ಹೆರಂಜಾಲು: ಜನತಾ ಕಾಲೋನಿಯಲ್ಲಿ ಕುಡಿಯುವ ನೀರಿಗೂ ತಡೆ

Call us

Call us

ಕುಂದಾಪ್ರ ಡಾಟ್ ಕಾಂ ವರದಿ.
ಕುಂದಾಪುರ: ರಾಜಕೀಯ ವೈಷಮ್ಯಕ್ಕಾಗಿ ಬಿರು ಬೇಸಿಗೆಯಲ್ಲಿ ಕುಡಿಯುವ ನೀರಿಗೂ ತಡೆಯೊಡ್ಡಿ ಜನರೊಂದಿಗೆ ಚಲ್ಲಾಟವಾಡುತ್ತಿರುವ ಗ್ರಾಮ ಪಂಚಾಯಿತಿ. ಪಂಚಾಯತ್ ಅಧ್ಯಕ್ಷರ ರಾಜಕೀಯದಾಟಕ್ಕೆ ಹೈರಾಣಾಗಿರುವ ಕಾಲೋನಿಯ ಜನತೆ. ಬೈಂದೂರು ತಾಲೂಕು ಕಂಬದಕೋಣೆ ಗ್ರಾಮ ಪಂಚಾಯಿತಿ ಹೆರಂಜಾಲು ಗುಡಿ ದೇವಸ್ಥಾನದ ಬಳಿಯ ಜನತಾ ಕಾಲನಿ ನಿವಾಸಿಗಳು ಕುಡಿಯುವ ನೀರಿನಿಂದಲೂ ವಂಚಿತರಾಗಿದ್ದು, ಇರುವ ಒಂದು ಬೋರ್‌ವೆಲ್ ಮುಂದೆ ಸಾಲುಗಟ್ಟಿ ನಿಲ್ಲಬೇಕಾದ ಸ್ಥಿತಿ ಎದುರಾಗಿದೆ. ಈ ಬಗ್ಗೆ ಕುಂದಾಪ್ರ ಡಾಟ್ ಕಾಂ ವಿಶೇಷ ವರದಿ ಸಿದ್ದಪಡಿಸಿದ್ದು, ವಿವರ ಕೆಳಗಿದೆ.

Call us

Call us

Visit Now

Click here

Call us

Call us

ಲೋಕಸಭೆ ಚುನಾವಣೆ ಬಹಿಷ್ಕಾರ ಬ್ಯಾನರ್ ಹಾಕಿದ್ದರು ಎಂಬ ನೆಪವನ್ನಿಟ್ಟುಕೊಂಡು ಒಂದಿಡೀ ಕಾಲನಿಗೆ ಪೂರೈಕೆ ಮಾಡಬೇಕಿದ್ದ ನೀರನ್ನು ಕಂಬದಕೋಣೆ ಗ್ರಾಮ ಪಂಚಾಯಿತಿ ಏಕಾಏಕಿ ನಿಲ್ಲಿಸಿ ಜನಸಾಮಾನ್ಯರ ಬದುಕಿನೊಟ್ಟಿಗೆ ಚೆಲ್ಲಾಟವಾಡುತ್ತಿದೆ. ಜನತಾ ಕಾಲನಿಯಲ್ಲಿ ಎಪ್ಪತ್ತಕ್ಕೂ ಮಿಕ್ಕ ಮನೆಗಳಿದ್ದು, ಮಕ್ಕಳು ಮರಿ ಸೇರಿ ಏಳುನೂರರಷ್ಟು ಜನರಿದ್ದಾರೆ. ಪ್ರತಿದಿನ ಕುಡಿಯುವ ನೀರಿಗಾಗಿ ತಮ್ಮ ಶ್ರಮ ವ್ಯಯ ಮಾಡುತ್ತಿದ್ದಾರೆ. ಕೂಲಿಗೆ ಹೋದರೆ ನೀರಿಲ್ಲ. ನೀರು ಸಂಗ್ರಹಕ್ಕೆ ಇಳಿದರೆ ಹಿಟ್ಟಿಲ್ಲ. ಈ ಎರಡರಲ್ಲಿ ಯಾವುದು ಆಯ್ಕೆ ಮಾಡಿಕೊಳ್ಳಬೇಕು ಎನ್ನುವ ದ್ವಂದ್ವದಲ್ಲಿ ಕಾಲನಿ ಜನರಿದ್ದಾರೆ.

