ಪಾಸಿಟಿವ್ ಇದ್ದು ಪ್ರತ್ಯೇಕವಾಗಿರಲು ಸಾಧ್ಯವಿಲ್ಲದಿದ್ದರೆ, ಕೋವಿಡ್ ಕೇರ್ ಸೆಂಟರ್‌ಗೆ ದಾಖಲಾಗುವುದು ಕಡ್ಡಾಯ: ಡಿಸಿ ಜಿ. ಜಗದೀಶ್

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ,ಮೇ 21: ಆರೋಗ್ಯ ಪ್ರಾಧಿಕಾರಗಳು /ವಾರ್ಡ್ ಕಾರ್ಯಪಡೆ / ಗ್ರಾಮ ಕಾರ್ಯಪಡೆಯ ಅಭಿಪ್ರಾಯದಂತೆ ಮನೆಯ ಪ್ರತ್ಯೇಕತೆಗೆ ಅಗತ್ಯವಾದ ಸೌಲಭ್ಯಗಳನ್ನು ಮನೆಗಳಲ್ಲಿ ಹೊಂದಿರದ ಕೋವಿಡ್-19 ರೋಗಿಗಳು ಸಾಂಸ್ಥಿಕ ಪ್ರತ್ಯೇಕತೆಗೆ (ಕೋವಿಡ್ ಕೇರ್ ಸೆಂಟರ್) ಕಡ್ಡಾಯವಾಗಿ ಸ್ಥಳಾಂತರಗೊಳ್ಳಬೇಕು ಎಂದು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದ್ದಾರೆ.

Call us

Call us

ಸರಕಾರವು ಕೋವಿಡ್ -19 ಪಾಸಿಟಿವ್ ರೋಗಿಗಳನ್ನು ಪರೀಕ್ಷಿಸಲು, ವೈದ್ಯಕೀಯ ನೆರವಿನ ಅಗತ್ಯತೆಯನ್ನು ಪರಿಶೀಲಿಸಿ, ಅಸ್ಪತ್ರೆಗೆ ದಾಖಲಿಸುವುದು ಅವಶ್ಯಕವೆಂದೆನಿಸಿದಲ್ಲಿ ಮಾತ್ರವೇ ಆಸ್ಪತ್ರೆಗಳಲ್ಲಿ ಲಭ್ಯವಿರುವ ಬೆಡ್’ಗಳ ಅಧಾರದ ಮೇಲೆ, ಆಸ್ಪತ್ರೆಗಳಲ್ಲಿ ದಾಖಲಿಸುವಂತೆ ಹಾಗೂ ಉಳಿದ ಪ್ರಕರಣಗಳಲ್ಲಿ ರೋಗಿಯ ಮನೆಯಲ್ಲಿಯೇ ಲಭ್ಯವಿರುವ ಸೌಲಭ್ಯಗಳ ಆಧಾರದ ಮೇಲೆ ಹೋಮ್ ಐಸೋಲೆಶನ್ (ಮನೆ ಪ್ರತ್ಯೇಕತೆ) ಅಥವಾ ಸಾಂಸ್ಥಿಕ ಪ್ರತ್ಯೇಕತೆಯನ್ನು ನೀಡುವುದು ಸೂಕ್ತವೆಂದು ಸೂಚಿಸಿದೆ. ಸರ್ಕಾರವು ಹೊರಡಿಸಿದ ಮಾರ್ಗಸೂಚಿಗಳನ್ನು ಉಡುಪಿಯಲ್ಲಿ ಯಥಾವತ್ತಾಗಿ ಜಾರಿಗೊಳಿಸಲಾಗುತ್ತಿದ್ದು, ಈ ಮಧ್ಯೆ ಮನೆಯಲ್ಲಿ ಅಗತ್ಯವಾದ ಸೌಲಭ್ಯಗಳಿಲ್ಲದಿದ್ದರೂ ಇನ್ಸಿಟ್ಯೂಷನಲ್ ಐಸೋಲೇಶನ್ (ಸಾಂಸ್ಥಿಕ ಪ್ರತ್ಯೇಕತೆ) ಮಾಡಿಸಿಕೊಳ್ಳಲು ನಿರಾಕರಿಸುತ್ತಿರುವ ಬಗ್ಗೆ, ರೋಗಿಗಳಿಂದ ಪ್ರತಿರೋಧವ ಎದುರಾಗುತ್ತಿರುವುದು ಜಿಲ್ಲಾಡಳಿತದ ಗಮನಕ್ಕೆ ಬಂದಿರುತ್ತದೆ.

