ಪವರ್‌ಲಿಫ್ಟರ್ ಜಾಕ್ಸನ್ ಡಿಸೋಜಾಗೆ ಅದ್ದೂರಿ ಸ್ವಾಗತ, ಹುಟ್ಟೂರ ಸನ್ಮಾನ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಜೆಮ್‌ಶೆಡ್‌ಪುರದಲ್ಲಿ ನಡೆದ ಅಂತರಾಷ್ಟ್ರೀಯ ಪವರ್‌ಲಿಫ್ಟಿಂಗ್ ಸ್ಪರ್ಧೆಯಲ್ಲಿ ಭಾರತ ತಂಡ ಪ್ರತಿನಿಧಿಸಿದ್ದ ಆನಗಳ್ಳಿ ಜಾಕ್ಸನ್ ಡಿಸೋಜಾಗೆ ಕುಂದಾಪುರದಲ್ಲಿ ಭವ್ಯ ಸ್ವಾಗತ ನೀಡಿ, ಹುಟ್ಟೂರು ಆನಗಳ್ಳಿಯಲ್ಲಿ ಸನ್ಮಾನಿಸಲಾಯಿತು. ಎರಡು ಬೆಳ್ಳಿ, ಒಂದು ಕಂಚಿನ ಪದಕದೊಂದಿಗೆ ದೇಶಕ್ಕೆ ಮತ್ತು ಊರಿಗೆ ಕೀರ್ತಿ ತಂದ ಆನಗಳ್ಳಿ ಜಾಕ್ಸನ್ ಅವರನ್ನು ಬೈಕ್ ರ‍್ಯಾಲಿ ಮೂಲಕ ಕುಂದಾಪುರ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ನಡೆಸಿ, ಅಭಿನಂದನೆ ಸಲ್ಲಿಸಿದರು.

Click Here

Call us

Call us

ಆನಗಳ್ಳಿ ಜೋಸೆಫ್ ಮತ್ತು ಕಾರ್ಮಿನ್ ಡಿಸೋಜಾ ಪುತ್ರ ಜಾಕ್ಸನ್ ಡಿಸೋಜಾ ತನ್ನ ಸಾಧನೆಗೆ ಬೆಂಗಾವಲಾಗಿ ನಿಂತ ಸಹೋದರ ಜೊಯ್ಸನ್ ಡಿಸೋಜಾ, ಕುಂದಾಪುರದ ನ್ಯೂ ಹರ್ಕುಲೆಸ್ ಜಿಮ್ ತರಬೇತುದಾರ ಸತೀಶ್ ಖಾರ್ವಿ ಮಾರ್ಗದರ್ಶನದಲ್ಲಿ ದೇಶವೇ ಗುರುತಿಸುವಂಥ ಮಹತ್ವದ ಸಾಧನೆ ಮಾಡಿದ್ದಾರೆ. ಸ್ಥಳೀಯರಾದ ವೇದಮೂರ್ತಿ ಚನ್ನಕೇಶವ ಭಟ್ ಅವರು ಜಾಕ್ಸನ್ ಅವರನ್ನು ಹತ್ತು ಸಾವಿರ ರೂ. ನೀಡಿ ಪ್ರೋತ್ಸಾಹಿಸಿದರು.

Click here

Click Here

Call us

Visit Now

ಆನಗಳ್ಳಿ ಗ್ರಾಮ ಪಂಚಾಯತ್ ಸದಸ್ಯ ಎಚ್. ಗಂಗಾಧರ ಶೆಟ್ಟಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಆನಗಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಮರಿಯಾ ಡಿಸೋಜಾ, ಬಸ್ರೂರು ಚರ್ಚ್ ಧರ್ಮಗುರು ವಂ, ಫಾ. ವಿಶಾಲ್ ಲೋಬೊ, ಬಸ್ರೂರು ಶಾರದಾ ಕಾಲೇಜು ಪ್ರಾಂಶುಪಾಲ ಪ್ರೊ. ರಾಧಾಕೃಷ್ಣ ಶೆಟ್ಟಿ, ಕುಂದಾಪುರ ಪೊಲೀಸ್ ವೃತ್ತ ನಿರೀಕ್ಷಕ ಮಂಜಪ್ಪ ಡಿ.ಆರ್, ಬಸ್ರೂರು ಶಾರದಾ ಕಾಲೇಜು ಪ್ರಾಧ್ಯಾಪಕ ಡಾ. ದಿನೇಶ್ ಹೆಗ್ಡೆ, ಕುಂದಾಪುರ ನ್ಯೂ ಹರ್ಕುಲೆಸ್ ಜಿಮ್ ತರಬೇತುದಾರ ಸತೀಶ್ ಖಾರ್ವಿ, ಬಸ್ರೂರು ಕಾಲೇಜ್ ದೈಹಿಕ ನಿರ್ದೇಶಕ ಸೂರಜ್ ಶೆಟ್ಟಿ ಸನ್ಮಾನದಲ್ಲಿ ಉಪಸ್ಥಿತರಿದ್ದರು.

ಕುಂದಾಪುರದಲ್ಲಿ ಸನ್ಮಾನ:
ಜಮ್ಶೆಡ್ಪುರದಲ್ಲಿ ನಡೆದ ಅಂತರಾಷ್ಟ್ರೀಯ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಭಾರತ ತಂಡ ಪ್ರತಿನಿಧಿಸಿ ಎರಡು ಬೆಳ್ಳಿ ಹಾಗೂ ಒಂದು ಕಂಚಿನ ಪದಕ ಗೆದ್ದ ಕ್ರೀಡಾಪಟು ಜಾಕ್ಸನ್ ತಮಗೆ ಮಾರ್ಗದರ್ಶನ ನೀಡಿದ ತರಬೇತುದಾರ ಕುಂದಾಪುರದ ನ್ಯೂ ಹರ್ಕುಲೆಸ್ ಜಿಮ್‌ಗೆ ಆಗಮಿಸಿ ತರಬೇತುದಾರ ಸತೀಶ್ ಖಾರ್ವಿಯವರ ಆಶೀರ್ವಾದ ಪಡೆದರು.

ಈ ಸಂದರ್ಭ ಹುಟ್ಟೂರ ನಾಗರಿಕರು ಹಾಗೂ ಹರ್ಕ್ಯುಲೆಸ್ ಜಿಮ್ ವತಿಯಿಂದ ಅವರನ್ನು ಪ್ರೀತಿಯಿಂದ ಸ್ವಾಗತಿಸಿದ ನ್ಯೂ ಹರ್ಕುಲೆಸ್ ಜಿಮ್ ತರಬೇತುದಾರ ಸತೀಶ್ ಖಾರ್ವಿ ಜಾಕ್ಸನ್ ಅವರನ್ನು ಅಭಿನಂದಿಸಿದರು
ಜಾಕ್ಸನ್ ಹೆತ್ತವರು ಹಾಗೂ ಸಹೋದರ ಜೊಯ್ಸನ್ ಡಿಸೋಜಾ, ಕುಂದಾಪುರ ವೃತ್ತ ನಿರೀಕ್ಷಕ ಮಂಜಪ್ಪ, ಪುರಸಭೆ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ, ಸದಸ್ಯ ರವಿರಾಜ್ ಖಾರ್ವಿ ಉಪಸ್ಥಿತರಿದ್ದರು.

Call us

 

Leave a Reply

Your email address will not be published. Required fields are marked *

3 × two =