ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಬ್ರಹ್ಮಾವರ ಸಮೀಪದ ಕುಮ್ರಗೋಡು ಮಿಲನ ರೆಸಿಡೆನ್ಸಿಯಲ್ಲಿ ನಡೆದ ವಿಶಾಲ ಗಾಣಿಗ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಆಕೆಯ ಪತಿ ಬಿಜೂರು ಚಾರುಕೊಡ್ಲು ನಿವಾಸಿ ರಾಮಕೃಷ್ಣ ಗಾಣಿಗನನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಬ್ರಹ್ಮಾವರ ವೃತ್ತ ನಿರೀಕ್ಷಕ ಅನಂತಪದ್ಮನಾಭ ಅವರು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಿ ತನಿಕೆಗಾಗಿ ಆರೋಪಿಯನ್ನು ನಾಲ್ಕು ದಿನಗಳ ಪೊಲೀಸ್ ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಇದರೊಂದಿಗೆ ಓರ್ವ ಸುಪಾರಿ ಕಿಲ್ಲರ್‌ನನ್ನು ಕೂಡ ಪೊಲೀಸರು ಬಂಧಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ರಾಮಕೃಷ್ಣ ಗಾಣಿಗ ಇಬ್ಬರು ಉತ್ತರ ಪ್ರದೇಶ ಮೂಲದ ಇಬ್ಬರು ಸುಪಾರಿ ಕಿಲ್ಲರ್‌ಗಳಿಗೆ ಪತ್ನಿಯನ್ನು ಕೊಲೆ ಮಾಡುವಂತೆ ಸುಪಾರಿ ನೀಡಿದ್ದು ತನಿಕೆಯಲ್ಲಿ ಬಯಲಾಗಿದ್ದು ಅದರಂತೆ ಇಬ್ಬರು ಸುಪಾರಿ ಕಿಲ್ಲರ್‌ಗಳು ಈ ಕೃತ್ಯ ಎಸಗಿರುವುದು ಪೊಲೀಸರ ಪ್ರಾಥಮಿಕ ತನಿಕೆಯಲ್ಲಿ ತಿಳಿದುಬಂದಿದೆ. ಪತಿ ಪತ್ನಿಯರ ಮಧ್ಯೆ ಇದ್ದ ವಿರಸವೇ ಕೊಲೆಗೆ ಪ್ರಮುಖ ಕಾರಣವೆಂಬುದು ತನಿಕೆಯಲ್ಲಿ ತಿಳಿದುಬಂದಿದೆ.
ಪತ್ನಿಯ ಅಂತ್ಯ ಸಂಸ್ಕಾರಕ್ಕೆಂದು ದುಬೈನಿಂದ ಊರಿಗೆ ಬಂಧಿದ್ದ ರಾಮಕೃಷ್ಣ ಗಾಣಿಗನ್ನು ಪೊಲೀಸರು ಎರಡು ಮೂರು ಭಾರಿ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು ಕೊನೆಯಲ್ಲಿ ಆತನೆ ಸುಪಾರಿ ನೀಡಿರುವುದು ಎಂದು ತಿಳಿದು ಬಂದಿತ್ತು. ಅದರಂತೆ ಪೊಲೀಸರು ಆತನ್ನು ಬಂಧಿಸಿದ್ದಾರೆ. ಇನ್ನು ಕೊಲೆಗೈದು ಪರಾರಿಯಾಗಿದ್ದ ಓರ್ವ ಸುಪಾರಿ ಕಿಲ್ಲರ್‌ನನ್ನು ಪೊಲೀಸರು ಉತ್ತರ ಪ್ರದೇಶದಲ್ಲಿ ಬಂಧಿಸಿದ್ದು ಇನ್ನೋರ್ವನಿಗಾಗಿ ಹುಡುಕಾಟ ಮುಂದುವರಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಆಟೋ ಚಾಲಕ, ಬಿಜೂರು ಭಾಗದ ರಾಮಕೃಷ್ಣನ ಕೆಲ ಸ್ನೇಹಿತರನ್ನು ವಿಚಾರಣೆಗೊಳಪಡಿಸಿದ್ದರು. ಯಾವುದೇ ಸುಳಿವಿಲ್ಲದೆ ನಡೆದ ಕೊಲೆ ಪ್ರಕರಣವನ್ನು ವಿವಿಧ ಆಯಾಮಗಳಲ್ಲಿ ತನಿಕೆ ನಡೆಸಿ ಶೀಘ್ರವಾಗಿ ಭೇದಿಸುವಲ್ಲಿ ಬ್ರಹ್ಮಾವರ ಪೊಲೀಸ್ ತಂತ ಅಂತಿಮವಾಗಿ ಯಶಸ್ಸಿಯಾಗಿದೆ.
ಇದನ್ನೂ ಓದಿ:
► ತಾರ್ಕಿಕ ಅಂತ್ಯಕ್ಕೆ ವಿಶಾಲ ಗಾಣಿಗ ಕೊಲೆ ಪ್ರಕರಣ? ಸುಪಾರಿ ಕೊಲೆಗೆ ಪತಿಯೇ ಸೂತ್ರದಾರ? – https://shareindia.in/?p=140 .
► ಮಗಳ ಹುಟ್ಟುಹಬ್ಬ ಮಾಡಬೇಕಿದ್ದ ಮನೆಯಲ್ಲೀಗ ಸೂತಕದ ಛಾಯೆ – https://kundapraa.com/?p=50073 .