ಹೇರಂಜಾಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ: ನೂತನ ಶಿಲಾದೇಗುಲ ಸಮರ್ಪಣೆ

Call us

Call us

ದೇವಳದ ಪುನರ್‌ಪ್ರತಿಷ್ಠೆ ಹಾಗೂ ಬ್ರಹ್ಮಕಶೋತ್ಸವ

Click Here

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಹೇರಂಜಾಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ನೂತನ ಶಿಲಾದೇಗುಲ ಸಮರ್ಪಣೆ, ಪುನರ್‌ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವದ ಧಾರ್ಮಿಕ ವಿಧಿಗಳು ಮಾರ್ಚ್ 30ರಿಂದ ಏಪ್ರಿಲ್ 1ರ ವರೆಗೆ ಮೂಎಉ ದಿನಗಳ ಕಾಲ ದಿವ್ಯ ಸನ್ನಿಧಿಯಲ್ಲಿ ಜರುಗಲಿದೆ.

Click here

Click Here

Call us

Visit Now

ಕಾರಣಿಕ ಕ್ಷೇತ್ರ:
ಹೇರಂಜಾಲು ದುರ್ಗಾಪರಮೇಶ್ವರಿ ಸನ್ನಿಧಿಯು ನಂಬಿದವರಿಗೆ ಇಂಬು ಕೊಡುವ ಕಾರಣಿಕ ಕ್ಷೇತ್ರ. ಒಂದು ಸಾವಿರ ವರ್ಷಕ್ಕೂ ಸುದೀರ್ಘ ಐತಿಹ್ಯ ಹೊಂದಿರುವ ಶ್ರೀ ದುರ್ಗಾಪರಮೇಶ್ವರಿಯ ಸನ್ನಿಧಿಯು ಅನಾದಿ ಕಾಲದಿಂದಲೂ ಭಕ್ತರ ಇಷ್ಟಾರ್ಷಗಳನ್ನು ನೆರವೇರಿಸುವ ಶೃದ್ಧಾಕೇಂದ್ರವಾಗಿ ಉಳಿದಿದೆ. ಕ್ಷೇತ್ರವನ್ನು ದುರ್ಗಾದೇವಿ ಎಂದು ದಾಖಲೆಗಳಲ್ಲಿ ನಮೂದಿಸಿದ್ದರೂ ಸ್ಥಳೀಯರು ದುರ್ಗಾಪರಮೇಶ್ವರಿ ಎಂದೇ ದೇವಿಯನ್ನು ಪೂಜಿಸುತ್ತಾ ಬಂದಿದ್ದಾರೆ.  ಕುಂದಾಪ್ರ ಡಾಟ್ ಕಾಂ ಸುದ್ದಿ.

ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆವರಣದಲ್ಲಿಯೇ ಶ್ರೀ ಉಮಾಮಹೇಶ್ವರ ದೇವರ ಸನ್ನಿಧಿ ಇದೆ. ಎರಡು ಕಡೆಗಳಲ್ಲಿ ನಾಗದೇವರ ಸಾನಿಧ್ಯ, ದೇವಳದ ಆಗ್ನೇಯದಲ್ಲಿ ರಾಮಮಂದಿರ, ಪಶ್ಚಿಮದಲ್ಲಿ ಕೆರೆ, ಪೂರ್ವದಲ್ಲಿ ಅಶ್ವಥ ಕಟ್ಟೆ ಇದ್ದು ಭಕ್ತರನ್ನು ಹರಸಿವೆ. ದೇವಳದ ಆನುವಂಶೀಯ ಮೊಕ್ತೇಸರ ಹಾಗೂ ಪ್ರಧಾನ ಅರ್ಚಕರಾಗಿ ಎಚ್. ಶ್ರೀಧರ ಉಡುಪ ದೇವಿಯ ಸೇವಾ ಕೈಂಕರ್ಯದಲ್ಲಿ ತೊಡಗಿದ್ದಾರೆ.