 

ಇರುವುದು ಎರಡು ಕೊಳವೆ, ಒಂದು ತೆರೆದ ಬಾವಿ. ತೆರದ ಬಾವಿ ಬತ್ತಿ ಒಂದೆರಡು ತಿಂಗಳಾಗಿದೆ. ಮತ್ತೊಂದು ಕೊಳವೆ ಬಾವಿ ನೀರು ನಿಲ್ಲಿಸಿದೆ. ಇರುವ ಒಂದೇ ಕೊಳವೆ ಬಾವಿಯಿಂದ ಇಡೀ ಜನತಾ ಕಾಲನಿ ನೀರು ಪೂರೈಕೆ ಮಾಡಿಕೊಳ್ಳಬೇಕು. ಹತ್ತು ಕೊಡ ನೀರೆತ್ತುವರೆಗೆ ನೀರು ಶುದ್ಧವಾಗಿರುತ್ತದೆ. ನಂತರ ಕೊಳಕು ನೀರು ಕಿಲಬು ವಾಸನೆ. ಅಚ್ಚರಿ ಎಂದರೆ ಪೈಪ್‌ಲೈನ್ ನಳ್ಳಿ ಎಲ್ಲಾ ಫಿಟ್ ಮಾಡಲಾಗಿದೆ. ನಳ್ಳಿ ತಿರುಗಿಸಿದರೆ ಬರೋದು ಗಾಳಿ! ಕುಂದಾಪ್ರ ಡಾಟ್ ಕಾಂ ಸುದ್ದಿ.


ಚುನಾವಣೆಗೂ ಮುನ್ನಾ ಗ್ರಾಪಂ ಪ್ರತಿ ಮನೆಗೆ ಐದು ಕೊಡ ನೀರುಕೊಡುತ್ತಿದ್ದು, ಬ್ಯಾನರ್ ವಿಷಯ ರಾಜಕೀಯ ನಾಯಕರ ಕೆಂಗಣ್ಣಿಗೆ ಗುರಿಯಾಗಿತ್ತು. ರಾಜಕೀಯ ಪಕ್ಷದ ಮುಖಂಡರೊಬ್ಬರು ಬ್ಯಾನರ್ ತೆಗೆಯಲು ಹೇಳಿದರೂ ತೆಗೆಯಲಿಲ್ಲ ಎಂಬ ಒಂದೇ ಉದ್ದೇಶದಿಂದ ಗ್ರಾಪಂ ನೀರು ಕೊಡುವುದು ನಿಲ್ಲಿಸಿದೆ ಎಂದು ಸ್ಥಳೀಯರು ನೇರವಾಗಿ ಆರೋಪಿಸುತ್ತಾರೆ. ನೀರು ಕೊಡುವಂತೆ ಗ್ರಾಪಂ ಪಿಡಿಒ ಕೇಳಿದರೆ ಅವರು ಕೊಟ್ಟ ಉತ್ತರ.. ಅಧ್ಯಕ್ಷರು ನೀರು ಕೊಡಬಾರದು ಎಂದಿದ್ದಾರೆ ಅದಕ್ಕಾಗಿ ನಿಲ್ಲಿಸಿದ್ದೇವೆ..! ಇಂದೆತಾ ವ್ಯವಸ್ಥೆ.

  • ಚುನಾವಣೆ ಮುಗಿಯುವ ತನಕ ಕಾಲನಿಯ ಮನೆಗೆ ಐದು ಕೊಡ ನೀರಂತೆ ನೀರು ಕಂಬದಕೋಣೆ ಗ್ರಾಮ ಪಂಚಾಯಿತಿ ನೀಡುತ್ತಿತ್ತು. ನಾವು ನಮ್ಮ ಸಮಸ್ಯೆ ಪರಿಹಾರಕ್ಕೆ ಚುನಾವಣೆ ಬಹಿಷ್ಕಾರ ಬ್ಯಾನರ್ ಹಾಕಿದ್ದು, ಅದನ್ನೇ ನೆವವಾಗಿಟ್ಟುಕೊಂಡು ಕುಡಿಯುವ ನೀರು ಮತದಾನ ಆದ ಮರುದಿನದಿಂದ ಬಂದ್ ಮಾಡಿದ್ದಾರೆ. ನಾವೆಲ್ಲಾ ಕೂಲಿ ಮಾಡಿ ಜೀವನ ನಡೆಸುತ್ತಿದ್ದು, ನೀರು ತಂದು ಸ್ಟಾಕ್ ಮಾಡುವುದಾ ಹೊಟ್ಟೆ ತುಂಬಿಸಿಕೊಳ್ಳುವುದಾ ಎನ್ನೋದು ಗೊತ್ತಾಗುತ್ತಿಲ್ಲ. ಗ್ರಾಮ ಪಂಚಾಯಿತಿ ಕುಡಿಯುವ ನೀರು ಪೂರೈಕೆ ಮಾಡಿದ್ದರೆ ಕಾಲನಿಯ ಮಹಿಳೆಯರು ಖಾಲಿ ಕೊಡ ಹಿಡಿದು ಕಂಬದಕೋಣೆ ಗ್ರಾಪಂ ಮುಂದೆ ಧರಣಿ ನಡೆಸುತ್ತೇವೆ. – ಚಂದು, ಸ್ಥಳೀಯ ಹಿರಿಯ ಮಹಿಳೆ

