ಹಕ್ಲಾಡಿ ಗ್ರಾಮದಲ್ಲೊಂದು ಹೈಕ್ಲಾಸ್ ಬಸ್ ತಂಗುದಾಣ ಉದ್ಘಾಟನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ,ಸೆ.2: ತಾಲೂಕಿನ ಹಕ್ಲಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಂದಬಾರಂದಾಡಿಯಲ್ಲಿ ಹೈಕ್ಲಾಸ್ ತಂಗುದಾಣವೊಂದು ನಿರ್ಮಾಣಗೊಂಡಿದ್ದು, ಇಂದು ಉದ್ಘಾಟನೆಗೊಂಡಿದೆ. ಬಸ್ ತಂಗುದಾಣವು ವಿಶ್ರಾಂತಿ ಕೊಠಡಿ, ಅಂಗಡಿ ಕೋಣೆ, ಶೌಚಾಲಯ, ಬಾತ್ ರೂಮ್ ಮುಂತಾದ ಸೌಲಭ್ಯ ಒಳಗೊಂಡಿದ್ದು, ಗ್ರಾಮೀಣ ಭಾಗದಲ್ಲಿ ಉತ್ಕೃಷ್ಟ ದರ್ಜೆಯ ತಂಗುದಾಣ ನಿರ್ಮಿಸಿದಂತಾಗಿದೆ.

ಹೊಳ್ಮಗೆ ಕರುಣಾಕರ ಶೆಟ್ಟಿ ಕಾವ್ರಾಡಿ ಸ್ಮರಣಾರ್ಥ 15 ಲಕ್ಷ ವೆಚ್ಚದಲ್ಲಿ ಪುತ್ರ ನಿಕಟಪೂರ್ವ ಹಕ್ಲಾಡಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸುಭಾಸ್ ಶೆಟ್ಟಿ ಹೊಳ್ಮಗೆ ಹಾಗೂ ಸಹೋದರಿಯರು ನಿರ್ಮಿಸಿದ ಸೂಪರ್ ಸ್ಪೆಷಾಲಿಟಿ ಬಸ್ ತಂಗುದಾಣ ನಿರ್ಮಿಸಿದ್ದು, ಗ್ರಾಮ ಪಂಚಾಯತ್ ನಿರ್ವಹಣೆ ಜವಾಬ್ದಾರಿ ಹೊತ್ತಿದೆ.

ನಿವೃತ್ತ ಶಿಕ್ಷಕ ಗೋಪಾಲ ಶೆಟ್ಟಿ ಬಸ್ ತಂಗುದಾಣ ಉದ್ಘಾಟಿಸಿದರು. ಹಕ್ಲಾಡಿ ಚೆನ್ನಕೇಶವ ಲಯನ್ಸ್ ಕ್ಲಬ್ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಬಾಳೆಮನೆ ಅಧ್ಯಕ್ಷತೆ ವಹಿಸಿದ್ದರು. ಲಯನ್ಸ್ ಅಧ್ಯಕ್ಷ ಎನ್.ಎಂ.ಹೆಗ್ಡೆ, ಲಯನ್ಸ್ ಪದಾಧಿಕಾರಿಗಳಾದ ವಿ. ಜಿ. ಶೆಟ್ಟಿ, ಶಂಕರ ಹೆಗ್ಡೆ ಹೊಳ್ಮಗೆ, ಹಕ್ಲಾಡಿ ಗ್ರಾಪಂ ಪಿಡಿಒ ಚಂದ್ರ ಬಿಲ್ಲವ, ಉಮಾನಾಥ ಹೆಗ್ಡೆ ಸಲ್ವಾಡಿ ಇದ್ದರು. ಶಿಕ್ಷಕ ಸಂಜೀವ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು. ಹಕ್ಲಾಡಿ ಕೊಳ್ಳೆಬೈಲು ಸೂರಪ್ಪ ಶೆಟ್ಟಿ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಡಾ. ಕಿಶೋರ್ ಶೆಟ್ಟಿ ಸ್ವಾಗತಿಸಿ ನಿರೂಪಿಸಿದರು.

ಇದನ್ನೂ ಓದಿ:
► ಕಾಂಗ್ರೆಸ್‌ ನಾಯಕ ಹರ್ಕೂರು ಮಂಜಯ್ಯ ಶೆಟ್ಟಿ ಬಿಜೆಪಿಗೆ ಸೇರ್ಪಡೆ – https://kundapraa.com/?p=40672 .

 

Leave a Reply

Your email address will not be published. Required fields are marked *

five + eleven =