ಕುಂದಾಪ್ರ ಡಾಟ್ ಕಾಂ ವರದಿ.
ಕುಂದಾಪುರ: ಕುಂದಾಪುರದ ಸೌಂದರ್ಯವನ್ನು ಆಗಸದೆತ್ತರದಲ್ಲಿ ಕಂಡು ಕಣ್ತುಂಬಿಕೊಳ್ಳಬೇಕೆಂಬ ಇಂಗಿತವಿದೆಯೇ? ನಮ್ಮೂರ ಪ್ರವಾಸಿ ತಾಣಗಳನ್ನು ನಿಮಿಷಗಳಲ್ಲಿ ಸುತ್ತಿ ಬರಬೇಕೆಂಬ ಹಂಬಲವಿದೆಯೇ? ಮತ್ತೇಕೆ ತಡ. ಕೋಟೇಶ್ವರದ ಯುವ ಮೆರಿಡಿಯನ್‌ಗೆ ಬನ್ನಿ. ಕುಂದಾಪುರವನ್ನು ಸುತ್ತುಹೊಡೆಸಲು ತಮಗೊಂದು ಹೆಲಿಕಾಪ್ಟರ್ ಕಾಯ್ತಿದೆ!
ಹೌದು ಕುಂದಾಪುರ ಕೋಟೇಶ್ವರದಲ್ಲಿನ ಯುವ ಮೆರಿಡಿಯನ್‌ನಲ್ಲಿ ಹೆಲಿಟೂರಿಸಂ ಆರಂಭಿಸಲು ದೆಹಲಿಯ ಏವಿಯೇಷನ್ ಕಂಪೆನಿಯು ಮುಂದೆ ಬಂದಿದ್ದು ಉಡುಪಿಯಲ್ಲಿ ಆರಂಭಿಸಿದ ಪ್ರಾಯೋಗಿಕ ಹೆಲಿಟೂರಿಸಂ ಈಗ ಕುಂದಾಪುರಕ್ಕೂ ವಿಸ್ತಾರಗೊಂಡಿದೆ. ಪ್ರಯೋಗಾರ್ಥವಾಗಿ ಆರಂಭಿಸಲಾಗಿರುವ ಹೆಲಿಟೂರಿಸಂ ಸೌಲಭ್ಯವು ಏ.27ರಿಂದಲೇ ಆರಂಭಗೊಂಡಿದ್ದು ಮೇ.1ರ ತನಕ ಪ್ರವಾಸಿಗರಿಗೆ ಪ್ರತಿದಿನ ಮಧ್ಯಾಹ್ನ 3 ಗಂಟೆ ಬಳಿಕ ಲಭ್ಯವಾಗಲಿದೆ. ಕುಂದಾಪ್ರ ಡಾಟ್ ಕಾಂ ಸುದ್ದಿ.
ರಜೆಯಲ್ಲಿ ಜಾಲಿ ರೈಡ್, ಅಡ್ವೆಂಚರ್ ರೈಡ್:
ಹೆಲಿಕಾಪ್ಟರ್‌ನಲ್ಲಿ ಹಾರಾಡಬಯಸುವ ಪ್ರವಾಸಿಗರಿಗೆ ಎರಡು ಬಗೆಯ ಆಫರ್ ನೀಡಲಾಗಿದ್ದು ಜಾಲಿ ರೈಡ್ ಮತ್ತು ಅಡ್ವೆಂಚರ್ ರೈಡ್ ಎಂಬ ಎರಡು ಪ್ಯಾಕೇಜ್ ಒಳಗೊಂಡಿದೆ. ಜಾಲಿ ರೈಡ್‌ನಲ್ಲಿ ಕೋಟೇಶ್ವರ, ಕುಂದಾಪುರ, ಬಬ್ಬುಕುದ್ರು ಮತ್ತು ಸುತ್ತಲಿನ ಹಿನ್ನೀರಿನ ಪ್ರದೇಶಗಳನ್ನು ನೋಡಲು ಅವಕಾಶವಿದ್ದರೇ, ಅಡ್ವೆಂಚರ್ ರೈಡ್‌ನಲ್ಲಿ ಇನ್ನೂ ದೂರದ ಪ್ರದೇಶಗಳಲ್ಲಿ ತೆರಳಬಹುದಾಗಿದೆ. ಜಾಲಿ ರೈಡ್‌ಗೆ ತಲಾ 2,200ರೂ. ಹಾಗೂ ಅಡ್ವೆಂಚರ್ ರೈಡ್‌ಗೆ ತಲಾ 3,500 ರೂ. ನಿಗದಿ ಪಡಿಸಿದ್ದು ಒಮ್ಮೆಗೆ ಆರು ಮಂದಿ ಪ್ರಯಾಣಿಸುವ ಅವಕಾಶವಿದೆ. \ಕುಂದಾಪ್ರ ಡಾಟ್ ಕಾಂ\ ಹೆಲಿಕಾಪ್ಟರನ್ನು ಹೆಲಿ ಟೂರಿಸಂಗೆ ಮಾತ್ರ ಸೀಮಿತಗೊಳಿಸದೇ, ತುರ್ತು ಆರೋಗ್ಯ ಸೇವೆ ಹಾಗೂ ಕೊಲ್ಲೂರು, ಮುರ್ಡೇಶ್ವರ ಸೇರಿದಂತೆ ಈ ಭಾಗದ ಧಾರ್ಮಿಕ ಕ್ಷೇತ್ರಗಳ ಪ್ರವಾಸಕ್ಕಾಗಿ ವಿಸ್ತರಿಸಿಕೊಳ್ಳುವ ಯೋಜನೆ ಕಂಪೆನಿಗಿದೆ.
ಹೆಲಿಟೂರಿಸಂ ಬಗ್ಗೆ ಯುವ ಮೆರಿಡಿಯನ್‌ನ ಉದಯಕುಮಾರ್ ಶೆಟ್ಟಿ ಮಾತನಾಡಿ ಕುಂದಾಪುರದ ಸುತ್ತಮುತ್ತಲಿನ ಪ್ರವಾಸಿ ತಾಣಗಳನ್ನು ಪ್ರಚುರಪಡಿಸುವ ಸಲುವಾಗಿ ಆರಂಭಿಸಲಾದ ಹೆಲಿ ಟೂರಿಸಂಗೆ ಪ್ರಾಯೋಗಿಕ ನೆಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಯುವ ಮೆರಿಡಿಯನ್‌ನಲ್ಲಿಯೇ ಶಾಶ್ವತವಾಗಿ ಹೆಲಿ ಟೂರಿಸಂ ಆರಂಭಿಸುವ ಇರಾದೆ ಇದೆ ಎಂದಿದ್ದಾರೆ. ಕುಂದಾಪ್ರ ಡಾಟ್ ಕಾಂ ಸುದ್ದಿ.
ಚಿಪ್ಸಾನ್ ಕಂಪೆನಿಯ ಸುರೇಶ್ ಹೆಲಿ ಟೂರಿಸಂ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಯುವ ಮೆರಿಡಿಯನ್‌ನ ವಿನಯ ಕುಮಾರ್ ಶೆಟ್ಟಿ, ಚಿತ್ರ ನಿರ್ಮಾಪಕ ಮೋಹನ್ ವಕ್ವಾಡಿ ಮತ್ತು ಪೈಲೆಟ್ ಅರ್ಪಿಕ್ ಉಪಸ್ಥಿತರಿದ್ದರು. ಕುಂದಾಪುರದಲ್ಲಿ ಪ್ರಥಮ ಭಾರಿಗೆ ಆರಂಭಿಸಲಾದ ಹೆಲಿಟೂರಿಸಂ ಹೆಲಿಕಾಪ್ಟರ್ ರೈಡ್ ಗೆ ಪ್ರಥಮ ಪ್ರಯೋಗಕ್ಕೆ ಮೋಹನ ವಕ್ವಾಡಿ ತಮ್ಮ ಕುಟುಂಬದೊಂದಿಗೆ ಹಾರಾಟ ನಡೆಸಿದರು. ಕುಂದಾಪ್ರ ಡಾಟ್ ಕಾಂ ಸುದ್ದಿ.
ಹೆಲಿಕಾಪ್ಟರ್ ರೈಡ್ ಮಾಡಲು ಸಂಪರ್ಕಿಸಬಹುದು: 9844606218, 9880052711