ವಂಡ್ಸೆ ಶ್ರೀಬ್ರಹ್ಮಶ್ರೀ ಸೌಹಾರ್ದ ಸಹಕಾರಿ ಉದ್ಘಾಟನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ವಂಡ್ಸೆಯ ವಾತ್ಸಲ್ಯ ಕಾಂಪ್ಲೆಕ್ಸ್‌ನ ಪ್ರಥಮ ಮಹಡಿಯಲ್ಲಿ ಶ್ರೀಬ್ರಹ್ಮಶ್ರೀ ಸೌಹಾರ್ದ ಸಹಕಾರಿ ಶುಭಾರಂಭಗೊಂಡಿತು.

ಜ್ಯೋತಿಷ್ಯ ವಿದ್ವಾನ್ ವೇ.ಮೂ. ರಾಮಕೃಷ್ಣ ಭಟ್ ಶಾರ್ಕೆ ಉದ್ಘಾಟಿಸಿದರು. ಶ್ರೀಬ್ರಹ್ಮಶ್ರೀ ಸೌಹಾರ್ದ ಸಹಕಾರಿ ಅಧ್ಯಕ್ಷ ಕೆ.ಬಸವರಾಜ್ ರಾಯಪ್ನಾಡಿ ಅಧ್ಯಕ್ಷತೆ ವಹಿಸಿದ್ದರು. ವಾತ್ಸಲ್ಯ ಕಾಂಪ್ಲೆಕ್ಸ್ ಮಾಲೀಕ ಆನಂದ ಶೆಟ್ಟಿ ಠೇವಣಿ ಪತ್ರ ಬಿಡುಗಡೆಗೊಳಿಸಿದರು. ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ಆಡಳಿತ ಧರ್ಮದರ್ಶಿ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಇ-ಬ್ಯಾಂಕ್ ಸಾಫ್ಟ್ವೇರ್‌ಗೆ ಚಾಲನೆ ನೀಡಿದರು. ಭದ್ರತಾ ಕೋಶವನ್ನು ನ್ಯಾಯವಾದಿ ಉಮೇಶ್ ಶೆಟ್ಟಿ ಶಾನ್ಕಟ್ಟು ಉದ್ಘಾಟಿಸಿದರು.

ಶಾಸಕ  ಬಿ.ಎಂ. ಸುಕುಮಾರ ಶೆಟ್ಟಿ, ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ, ವಂಡ್ಸೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧಕ್ಷ ಎನ್. ಮಂಜಯ್ಯ ಶೆಟ್ಟಿ ಸಬ್ಲಾಡಿ, ಮುಂಬಯಿ ಉಸ್ಯಮಿ ಚಂದ್ರಶೇಖರ ಹೆರಿಯಣ್ಣ ನಾಯ್ಕ್ ವಂಡ್ಸೆ, ವ್ಯವಸಾಯ ಸೇವಾ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ವಿ. ಸುಧೀರ್ ಕುಮಾರ್ ಶೆಟ್ಟಿ, ಕೊಲ್ಲೂರು ದೇವಳದ ಮಾಜಿ ಧರ್ಮದರ್ಶಿ ವಂಡಬಳ್ಳಿ ಜಯರಾಮ ಶೆಟ್ಟಿ, ಆಲೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಆದ್ಯಕ್ಷ ಹರ್ಕೂರು ಮಂಜಯ್ಯ ಶೆಟ್ಟಿ, ರೋಯಲ್ ಕಾಂಪ್ಲೆಕ್ಸ್ ಮಾಲಕ ಮಹಮ್ಮದ್ ಇಕಬಾಲ್, ಗ್ರಾ.ಪಂ. ಮಾಜಿ ಅಧ್ಯಕ್ಷ ಶ್ರೀನಿವಾಸ ಪೂಜಾರಿ ಕಲ್ಮಡಿ, ಹಿಜಾಣ ಶ್ರೀಚಿಕ್ಕು ಯುವ ಸಂಘಟನೆ ಅಧ್ಯಕ್ಷ ಜಯರಾಮ ಶೆಟ್ಟಿ, ಗ್ರಾ.ಪಂ ಸದಸ್ಯ ಪ್ರಶಾಂತ್ ಪೂಜಾರಿ ವಂಡ್ಸೆ, ಹೆಮ್ಮಾಡಿ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘದ ಅಧ್ಯಕ್ಷ ಭಾಸ್ಕರ ನಾಯ್ಕ್ ಆಗಮಿಸಿದ್ದರು.

ಶಾಖಾ ಸಿಬ್ಬಂದಿ ಅಭಿಷೇಕ್ ವಂಡ್ಸೆ ಸ್ವಾಗತಿಸಿದರು. ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಆರ್ ಸಂತೋಷ ವಂದಿಸಿದರು. ಮಂಜುನಾಥ್ ಚಂದನ್ ನೆಂಪು ನಿರ್ವಹಿಸಿದರು.

Leave a Reply

Your email address will not be published. Required fields are marked *

fourteen + one =