ಕುಂದಾಪುದಲ್ಲಿ ಟಿಪ್ಪು ಜನ್ಮ ದಿನಾಚರಣೆ – ಹಿಂದೂ ಸಂಘಟನೆಗಳಿಂದ ಕಪ್ಪು ಬಾವುಟ ಪ್ರದರ್ಶನ

Call us

ಕುಂದಾಪುರ: ಮೈಸೂರು ಹುಲಿ ಎಂಬ ಬಿರುದಾಂಕಿತ ರಾಜ ಹಜರತ್ ಟಿಪ್ಪು ಸುಲ್ತಾನ್ ಜನ್ಮದಿನಾಚರಣೆಯನ್ನು ಕುಂದಾಪುರದ ತಾಲೂಕು ಆಡಳಿತ, ತಾಲೂಕು ಪಂಚಾಯತ್ ಹಾಗೂ ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಆಚರಿಸಲಾಯಿತು.

Call us

Call us

ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ. ಹಿರಿಯಣ್ಣಯ್ಯ ಟಿಪ್ಪುವಿನ ಪೋಟೋಗೆ ಪುಷ್ಪಾರ್ಪನೆಗೈದು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಕುಂದಾಪುರ ನಗರ ಯೋಜನಾ ಪ್ರಾಧಿಕಾರಿ ಅಧ್ಯಕ್ಷ ಜಾಕೋಜ್ ಡಿಸೋಜ, ಡಿವೈಎಸ್ಪಿ ಮಂಜುನಾಥ ಶೆಟ್ಟಿ, ತಹಶೀಲ್ದಾರ್ ಗಾಯತ್ರಿ ನಾಯಕ್, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಎನ್. ನಾರಾಯಣ ಸ್ವಾಮಿ, ತಾಲೂಕು ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿ ಬಿ. ಎಸ್. ಮಾದರ್, ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಶೋಭಾ ಮೊದಲಾದವು ಉಪಸ್ಥಿತರಿದ್ದರು. ಬಸ್ರೂರು ಶಾರದಾ ಕಾಲೇಜಿನ ಪ್ರಾಧ್ಯಾಪಕ ಡಾ| ಎಂ. ದಿನೇಶ್ ಹೆಗ್ಡೆ ಟಿಪ್ಪು ಸುಲ್ತಾನರ ಸಾಧನೆಗಳ ಕುರಿತು ಉಪನ್ಯಾಸವನ್ನಿತ್ತರು. (ಕುಂದಾಪ್ರ ಡಾಟ್ ಕಾಂ ಸುದ್ದಿ)

[quote font_size=”15″ bgcolor=”#ffffff” bcolor=”#000000″ arrow=”yes”]ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ. ಪ್ರತಿಭಟನಾಕಾರರ ಬಂಧನ
ಅತ್ತ ತಾಲೂಕು ಆಡಳಿತ ಟಿಪ್ಪು ಜನ್ಮ ದಿನಾಚರಣೆಯನ್ನು ಆಚರಿಸುತ್ತಿದ್ದರೇ ಇತ್ತ ತಾಲೂಕು ಪಂಚಾಯತ್ ಕಛೇರಿ ಎದುರು ನೂರಾರು ಸಂಖ್ಯೆಯಲ್ಲಿ ಸೇರಿದ್ದ ಹಿಂದೂ ಸಂಘಟನೆಗಳ ಕಾರ್ಯಕರ್ತರು ಜಯಂತಿ ಆಚರಣೆಗೆ ವಿರೋಧ ವ್ಯಕ್ತಪಡಿಸಿದರು. ಬಾಯಿಗೆ ಕಪ್ಪು ಬಟ್ಟೆ ಕಟ್ಟಿ, ಕಪ್ಪು ಬಾವುಟ ಪ್ರದರ್ಶಿಸಿ ಮೌನ ಪ್ರತಿಭಟನೆಗಿಳಿದ ಕಾರ್ಯಕರ್ತರುಗಳು ಕಪ್ಪು ದಿನಾಚರಣೆ ಆಚರಿಸಿದರು. ಸರಕ್ಷತೆಯ ದೃಷ್ಟಿಯಿಂದ ಕಪ್ಪು ಬಾವುಟ ತೋರಿಸಿದವರನ್ನು ಬಂಧಿಸಿ ಕೊನೆಗೆ ಬಿಡುಗಡೆಗೊಳಿಸಲಾಯಿತು. ತಾಲೂಕು ಪಂಚಾಯತ್ ಎದುರು ಬಿಗಿ ಪೊಲೀಸ್ ಬಂದೋವಸ್ತ್ ಏರ್ಪಡಿಸಲಾಗಿತ್ತು. (ಕುಂದಾಪ್ರ ಡಾಟ್ ಕಾಂ ಸುದ್ದಿ) ಇನ್ನೊಂದೆಡೆ ಟಿಪ್ಪು ಜಯಂತಿ ಆಚರಣೆಗೆ ಕುಂದಾಪುರದವರ ಸಾಮಾಜಿಕ ತಾಣಗಳಲ್ಲಿಯೂ ಭಾರಿ ವಿರೋಧ ವ್ಯಕ್ತವಾಗಿದೆ. ಫೇಸ್ಬುಕ್, ವಾಟ್ಸಪ್ ಪ್ರೋಫೈಲ್ ಗೆ ಕಪ್ಪು ಬಾವುಟ, ಕಪ್ಪು ಕರ್ನಾಟಕದ ಚಿತ್ರ ಹಾಕಿಕೊಳ್ಳುವ ಮೂಲಕ ತಮ್ಮ ವಿರೋಧವನ್ನು ವ್ಯಕ್ತಪಡಿಸಿದ್ದಾರೆ.[/quote]

Call us

Call us

Hindu activists opposed to celebrate Tippu's Birthday in Kundapura taluk panchayanth (1) Hindu activists opposed to celebrate Tippu's Birthday in Kundapura taluk panchayanth (2) Hindu activists opposed to celebrate Tippu's Birthday in Kundapura taluk panchayanth (3) Hindu activists opposed to celebrate Tippu's Birthday in Kundapura taluk panchayanth (4) Hindu activists opposed to celebrate Tippu's Birthday in Kundapura taluk panchayanth (5) Hindu activists opposed to celebrate Tippu's Birthday in Kundapura taluk panchayanth (6) Hindu activists opposed to celebrate Tippu's Birthday in Kundapura taluk panchayanth (7) Hindu activists opposed to celebrate Tippu's Birthday in Kundapura taluk panchayanth (8) Hindu activists opposed to celebrate Tippu's Birthday in Kundapura taluk panchayanth (9) Hindu activists opposed to celebrate Tippu's Birthday in Kundapura taluk panchayanth (10) Hindu activists opposed to celebrate Tippu's Birthday in Kundapura taluk panchayanth (11) Hindu activists opposed to celebrate Tippu's Birthday in Kundapura taluk panchayanth (12) Hindu activists opposed to celebrate Tippu's Birthday in Kundapura taluk panchayanth (13) Hindu activists opposed to celebrate Tippu's Birthday in Kundapura taluk panchayanth (14)

Leave a Reply

Your email address will not be published. Required fields are marked *

20 − 18 =