ವಿಡಿಯೋ: ಶಿವಮೊಗ್ಗ ಎಸ್ಪಿ ರವಿ ಅವರ ಸ್ಪೂರ್ತಿ ತುಂಬುವ ಮಾತುಗಳು ಸಾಮಾಜಿಕ ತಾಣದಲ್ಲಿ ವೈರಲ್

Call us

ಕುಂದಾಪ್ರ ಡಾಟ್ ಕಾಂ
ಶಿವಮೊಗ್ಗ ಜಿಲ್ಲೆಯಲ್ಲಿ ದಕ್ಷ ಪೊಲೀಸ್ ವರಿಷ್ಠಾಧಿಕಾರಿಯಾಗಿ ಹೆಸರು ಮಾಡಿರುವ ರವಿ. ಡಿ. ಚನ್ನಣ್ಣನವರ್ ಅವರು ಶಿವಮೊಗ್ಗದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಆಡಿದ ಮಾತುಗಳು ಸಾಮಾಜಿಕ ತಾಣದಲ್ಲಿ ವೈರಲ್ ಆಗಿವೆ. ಐಪಿಎಸ್ ಅಧಿಕಾರಿಯಾಗುವ ಮೊದಲು ಅವರು ಪಟ್ಟಿ ಪಡಿಪಾಟಲು, ಪೊಷಕರು ಮಗುವನ್ನು ಹೇಗೆ ಬೆಳೆಸಬೇಕು ಎಂಬ ಬಗ್ಗೆ ಅವರಿತ್ತ ಸಲಹೆ ಕೇಳಿದವರ ಮನದಲ್ಲಿ ಸ್ಥೂರ್ತಿ ಚಿಲುಮೆ ಉಕ್ಕಿ ಹರಿದರೇ ಅಚ್ಚರಿಪಡಬೇಕಿಲ್ಲ… ಕುಂದಾಪ್ರ ಡಾಟ್ ಕಾಂ

Call us

ವಿಡಿಯೋ ನೋಡಿ

ಅವರಾಡಿದ ಮಾತುಗಳ ಹೈಲೆಟ್ಸ್ ಇಲ್ಲಿದೆ.

ದುಡ್ಡು ದೊಡ್ಡಪ್ಪನಾದರೇ, ವಿದ್ಯೆ ಅದರಪ್ಪ….

Call us

ಜಗತ್ತನ್ನು ಆಳುತ್ತಿರುವುದುವುದು ಹಣ ಅಲ್ಲ, ಗತ್ತಲ್ಲ, ಅಧಿಕಾರವಂತೂ ಅಲ್ಲವೇ ಅಲ್ಲ. ಅದು ಜ್ಞಾನ ಮಾತ್ರ.

ಬಲಪಂಥೀಯರು, ಎಡಪಂಥೀಯರು, ಮಾವೋವಾದಿಗಳು ಎಂದರೆ ಯಾರು? ಅವರ ಸಿದ್ಧಾಂತಗಳೇನು ಎಂಬುದನ್ನು ಮೊದಲು ಮಕ್ಕಳಿಗೆ ತಿಳಿಸಿ

ದೇಶಪ್ರೇಮ ಎಂದರೆ ಏನು? ರಾಜ್ಯವನ್ನು ಪ್ರೀತಿಸುವುದೇ ದೇಶವನ್ನು ಪ್ರೀತಿಸುವುದೇ ಅಥವಾ ಅದಕ್ಕೂ ಮೀರಿದ್ದೇ? ಅದನ್ನೂ ಹೇಳಿ ಕುಂದಾಪ್ರ ಡಾಟ್ ಕಾಂ

ಮನೆಯಲ್ಲಿ ಪುಸ್ತಕ ೪ ಪುಸ್ತಕವನ್ನಾದರೂ ಇಡಿ. ಮಕ್ಕಳಿಗೆ ಎಲ್ಲವನ್ನೂ ಹೇಳಿಕೊಡುವ ಕೆಲಸ ಮಾಡಿ. ಆದರೆ ಆಯ್ಕೆ ಮಾತ್ರ ಅವರಿಗೆ ಬಿಡಿ…

ಯಾವುದು ನಿನಗೆ, ನಿಮ್ಮ ತಂದೆ ತಾಯಿಗೆ, ರಾಷ್ಟ್ರಕ್ಕೆ, ಮನುಜ ಕುಲಕ್ಕೆ ಒಳಿತುಂಟುಮಾಡುವುದೋ ಅದನ್ನು ಆಯ್ಕೆ ಮಾಡಿಕೋ ಎಂದಷ್ಟೇ ಹೇಳಿ

– ರವಿ ಡಿ. ಚನ್ನಣ್ಣನವರ್, ಐಪಿಎಸ್.  ಪೊಲೀಸ್ ವರಿಷ್ಠಾಧಿಕಾರಿ, ಶಿವಮೊಗ್ಗ

Leave a Reply

Your email address will not be published. Required fields are marked *

five × one =