ಕುಂದಾಪ್ರ ಡಾಟ್ ಕಾಂ ಸುದ್ದಿ:
ಕುಂದಾಪುರ: ಬೈಂದೂರು ವಿಧಾನಸಭಾ ಕ್ಷೇತ್ರದ ಹೊಸಂಗಡಿ ಭಾಗದ ಬಿಜೆಪಿ ನಾಯಕರು ಹಾಗು ಕಾರ್ಯಕರ್ತರು ಬೈಂದೂರಿನ ಮಾಜಿ ಶಾಸಕರಾದ ಕೆ. ಗೋಪಾಲ ಪೂಜಾರಿಯವರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು,
ಹೊಸಂಗಡಿ ಭಾಗದ ಗೋವಿಂದ ಶೆಟ್ಟಿ ಹಣ್ಸೆಹಾಡಿ, ಹಾಗೂ ಅವರ ಜೊತೆಯಲ್ಲಿ ಬಿಜೆಪಿಯ ಪ್ರಮುಖ ಕಾರ್ಯಕರ್ತರಾಗಿದ ಚಂದ್ರ ಹೆನ್ನಾಬೇಲು, ಶೇಖರ್ ಬೆಳಾರಿ ಯಡಮೊಗೆ, ಕಿಶೋರ್ ಮುಲ್ಲಿಕಟ್ಟೆ, ದಿವಾಕರ್ ಬಾಕ್ರಮನೆ, ಮಹೇಶ ಮಡಿವಾಳ, ನಕ್ಷತ್ರ ಕಾರೂರು, ದಿನೇಶ್ ಬೆಳಾರಿ, ಬಾಬು ಗೊಲ್ಲ ರವಿಂದ್ರ ಶೆಟ್ಟಿ ಅವರು ಪಕ್ಷಕ್ಕೆ ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ವಂಡ್ಸೆ ಬಾಕ್ಲ್ ಕಾಂಗ್ರೆಸ್ ಮಾಜಿ ಅಧ್ಯಕ್ಷರಾದ ಸಂಜೀವ ಶೆಟ್ಟಿ ಸಂಪೀಗೇಡಿ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾದ ಪ್ರಸ್ನನ್ ಕುಮಾರ್ ಶೆಟ್ಟಿ ಕೆರಾಡಿ, ಸಿದ್ದಾಪುರ ತಾಲೂಕು ಪಂಚಾಯತ್ ಸದಸ್ಯರಾದ ವಾಸುದೇವ ಪೈ, ಹೊಸಂಗಡಿ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷರಾದ ಅನಂತ್ ಶೆಟ್ಟಿ ಬಾಗಿಮನೆ, ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಶ್ರೀಧರ್ ಪೂಜಾರಿ ಮತ್ತು ಹೊಸಂಗಡಿ – ಸಿದ್ದಾಪುರ ಗ್ರಾಮದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.