ಜೀಣೋದ್ಧಾರಕ್ಕೆ ಚಾಲನೆ:
ಸಾವಿರ ವರ್ಷದ ಐತಿಹ್ಯ ಇರುವ ಈ ದೇವಸ್ಥಾನವು ಕಾಲಾಂತರದಲ್ಲಿ ಶಿಥಿಲಾವಸ್ಥೆ ತಲುಪಿದ ಕಾರಣ ಐದು ವರ್ಷಗಳ ಹಿಂದೆ ರೂ1.45 ಕೋಟಿ ವೆಚ್ಚದಲ್ಲಿ ದೇವಸ್ಥಾನದ ಮರು ನಿರ್ಮಾಣ ಚಾಲನೆ ನೀಡಲಾಯಿತು. ಆರಂಭದಲ್ಲಿ ನಿಧಾನಗತಿಯಲ್ಲಿ ಸಾಗಿದ ಕಾಮಗಾರಿಯು ಕ್ರಮೇಣ ಆನುವಂಶೀಯ ಮೊಕ್ತೇಸರರಾದ ಎಚ್. ಶ್ರೀಧರ ಉಡುಪ ಅವರ ಮುಂದಾಳತ್ವದಲ್ಲಿಯೇ ಮತ್ತೆ ಬಿರುಸುಗೊಂಡಿತು. ಈ ದೇವತಾ ಕಾರ್ಯಕ್ಕೆ ಸೂಕ್ತ ಸಲಹೆಯಿತ್ತು, ಸಕಾಲಕ್ಕೆ ಆರ್ಥಿಕ ಸಹಾಯವನ್ನಿತ್ತ ಪೆರ್ಡೂರು ಮಹತೋಬಾರ ಅನಂತಪದ್ಮನಾಭ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರ ಸದಾನಂದ ಸೇರ್ವೆಗಾರ್, ಜೀಣೋದ್ಧಾರಕ್ಕೆ ಅಮೂಲ್ಯ ಕೊಡುಗೆಯನ್ನಿತ್ತ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹಾಗೂ ಹೇರಂಜಾಲಿನ ಸಮಸ್ತ ಗ್ರಾಮಸ್ಥರ ಸಹಕಾರದಿಂದ ದುರ್ಗಾಪರಮೇಶ್ವರಿ ಸನ್ನಿಧಿಯು ಮರುನಿರ್ಮಾಣಗೊಂಡಿದೆ. ಕುಂದಾಪ್ರ ಡಾಟ್ ಕಾಂ ಸುದ್ದಿ.

Call us

ಇನ್ನು ರಾಮಮಂದಿರ, ಶ್ರೀ ಉಮಾಮಹೇಶ್ವರ ದೇವರ ಗರ್ಭಗೃಹ ನಿರ್ಮಾಣ, ಮೌಳಿ, ಕೆರೆಯ ಪುನರ್‌ನಿರ್ಮಾಣ, ಪಾಕಶಾಲೆ, ಯಾಗಶಾಲೆಗಳು ಜೀಣೋದ್ಧಾರಗೊಳ್ಳಬೇಕಿದೆ.

ನೂತನ ಶಿಲಾ ದೇಗುಲ ಸಮರ್ಪಣೆ, ಬ್ರಹ್ಮಕಲಶಾಭಿಷೇಕ:
ವೇ. ಮೂ. ಯಜ್ಞನಾರಾಯಣ ಸೋಮಯಾಜಿ ಅವರ ಅಧ್ವ್ವರ್ಯದಲ್ಲಿ ಮೂರು ದಿನಗಳ ಧಾರ್ಮಿಕ ಕಾರ್ಯಗಳು ಜರುಗಲಿವೆ. ಮಾಚ್.30 ಮತ್ತು 31ರಂದು ದೇವಳದಲ್ಲಿ ವಿವಿಧ ಧಾರ್ಮಿಕ ವಿಧಿ ವಿಧಾನಗಳು ನೆರವೇರಲಿದ್ದು, ಏ.1ರಂದು ಜರುಗುವ ಬ್ರಹ್ಮಕಲಶೋತ್ಸವದಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮಿಗಳು ಉಪಸ್ಥಿತರಿರಲಿದ್ದಾರೆ.

ಬಳಿಕ ಮಧ್ಯಾಹ್ನ ಮಹಾ ಅನ್ನ ಸಂತರ್ಪಣೆ ನಡೆಯಲಿದೆ. ಸಂಜೆ 7ರಿಂದ ನಡೆಯುವ ಧಾರ್ಮಿಕ ಸಭೆಯಲ್ಲಿ ಸ್ವಾಮೀಜಿಯು ಆಶೀರ್ವಚನ ನೀಡಲಿದ್ದಾರೆ. ಧಾರ್ಮಿಕ ಸಭೆಯಲ್ಲಿ ಯಜ್ಞನಾರಾಯಣ ಸೋಮಯಾಜಿ, ಪಡುಕೋಣೆಯ ನಾಗಯಕ್ಷಿ ಪಾತ್ರಿ ರಾಜೇಶ ಹೆಬ್ಬಾರ್, ಮೊಕ್ತೇಸರ ಶ್ರೀಧರ ಉಡುಪ ಉಪಸ್ಥಿತರಿರುವರು. ಅದೇ ದಿನ ರಾತ್ರಿ ಧಾರೇಶ್ವರ ಯಕ್ಷ ಬಳಗದಿಂದ ಯಕ್ಷಗಾನ ಪ್ರದರ್ಶನ ಜರುಗಲಿದೆ. ಕುಂದಾಪ್ರ ಡಾಟ್ ಕಾಂ ಸುದ್ದಿ.

Heranjalu temple copy

Leave a Reply

Your email address will not be published. Required fields are marked *

11 − 9 =