ಉಡುಪಿ ಜಿಲ್ಲೆಯಲ್ಲಿ ಇಲಾಖಾ ದರದಲ್ಲಿ ತೋಟಗಾರಿಕಾ ಸಸಿಗಳು ಲಭ್ಯ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ,ಫೆ.8:
ತೋಟಗಾರಿಕಾ ಇಲಾಖೆಯ ವತಿಯಿಂದ ಜಿಲ್ಲೆಯಲ್ಲಿ ರೈತರ ಹಾಗೂ ಸಾರ್ವಜನಿಕರ ಬೇಡಿಕೆ ಆಧಾರದ ಮೇಲೆ ವಿವಿಧ ತೋಟಗಾರಿಕೆ ಸಸಿ ಗಿಡಗಳನ್ನು ಉತ್ಪಾದಿಸಿ, ಇಲಾಖಾ ದರದಲ್ಲಿ ಮಾರಾಟ ಮಾಡಲಾಗುತ್ತಿದೆ.

Click here

Click Here

Call us

Call us

Visit Now

Call us

Call us

ಉಡುಪಿ ತಾಲೂಕಿನ ಶಿವಳ್ಳಿ, ಬ್ರಹ್ಮಾವರ ತಾಲೂಕಿನ ವಾರಂಬಳ್ಳಿ, ಕುಂದಾಪುರ ತಾಲೂಕಿನ ಕುಂಭಾಶಿ ಹಾಗೂ ಕೆದೂರು ಮತ್ತು ಕಾರ್ಕಳ ತಾಲೂಕಿನ ರಾಮಸಮುದ್ರ ಹಾಗೂ ಕುಕ್ಕಂದೂರು ತೋಟಗಾರಿಕಾ ಕ್ಷೇತ್ರಗಳಲ್ಲಿ ಉತ್ತಮ ಗುಣಮಟ್ಟದ ಅಡಿಕೆ (20 ರೂ.), ಕಸಿ ಗೇರು (32 ರೂ.), ಕಾಳುಮೆಣಸು (11 ರೂ.), ತೆಂಗು (70 ರೂ.) ಹಾಗೂ ಮಲ್ಲಿಗೆ ಗಿಡಗಳನ್ನು ಉತ್ಪಾದಿಸಲಾಗುತ್ತಿದ್ದು, ಗಿಡಗಳನ್ನು ಖರೀದಿಸಲು ಸಂಬAಧಪಟ್ಟ ತೋಟಗಾರಿಕಾ ಕ್ಷೇತ್ರದ ಅಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ.

ಶಿವಳ್ಳಿ ತೋಟಗಾರಿಕಾ ಕ್ಷೇತ್ರದಲ್ಲಿ ಕಾಳುಮೆಣಸು, ನಿಂಬೆ, ಪುನರ್ಪುಳಿ, ಲವಂಗ, ಜಾಯಿಕಾಯಿ ಹಾಗೂ ಇತರೆ ಅಲಂಕಾರಿಕ ಗಿಡಗಳು ಮತ್ತು ಕಾರ್ಕಳದ ರಾಮಸಮುದ್ರ ತೋಟಗಾರಿಕಾ ಕ್ಷೇತ್ರದಲ್ಲಿ ಅಡಿಕೆ, ಕಸಿಗೇರು, ಗಿಡಗಳು ಲಭ್ಯವಿದ್ದು, ಸಹಾಯಕ ತೋಟಗಾರಿಕೆ ನಿರ್ದೇಶಕ ವರುಣ ಕೆ.ಜೆ ಮೊ.ನಂ: 7892326323, ಬ್ರಹ್ಮಾವರದ ವಾರಂಬಳ್ಳಿ ತೋಟಗಾರಿಕಾ ಕ್ಷೇತ್ರದಲ್ಲಿ ಅಡಿಕೆ ಹಾಗೂ ಕಸಿಗೇರು ಗಿಡಗಳು ಲಭ್ಯವಿದ್ದು, ಸಹಾಯಕ ತೋಟಗಾರಿಕಾ ಅಧಿಕಾರಿ ಅಮಿತ್ ಸಿಂಪಿ ಮೊ.ನಂ: 8970642283, ಕುಂದಾಪುರದ ಕೆದೂರು ತೋಟಗಾರಿಕಾ ಕ್ಷೇತ್ರದಲ್ಲಿ ಅಡಿಕೆ, ಕಾಳುಮೆಣಸು, ಕಸಿಗೇರು, ಮಲ್ಲಿಗೆ ಹಾಗೂ ನಿಂಬೆ ಗಿಡಗಳು ಲಭ್ಯವಿದ್ದು, ಸಹಾಯಕ ತೋಟಗಾರಿಕಾ ಅಧಿಕಾರಿ ಮಧುಕರ್ ಮೊ.ನಂ: 9482166313 ಹಾಗೂ ಕುಂಭಾಶಿ ತೋಟಗಾರಿಕಾ ಕ್ಷೇತ್ರದಲ್ಲಿ ಕಸಿಗೇರು, ಕಾಳುಮೆಣಸು, ಮಲ್ಲಿಗೆ ಹಾಗೂ ತೆಂಗಿನ ಸಸಿಗಳು ಲಭ್ಯವಿದ್ದು, ಸಹಾಯಕ ತೋಟಗಾರಿಕಾ ಅಧಿಕಾರಿ ಉಮೇಶ್ ಬಂಟ್ ಮೊ.ನಂ: 8792644127, ಕಾರ್ಕಳದ ಕುಕ್ಕಂದೂರು ತೋಟಗಾರಿಕಾ ಕ್ಷೇತ್ರದಲ್ಲಿ ಅಡಿಕೆ ಹಾಗೂ ಕಸಿಗೇರು ಗಿಡಗಳು ಲಭ್ಯವಿದ್ದು, ಸಹಾಯಕ ತೋಟಗಾರಿಕಾ ಅಧಿಕಾರಿ ಕುಮಾರ್ ಮೊ.ನಂ: 8970642283 ಅನ್ನು ಸಂಪರ್ಕಿಸಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಅಥವಾ ತಾಲೂಕು ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *

seventeen − 10 =