation-a-kannada-art-film-by-nikil-manju-and-yakub-kadhar-gulvady-gulvady-talkies-6 reservation-a-kannada-art-film-by-nikil-manju-and-yakub-kadhar-gulvady-gulvady-talkies-8 reservation-a-kannada-art-film-by-nikil-manju-and-yakub-kadhar-gulvady-gulvady-talkies-9 reservation-a-kannada-art-film-by-nikil-manju-and-yakub-kadhar-gulvady-gulvady-talkies-10reservation-a-kannada-art-film-by-nikil-manju-and-yakub-kadhar-gulvady-gulvady-talkies-11 reservation-a-kannada-art-film-by-nikil-manju-and-yakub-kadhar-gulvady-gulvady-talkies-12 reservation-a-kannada-art-film-by-nikil-manju-and-yakub-kadhar-gulvady-gulvady-talkies-13 reservation-a-kannada-art-film-by-nikil-manju-and-yakub-kadhar-gulvady-gulvady-talkies-14reservation-a-kannada-art-film-by-nikil-manju-and-yakub-kadhar-gulvady-gulvady-talkies-16 reservation-a-kannada-art-film-by-nikil-manju-and-yakub-kadhar-gulvady-gulvady-talkies-17reservation-a-kannada-art-film-by-nikil-manju-and-yakub-kadhar-gulvady-gulvady-talkies-7 reservation-a-kannada-art-film-by-nikil-manju-and-yakub-kadhar-gulvady-gulvady-talkies-15 reservation-a-kannada-art-film-by-nikil-manju-and-yakub-kadhar-gulvady-gulvady-talkies-18

2 thoughts on “ಗುಲ್ವಾಡಿ ಟಾಕೀಸ್ ನಿರ್ಮಾಣದ ‘ರಿಸರ್ವೆಶನ್’ ಚಿತ್ರ ಮುಹೂರ್ತ, ಚಿತ್ರೀಕರಣಕ್ಕೆ ಚಾಲನೆ

Leave a Reply

Your email address will not be published. Required fields are marked *

15 − five =