ಜಾನುವಾರು ಕಳೇಬರ ಎಳೆದೊಯ್ದ ಪ್ರಕರಣ: ಟೋಲ್ ಪ್ಲಾಜಾ ಬಳಿ ಹಿಂದೂಪರ ಸಂಘಟನೆಗಳ ಪ್ರತಿಭಟನೆ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ರಾಷ್ಟ್ರೀಯ ಹೆದ್ದಾರಿಯಲ್ಲಿ ಟೋಯಿಂಗ್ ವಾಹನದ ಹಿಂಭಾಗ ಜಾನುವಾರು ಕಳೇಬರ ಕಟ್ಟಿ ಎಳೆದೊಯ್ದ ಹೆದ್ದಾರಿ ಗುತ್ತಿಗೆದಾರ ಕಂಪೆನಿಯ ವಿರುದ್ದ ಹಿಂದೂ ಹಿತರಕ್ಷಣ ವೇದಿಕೆ ಬೈಂದೂರು ನೇತೃತ್ವದಲ್ಲಿ ವಿಶ್ವ ಹಿಂದೂ ಪರಿಷತ್ ಬಜರಂಗದಳ ಬೈಂದೂರು ಪ್ರಖಂಡ, ಹಿಂದೂ ಜಾಗರಣ ವೇದಿಕೆ, ಸ್ವದೇಶಿ ಬಳಗ ಹಾಗೂ ಇನ್ನಿತರ ಹಿಂದೂಪರ ಸಂಘಟನೆಗಳಿಂದ ಸೋಮವಾರ ಶಿರೂರು ಟೋಲ್ ಪ್ಲಾಜಾ ಬಳಿ ಬೃಹತ್ ಪ್ರತಿಭಟನೆ ನಡೆಯಿತು.

Call us

Call us

Call us

ವಿಶ್ವ ಹಿಂದೂ ಪರಿಷತ್ – ಬಜರಂಗದಳದ ಜಿಲ್ಲಾ ಉಪಾಧ್ಯಕ್ಷ ಶ್ರೀಧರ ಬಿಜೂರು ಜಾನುವಾರುಗಳ ಕಳೇಬರವನ್ನು ಪೈಶಾಚಿಕವಾಗಿ ಏಳೆದೊಯ್ದ ಹೆದ್ದಾರಿ ಗುತ್ತಿಗೆದಾರ ಕಂಪೆನಿಯ ಕೃತ್ಯ ಹೇಯವಾಗಿದೆ ಎಂದು ಕಿಡಿಕಾರಿದರು. ಶಿರೂರು ಟೋಲ್ ಗೇಟ್‌ನಲ್ಲಿ ನಿಗದಿಗಿಂತ ಹೆಚ್ಚಿನ ಹಣ ವಸೂಲಿ ಮಾಡುತ್ತಿದ್ದು ಇವುಗಳನ್ನು ಆದಷ್ಟು ಬೇಗ ಸರಿಪಡಿಸಬೇಕು. ಒಂದೊಮ್ಮೆ ಇವುಗಳನ್ನು ಸರಿಪಡಿಸದಿದ್ದಲ್ಲಿ ವಿ.ಹಿ.ಪ ಹಾಗೂ ವಿವಿಧ ಸಂಘಟನೆಯ ವತಿಯಿಂದ ಶಿರೂರು ಟೋಲ್ ಪ್ಲಾಜಾದ ಮುಂದೆ ಧರಣಿ ಹಾಗೂ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದರು.

Call us

Call us

ವಿ.ಹಿ.ಪ ಬಜರಂಗದಳ ಮುಖಂಡ ಜಗದೀಶ ಕೊಲ್ಲೂರು ಮಾತನಾಡಿ ಗೋಮಾತೆಗೆ ಗೌರವ ನೀಡುವುದು ಹಿಂದೂ ಸಂಸ್ಕ್ರತಿಯ ಪ್ರತೀಕ. ರಸ್ತೆಯಲ್ಲಿ ಅಪಘಾತ ಹೊಂದುವ ಜಾನುವಾರುಗಳನ್ನು ಗೌರವದಿಂದ ದಫನ ಮಾಡಬೇಕು ಎಂದರು.