 

  • ಕೊಳವೆ ಬಾವಿಯಿಂದ ಎಷ್ಟು ಜೋರು ನೀರು ಜಗ್ಗಿದರೂ ಕಿರುಬೆರಳಿನ ಗಾತ್ರದಲ್ಲಿ ನೀರು ಬರುತ್ತದೆ. ಒಂದು ಕೊಡ ನೀರು ತುಂಬಿಸಕೊಳ್ಳುವದರಲ್ಲಿ ಕೊಳವೆ ಬಾವಿ ಹ್ಯಾಂಡಲ್ ಹೊಡೆದು ಎದೆ ನೋವು ಆರಂಭವಾಗುತ್ತದೆ. ನೀರು ಕೂಡಾ ಕಿಲುಬಾಗಿದ್ದು, ನೀರಲ್ಲಿ ಕಬ್ಬಿಣಿದ ಕಿಲುಬು ಬರುತ್ತಿದ್ದು, ಅದನ್ನು ಕೊಡಿದ ನಮ್ಮ ಆರೋಗ್ಯ ಹಾಳಾದರೆ ಮದ್ದು ಮಾಡೋದು ಯಾರು? ಗ್ರಾಪಂ ಪಿಡಿಒ ನೀರು ಕೊಡುವಂತೆ ಕೇಳಿದರೆ ಅಧ್ಯಕ್ಷರು ನೀರು ಕೊಡಬಾರದು ಎಂದು ಹೇಳಿದ್ದು, ಅಧ್ಯಕ್ಷರನ್ನೇ ಕೇಳಿ ಎಂದು ನಮಗೆ ಧಮ್ಕಿ ಹಾಕುತ್ತಾರೆ. ಚುನಾವಣೆ ಬಹಿಷ್ಕಾರಕ್ಕೂ ಕುಡಿಯುವ ನೀರಿಗೂ ಎತ್ತಿಂದೆತ್ತ ಸಂಬಂಧ. – ರಾಜೀವಿ, ಜನತಾ ಕಾಲನಿ.

 

  • ಕಂಬದಕೋಣೆ ಗ್ರಾಮ ಸ್ಥಳೀಯ ಗ್ರಾಪಂ ಸದಸ್ಯ ನನ್ನ ಗಮನಕ್ಕೂ ತಾರದೆ, ಕುಡಿಯುವ ನೀರು ಏಕಾಏಕಿ ನಿಲ್ಲಿಸಿದ್ದು ಅಕ್ಷಮ್ಯ. ಇಡೀ ಕಾಲನಿ ವಾಸಿಗಳು ನೀರಿಗಾಗಿ ಪರದಾಡುತ್ತಿದ್ದು, ಮಾನವೀಯತೆ ಮರೆತ ಗ್ರಾಪಂ ಕುಡಿಯುವ ನೀರು ಮುಂದಿಟ್ಟುಕೊಂಡು ರಾಜಕೀಯ ಮಾಡುತ್ತಿದೆ. ನೀರು ಕೊಡದಿದ್ದರೆ ಹೋರಾಟ ಅನಿವಾರ್ಯ. – ಶೇಷು ದೇವಾಡಿಗ, ಗ್ರಾಮ ಪಂಚಾಯಿತಿ ಸದಸ್ಯ ಕಂಬದಕೋಣೆ.

 

  • ಕಂಬದಕೋಣೆ ಗ್ರಾಮ ಪಂಚಾಯಿತಿ ಜನತಾ ಕಾಲಿನಿಗೆ ನೀರು ಪೂರೈಕೆ ಮಾಡುತ್ತಿರುವುದನ್ನು ನಿಲ್ಲಿಸಿರುವುದು ಏಕೆ ಎಂದು ಗ್ರಾಪಂ ಬಿಡಿಒ ಮೂಲಕ ತಿಳಿದು, ತಕ್ಷಣ ಕುಡಿಯುವ ನೀರು ಪೂರೈಕೆ ಮಾಡುವಂತೆ ಸೂಚಿಸಲಾಗುತ್ತದೆ. ಮತದಾನ ಬಹಿಷ್ಕಾರ ಮುಂದಿಟ್ಟುಕೊಂಡು ಕುಡಿಯುವ ನೀರು ವ್ಯವಸ್ಥೆ ನಿಲ್ಲಿಸಿರುವುದು ತಪ್ಪು. – ಡಾ| ಮಧುಕೇಶ್ವರ, ಎಸಿ, ಕುಂದಾಪುರ

Leave a Reply

Your email address will not be published. Required fields are marked *

nine − 1 =