ಮಹಿಳೆ, ಮಕ್ಕಳ ಮೇಲಿನ ದೌರ್ಜನ್ಯ ಸಹಿಸೋಲ್ಲ: ಪಿಎಸ್‌ಐ ಸಂಗೀತಾ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಪದವಿ ಮಗಿಸಿದ ಬಳಿಕ ಇತರೆ ಕ್ಷೇತ್ರಗಳಲ್ಲಿ ಉದ್ಯೋಗಕ್ಕೆ ಅವಕಾಶವಿದ್ದರೂ, ಮಹಿಳೆಯರು ಹಾಗೂ ಮಕ್ಕಳ ಮೇಲಿನ ದೌರ್ಜನ್ಯವನ್ನು ತಡೆಯುವ ಉದ್ದೇಶಕ್ಕಾಗಿ ನಾನು ಪೊಲೀಸ್ ಇಲಾಖೆಯನ್ನು ಸ್ವ-ಇಚ್ಛೆಯಿಂದ ಆಯ್ದುಕೊಂಡಿದ್ದೆ. ಮಹಿಳೆಯರು ಅನ್ಯಾಯಕ್ಕೆ ಒಳಗಾದರೆ ಯಾವುದೇ ಆತಂಕಪಡದೆ ನೇರವಾಗಿ ಠಾಣೆಗೆ ಬಂದು ದೂರು ದಾಖಲಿಸಿ, ಅದು ಕಾನೂನಾತ್ಮಕವಾಗಿದ್ದರೆ ಖಂಡಿತ ಶೀಘ್ರ ಅಗತ್ಯ ಕ್ರಮ ಕೈಗೊಳ್ಳುತ್ತೇನೆ.

Click Here

Call us

Call us

Click here

Click Here

Call us

Visit Now

ಇದು ಬೈಂದೂರು ಆರಕ್ಷಕ ಠಾಣೆಯ ಮೊದಲ ಮಹಿಳಾ ಪಿಎಸೈ ಸಂಗೀತಾ ಅವರ ಖಡಕ್ ನುಡಿ. ಬುಧವಾರ ಶ್ರೀ ರಾಮ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್‌ನ ನಾವುಂದ ಶಾಖೆ ಎರಡು ವರ್ಷ ಪೂರೈಸಿದ ಅಂಗವಾಗಿ ಸ್ವಸಹಾಯ ಸಂಘದ ಸದಸ್ಯರಿಗಾಗಿ ಹಮ್ಮಿಕೊಳ್ಳಲಾದ ಸುರಕ್ಷತಾ ಮಾಹಿತಿ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿ ಅಕ್ರಮ ಚಟುವಟಿಕೆಗಳು ಕಂಡುಬಂದರೆ ಸಾರ್ವಜನಿಕರು ನನಗೆ ದೂರವಾಣಿ ಕರೆ ಮಾಡಿ ಮಾಹಿತಿ ನೀಡಿ, ನನ್ನ ಮೊಬೈಲ್ ದಿನದ 24 ಗಂಟೆಯೂ ಕಾರ್ಯನಿರ್ವಹಿಸುತ್ತದೆ. ಯಾವುದೇ ಕಾರಣಕ್ಕೂ ಯಾರು ಕಾನೂನು ಮೀರುವುದಕ್ಕೆ ಬಿಡುವುದಿಲ್ಲ ಎಂದು ಖಡಕ್ ಸಂದೇಶ ರವಾನಿಸಿದರು. ಕುಂದಾಪ್ರ ಡಾಟ್ ಕಾಂ.

ಸಂಚಾರಿ ನಿಯಮ ಉಲ್ಲಂಘನೆ ಸಲ್ಲದು:
ರಾಷ್ಟ್ರೀಯ ಹೆದ್ದಾರಿಯಗಳಲ್ಲಿ ಸಂಚಾರಿ ನಿಯಮ ಉಲ್ಲಂಘನೆಯಾಗುತ್ತಿರುವ ಬಗ್ಗೆ ಸಭಿಕರೋರ್ವರ ಅಹವಾಲಿಗೆ ಪ್ರತಿಕ್ರಿಯಿಸಿದ ಅವರು ಸಂಚಾರಿ ನಿಯಮ ಮಾಡಿರುವುದು ಜನರ ಒಳಿತಿಗಾಗಿಯೇ. ನಿಯಮ ಮೀರಿ ಅಪಘಾತಗಳು ಘಟಿಸಿದಾಗ ಸಂತ್ರಸರಿಗೆ ನ್ಯಾಯ ದೊರಕಿಸಿಕೊಡಲು ಸಾಧ್ಯವಾಗುವುದಿಲ್ಲ. ನಿಯಮ ಮೀರಿದವರಿಗೆ ದಂಡ ವಿಧಿಸುವಾಗ ನಮಗೂ ಬೇಸರವಾಗುತ್ತದೆ. ಆದರೆ ಕಾನೂನು ಪಾಲನೆ ಅನಿವಾರ್ಯ. ಹೆಲ್ಮೇಟ್, ಸೀಟ್ ಬೆಲ್ಟ್ ಕಡ್ಡಾಯವಾಗಿ ಧರಿಸುವ ರೂಢಿ ಮಾಡಿಕೊಳ್ಳಿ, ಸರಿಯಾದ ಟ್ರ್ಯಾಕ್‌ನಲ್ಲಿ ಚಲಿಸಿ ಎಂದು ಸಲಹೆಯಿತ್ತರು.

Call us

ಶ್ರೀ ರಾಮ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಎಸ್. ರಾಜು ಪೂಜಾರಿ ಅಧ್ಯಕ್ಷತೆ ವಹಿಸಿದರು. ನಾವುಂದ ಗ್ರಾ.ಪಂ. ಅಧ್ಯಕ್ಷ ನರಸಿಂಹ ದೇವಾಡಿಗ, ಮರವಂತೆ ಬಡಾಕೆರೆ ವ್ಯವಸಾಯ ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷ ಜಯಶೀಲ ಶೆಟ್ಟಿ, ಬೈಂದೂರು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜನಾರ್ದನ ಮರವಂತೆ, ಶ್ರೀರಾಮ ಸೌಹಾರ್ದ ಸಹಕಾರಿ ಸಂಘದ ಉಪಾಧ್ಯಕ್ಷ ಎಂ. ವಿನಾಯಕ ರಾವ್, ನಿರ್ದೇಶಕ ಮಂಜು ಬಿಲ್ಲವ, ಮುಖ್ಯಕಾರ್ಯನಿರ್ವಹಣಾಧಿಕಾರಿ ಸೀತಾರಾಮ ಮಡಿವಾಳ ಉಪಸ್ಥಿತರಿದ್ದರು. ಸುಬ್ರಹ್ಮಣ್ಯ ಪಡುಕೋಣೆ ಕಾರ್ಯಕ್ರಮ ನಿರೂಪಿಸಿದರು. ಕುಂದಾಪ್ರ ಡಾಟ್ ಕಾಂ.

ಇದನ್ನೂ ಓದಿ:
► ಸಹಕಾರಿ ಸಂಸ್ಥೆಯಿಂದ ಆರ್ಥಿಕ ಸ್ವಾವಲಂಭನೆ: ಎಸ್. ರಾಜು ಪೂಜಾರಿ – https://kundapraa.com/?p=35838 .

Leave a Reply

Your email address will not be published. Required fields are marked *

19 − 10 =