ವಿ.ಹಿ.ಪ ಬಂದೂರು ಘಟಕದ ಸಂಚಾಲಕ ಸುಧಾಕರ ಶೆಟ್ಟಿ ನೆಲ್ಯಾಡಿ ಮಾತನಾಡಿ, ಚತುಷ್ಪಥ ಹೆದ್ದಾರಿ ಕಾಮಗಾರಿ ಗುತ್ತಿಗೆ ಪಡೆದ ಐ.ಆರ್.ಬಿ ಕಂಪೆನಿ ಹೆದ್ದಾರಿಯಲ್ಲಿ ಮೃತಪಟ್ಟ ಜಾನುವಾರಗಳ ಧಪನ ಕಾರ್ಯದ ಬಗ್ಗೆ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ ಈ ಬಗ್ಗೆ ಹಲವು ಬಾರಿ ಹಿಂದೂಪರ ಸಂಘಟನೆಗಳು ಸಂಬಂಧಿತ ಅಬಕಾರಿಗಳ ಗಮನಕ್ಕೆ ತಂದಿದೆ, ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ, ಅಗತ್ಯ ಕ್ರಮ ಕೈಗೊಳ್ಳಬೇಕು, ಇಲ್ಲದಿದ್ದರೇ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು. ವಿ.ಹಿ.ಪ ಕಾರ್ಯದರ್ಶಿ ಶ್ರೀನಿವಾಸ ಮೂದೂರು, ಹಿಂದೂ ಜಾಗರಣ ವೇದಿಕೆಯ ರತ್ನಾಕರ ಗಂಗೊಳ್ಳಿ, ರಾಜೇಶ ಆಚಾರಿ ಬಂದೂರು, ವೇದನಾಥ್, ಸತೀಶ ನಾವುಂದ, ಮಾಜಿ ತಾ.ಪಂ ಸದಸ್ಯರುಗಳಾದ ಪುಷ್ಪರಾಜ್ ಶೆಟ್ಟಿ, ಉಮೇಶ ಶೆಟ್ಟಿ ಕಲ್ಗದ್ದೆ, ಜಿಲ್ಲಾ ಬಿಜೆಪಿ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಶರತ್‌ಕುಮಾರ್ ಶೆಟ್ಟಿ ಉಪ್ಪುಂದ, ಶಿರೂರು ಗ್ರಾ.ಪಂ ಸದಸ್ಯ ರವೀಂದ್ರ ಶೆಟ್ಟಿ ಆರ‍್ಮಕ್ಕಿ, ಬಾಬು ಮೊಗೇರ್ ಅಳ್ವೆಗದ್ದೆ, ಸಮಾಜ ಸೇವಕ ಸುಬ್ರಹ್ಮಣ್ಯ ಬಿಜೂರು, ರಾಘ ಆರಾಟೆ, ಶರತ್ ಮೊವಾಡಿ, ನವೀನ್ ಕಾಂಚನ್, ಮಹೇಶ ಖಾರ್ವಿ, ಗಿರೀಶ್ ಶಿರೂರು, ಯೊಗೀಶ್ ಶಿರೂರು, ಗುರುರಾಜ್ ಕಲ್ಲಕಂಠ ಹಾಗೂ ವಿ.ಹಿ.ಪ ಬಜರಂಗದಳದ ಮುಖಂಡರು ಹಾಗೂ ವಿವಿಧ ಹಿಂದೂಪರ ಸಂಘಟನೆಯ ಕಾರ್ಯಕರ್ತರು ಉಪಸ್ಥಿತರಿದ್ದರು.

ವಾಹನದ ಹಿಂಭಾಗ ಜಾನುವಾರು ಕಳೇಬರ ಕಟ್ಟಿ ಎಳೆದೊಯ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ಸಿಡೆಂಟ್ ಮ್ಯಾನೇಜರ್ ಕ್ಷಮೆ ಕೋರಿದರು. ಬಂದೂರು ತಹಶೀಲ್ದಾರ ಶೋಭಾಲಕ್ಷ್ಮಿ ಹಾಗೂ ಐ.ಆರ್.ಬಿ ಕಂಪೆನಿ ಮುಖ್ಯಸ್ಥರಿಗೆ ಮನವಿ ಸಲ್ಲಿಸಲಾಯಿತು. ಡಿವೈಎಸ್ಪಿ ಶ್ರೀಕಾಂತ್ ಕೆ ಅವರ ಮಾರ್ಗದರ್ಶನಲ್ಲಿ ವೃತ್ತ ನಿರೀಕ್ಷಕ ಸಂತೋಷ ಕಾಯ್ಕಿಣಿ, ಪಿಎಸೈ ಪವನ್ ನಾಯಕ್ ಬಂದೋವಸ್ತ್ ಕೈಗೊಂಡಿದ್ದರು.

Leave a Reply

Your email address will not be published. Required fields are marked *

2 × three =