Call us

Call us

ರೋಗಿಗಳು ಸಾಂಸ್ಥಿಕ ಪ್ರತ್ಯೇಕತೆಗೆ ಪ್ರತಿರೋಧವನ್ನು ವ್ಯಕ್ತಪಡಿಸುವುದರಿಂದ ರೋಗಿಯ ಮನೆಮಂದಿಗೆಲ್ಲ ರೋಗ ತಗಲುವ ಸಂಭವ ಅಧಿಕವಾಗಿದ್ದು, ಕೋವಿಡ್-19 ಪಾಸಿಟಿವ್ ಪ್ರಕರಣಗಳು ಅಲ್ಪ ಸಮಯದಲ್ಲಿ ಹೆಚ್ಚಾಗಿ, ಮುಂದಿನ ದಿನಗಳಲ್ಲಿ ಆಸ್ಪತ್ರೆಗಳಲ್ಲಿ ಕಾರ್ಯಚರಣೆಗೆ ಅಡಚಣೆಯುಂಟಾಗಬಹುದಾಗಿದೆ. ಅಲ್ಲದೇ ಅಸ್ಪತ್ರೆಗಳಲ್ಲಿ ಬೆಡ್’ಗಳನ್ನು ಆಶ್ರಯಿಸಿ ಬರುವವರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿ, ಈಗಾಗಲೇ ಸೀಮಿತ ಸಂಖ್ಯೆಯಲ್ಲಿರುವ ಆಸ್ಪತ್ರೆ ಬೆಡ್ ಗಳು ಪೂರ್ಣಗೊಂಡು, ಸರಿಯಾದ ಸಮಯದಲ್ಲಿ ಬೆಡ್ ಲಭ್ಯವಾಗದೇ ಸಾವಿನ ಪ್ರಮಾಣ ಹೆಚ್ಚಾಗಬಹುದಾಗಿದೆ.

ಮನೆಯ ಪ್ರತ್ಯೇಕತೆಗೆ ಅಗತ್ಯವಾದ ಸೌಲಭ್ಯಗಳನ್ನು ಮನೆಗಳಲ್ಲಿ ಹೊಂದಿರದ ಕೋವಿಡ್-19 ರೋಗಿಗಳು ಸಾಂಸ್ಥಿಕ ಪ್ರತ್ಯೇಕತೆಗೆ (ಕೋವಿಡ್ ಕೇರ್ ಸೆಂಟರ್ ) ಕಡ್ಡಾಯವಾಗಿ ಸ್ಥಳಾಂತರಗೊಳ್ಳಬೇಕು. ಆದರೆ ಅಂತಹ ರೋಗಿಗಳ ಸ್ಥಳಾಂತರವನ್ನು ತಡೆಯುವ, ವಿರೋಧಿಸುವ, ಪ್ರತಿರೋಧಿಸುವ ಯಾವುದೇ ವ್ಯಕ್ತಿಯ ಅಥವಾ ರೋಗಿಯ ವಿರುದ್ಧ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ 2005, ಸಾಂಕ್ರಾಮಿಕ ನಿಯಂತ್ರಣ ಕಾಯ್ದೆ 2020 ಮತ್ತು ಭಾರತೀಯ ದಂಡ ಸಂಹಿತೆ ಅಡಿಯಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಎಚ್ಚರಿಸಿದ್ದಾರೆ.

ಇದನ್ನೂ ಓದಿ:
► ಜೂನ್ 7ರ ತನಕ ಲಾಕ್‌ಡೌನ್ ವಿಸ್ತರಣೆ. ಬೆಳಗ್ಗೆ 10 ಗಂಟೆ ಬಳಿಕ ಓಡಾಡಿದ್ರೆ ಶಿಸ್ತು ಕ್ರಮ: ಸಿಎಂ – https://kundapraa.com/?p=48514 .

Leave a Reply

Your email address will not be published. Required fields are marked *

20 + 14 =