ಲಾಸ್ಟ್ ಓವರ್: ಹೀಗೊಂದು ಕುಂದಾಪ್ರ ಕನ್ನಡ ಸಂಭಾಷಣೆ!

ಕುಂದಾಪ್ರ ಡಾಟ್ ಕಾಂ
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ಭಾರತ-ಬಾಂಗ್ಲಾದೇಶ ನಡುವಿನ ಪಂದ್ಯದಲ್ಲಿ ಕೊನೆಯ ಓವರ್ ಆರಂಭವಾಗುತ್ತಿದ್ದಂತೆ ಭಾರತೀಯ ಅಭಿಮಾನಿಗಳು ಸೋಲು-ಗೆಲುವಿನ ಲೆಕ್ಕಾಚಾರದಲ್ಲಿ ಮುಳುಗಿ, ಬೌಲರ್ ಹಾರ್ದಿಕ್ ಪಾಂಡ್ಯನ ಪ್ರತಿ ಎಸೆತವನ್ನೂ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಿದ್ದರು. ಎರಡೂ ವಿಕೆಟ್ ಪಡೆದರೂ ಒಂದು ಹಂತಕ್ಕೆ ಪಂದ್ಯ ಸೋತಿತೆಂದು ನಿರಾಶರಾಗಿದ್ದರೂ ಕೊನೆಯ ಎಸೆತದಲ್ಲಿ ಭಾರತ ಗೆಲುವಿನ ನಗೆ ಬೀರಿದ್ದು ಅಭಿಮಾನಿಗಳು ಹುಚ್ಚೆದ್ದು ಕುಣಿಯುವಂತೆ ಮಾಡಿತ್ತು.

ಈ ಕೊನೆಯ ಓವರ್‌ನಲ್ಲಿ ಕುಂದಗನ್ನಡ ಮಾತನಾಡುವ ಕ್ರಿಕೆಟ್ ಅಭಿಮಾನಿಗಳು ಹೇಗೆ ಪ್ರತಿಕ್ರಿಯಿಸಿರಬಹುದು ಎಂಬುದನ್ನು ಯುವ ಬರಹಗಾರ ನಾಗರಾಜ ಶೆಟ್ಟಿ ನೈಕಂಬ್ಳಿ ನಿರೂಪಿಸಿದ್ದಾರೆ. ಓದಿ ಸುಮ್ನೆ ತಮಾಷೆಗೆ…  || ಕುಂದಾಪ್ರ ಡಾಟ್ ಕಾಂ

20ನೇ ಓವರ್ ಶುರು ಆತಿತ್ …
ದೇವ್ರೆ ದೇವ್ರೆ ನೀನೇ ಕಾಪಾಡ್. ಇವತ್ತೊಂದ್ ಮರ್ಯಾದಿ ಉಳ್ಸ್ ಮರಾಯ ಹಾರ್ದೀಕ…

  • 19.1 ದಿಡ್ ದಿಡ್ ದಿಮಿಗುಟ್ಕಂಡ್ ಓಡ್ ಬಂದ ಬೋಲ್ ಹಾಕ್ದ
    ಸಿಂಗಲ್ ರನ್, ಸೂಪರ್ ಬೋಲಿಂಗ್, ಅಬ್ಬಾ ಹಿಂಗೆ ಹಾಕ್ ಮರಾಯ.
  • 19.2 ಸತ್ತ್ ಹ್ವಾಪ್ಕೆ . ಹಪ್ಪಹಿಡದನ್. ಕರ್ಮದ್ದಾ ಬೋಲಿಂಗ್ ಅದ್, ಗಂಟಿ ಮೇಸುಕ್ ಹೋಪುದ್ ಸಮಾ. ?
  • 19.3 : ಇದ್ಯಾವ್ ಹೆಕ್ಕತಿಂಬದ್ ಮರೇ… ಅವನ್ ಬೊಜ್ಜದ್ದಾ ಬೋಲಿಂಗ್ ಅದ್, ಮ್ಯಾಚ್ ವಾಲಿಕಳ್ಸಿ ಕೊಟ್ಟ. ಇವನಿಗ್ ಬೋಲಿಂಗ್ ಕೊಟ್ಟನಿಗ್ ಹೊಡಿಕ್ ಕುಂದಾಪ್ರ ಡಾಟ್ ಕಾಂ)
  • 19.4: ಇದ್ ಯಾವ್ ನಮ್ನಿದ್ ಮರ್ರೆ , ಉಂಡಿ ಬೋಲಿಂಗ್ ಹಾಕಿದಾ. ಹಂಗಾರೂ ಪುಣ್ಯಕ್ ಔಟ್ ಆದ! ಅಯ್ಯಬ್ಯಾ ಅಂಬಂಗ್ ಆಯ್ತ್ . (ಕುಂದಾಪ್ರ ಡಾಟ್ ಕಾಂ)
  • 19.5:ಪುಲ್’ಟಾಸ್. ಔಟಾನಲ್ ಸಾಕ್. ಅದ್ ಟೆಕ್ನಿಕ್ ಹಾಂಗೆ ?. ಇದ್ ಇದ್ ಇದ್ ಬೋಲಿಂಗ್ ಅಂದ್ರೆ , ಎಂತ ಬೌಲರ್ ಮರ್ರೆ ಭಯಂಕರ ?
  • 20.0: ಹೋ ಹೋ ಹೋ ವಿನ್ನೋ ರನೌಟ್… (ಕುಂದಾಪ್ರ ಡಾಟ್ ಕಾಂ)
    ಬೌಲಿಂಗ್ ಅಂದ್ರೆ ಹೀಂಗ್ ಇರ್ಕ್. ನಂ.01 ಬೌಲರ್ ಪಾಂಡ್ಯಾ , ಸೂಪರ್ ಬೋಲ್, ಎಂತ ಒವರ್ ಮರ್ರೆ, ಗ್ರೇಟ್, ಗ್ರೇಟ್ . ಬೇರೆ ಯಾವನ್ ಹಾಕಿರೂ ಆತಿಲ್ಲಾ ಇದ್ದಿತ್ ,ಪಾಂಡ್ಯಾ ಗ್ರೇಟ್. ??

Leave a Reply

Your email address will not be published. Required fields are marked *

four × two =