ಕುಂದಾಪುರದಲ್ಲಿ ಮುಂದುವರಿದ ಹಿಜಾಬ್ – ಕೇಸರಿ ಶಾಲು ಸಂಘರ್ಷ, ಪ್ರತಿಭಟನೆ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಹಿಜಾಬ್ ಹಾಗೂ ಕೇಸರಿ ಶಾಲು ಸಂಘರ್ಷ ಕುಂದಾಪುರದಲ್ಲಿ 4ನೇ ದಿನಕ್ಕೆ ಕಾಲಿರಿಸಿದ್ದು, ಶನಿವಾರ ಖಾಸಗಿ ಕಾಲೇಜುಗಳಲ್ಲಿ ಕೆಲ ಕಾಲ ಬಿಗುವಿನ ವಾತವರಣ ನಿರ್ಮಾಣವಾಗಿದ್ದು, ಮುಖ್ಯರಸ್ತೆಯಲ್ಲಿ ಕೇಸರಿ ಶಾಲು ಧರಿಸಿ ಮೆರವಣಿಗೆ ಸಾಗಿದ ಘಟನೆ ನಡೆದಿದೆ.

Call us

Click here

Click Here

Call us

Call us

Visit Now

Call us

ಕುಂದಾಪುರದ ಆರ್.ಎನ್.ಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರನ್ನು ತರಗತಿ ಪ್ರವೇಶಕ್ಕೆ ಅವಕಾಶ ನೀಡಿದ ಬಗ್ಗೆ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಕಾಲೇಜಿಗೆ ರಜೆ ಘೋಷಿಸಲಾಯಿತು. ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಕುಂದಾಪುರ ಶಾಸ್ತ್ರೀವೃತ್ತದ ತನಕ ಘೋಷಣೆ ಕೂಗುತ್ತಾ ತೆರಳಿದರು.

ಭಂಡಾರ್ಕಾರ್ಸ್ ಕಾಲೇಜಿನ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಕುಂದೇಶ್ವರ ದೇವಸ್ಥಾನದಿಂದ ಜೈ ಶ್ರೀರಾಮ್, ಜೈ ಶಿವಾಜಿ ಎಂದು ಘೋಷಣೆ ಕೂಗುತ್ತಾ ಕಾಲೇಜಿನತ್ತ ಹೆಜ್ಜೆ ಹಾಕಿದರು. ಯಾವುದೇ ವಿದ್ಯಾರ್ಥಿಕೇಸರಿ ಶಾಲು, ಹಿಜಾಬ್ ಧರಿಸಿ ಕಾಲೇಜು ಆವರಣ ಪ್ರವೇಶ ಮಾಡಬಾರದೆಂದು ಕಾಲೇಜು ಆಡಳಿತದ ಸೂಚನೆ ಹಿನ್ನೆಲೆಯಲ್ಲಿ ಪ್ರತಿಯೊಂದು ವಿದ್ಯಾರ್ಥಿಯನ್ನು ಕಾಲೇಜು ಸಿಬ್ಬಂದಿಗಳು ಗೇಟ್ ಹತ್ತಿರ ತಪಾಸಣೆ ಮಾಡಿಯೇ ಕಾಲೇಜು ಒಳಬಿಟ್ಟರು.

ಹಿಜಾಬ್ ಸಂಘರ್ಷ ಪ್ರಾರಂಭವಾದ ಕುಂದಾಪುರ ಸರಕಾರಿ ಪದವಿ ಪೂರ್ವ ಕಾಲೇಜಿಗೆ ಶನಿವಾರ ರಜೆ ನೀಡಲಾಗಿತ್ತು. ಇನ್ನಿತರ ಕಾಲೇಜು ಆವರಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಕೆ.ಎಸ್.ಆರ್.ಪಿ ಹಾಗೂ ಡಿ.ಎ.ಆರ್ ವಾಹನ ನಿಯೋಜಿಸಲಾಗಿತ್ತು.

ಇದನ್ನೂ ಓದಿ:

Call us

ಇದನ್ನೂ ಓದಿ:
► ಕುಂದಾಪುರ: ಪಿಯು ಕಾಲೇಜಿನಲ್ಲಿ ಹಿಜಾಬ್ ವಿರುದ್ಧ ಕೇಸರಿ ಶಾಲು ಅಸ್ತ್ರ! ಮುಗಿಯದ ವಿವಾದ – https://kundapraa.com/?p=57084 .
► ಕುಂದಾಪುರ: ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರಿಗೆ ಕಾಲೇಜು ಆವರಣ ಪ್ರವೇಶ ನಿರಾಕರಣೆ – https://kundapraa.com/?p=57096 .
► ಕುಂದಾಪುರ: ಮೂರನೇ ದಿನಕ್ಕೆ ಹಿಜಾಬ್ ವಿವಾದ, ಪೋಷಕರು – ಸಂಘಟಕರ ವಾಗ್ವಾದ – https://kundapraa.com/?p=57132 .
► ಬೈಂದೂರು ಸರ್ಕಾರಿ ಪಿಯು ಕಾಲೇಜಿನಲ್ಲಿಯೂ ಹಿಜಾಬ್ ಕೇಸರಿ ಶಾಲು ವಿವಾದ – https://kundapraa.com/?p=57146 .

Leave a Reply

Your email address will not be published. Required fields are marked *

1 × two =