ಇನ್ಸುರೆನ್ಸ್ ಕಂಪೆನಿಯಲ್ಲಿ ಕಳ್ಳತನ

Call us

Call us

Call us

Call us

ಕುಂದಾಪುರ:  ಇಲ್ಲಿನ ಹೆದ್ದಾರಿ ಸಮೀಪದ ಕಾಂಪ್ಲೆಕ್ಸ್‌ವೊಂದರಲ್ಲಿದ್ದ  ಯುನೈಟೆಡ್ ಇಂಡಿಯಾ ಇನ್ಸುರೆನ್ಸ್ ಕಂಪೆನಿ ಲಿಮಿಟೆಡ್ ಕಂಪೆನಿಯ ಹಿಂದಿನ ಕಿಟಕಿಯ ಎರಡು ಕಬ್ಬಿಣದ ರಾಡನ್ನು ತುಂಡು ಮಾಡಿ ಒಳ ಪ್ರವೇಶಿಸಿದ ಕಳ್ಳರು ಕನ್ನ ಹಾಕಿದ ಘಟನೆ ಇಂದು ಬೆಳಕಿಗೆ ಬಂದಿದೆ.

Call us

Click Here

Click here

Click Here

Call us

Visit Now

Click here

ಘಟನೆ ವಿವರ: ರಾತ್ರಿ ವೇಳೆಯಲ್ಲಿ ಕಛೇರಿಯ ಹಿಂದಿನ ರಾಡ್ ತುಂಡರಿಸಿ ಬಂದಿದ್ದ ಖದೀಮರು ಕ್ಯಾಶ್ ಬಾಕ್ಸನ್ನು ಒಡೆದು ಅದರಲ್ಲಿದ್ದ 34,857ರೂಪಾಯಿ  ಹಾಗೂ ಎಲ್.ಎನ್ ಮುರಳೀಧರರವರ ಛೇಂಬರ್‌ನ ಡ್ರಾವರ್‌ನಲ್ಲಿದ್ದ 3500 ರೂಪಾಯಿ ಹಣವನ್ನು ಕಳವು ಮಾಡಿದ್ದಾರೆ.  ಹೆದ್ದಾರಿಗೆ ಹೊಂದಿಕೊಂಡಂತೆ ಇರುವ ಈ ಕಟ್ಟಡದ ಹೊರ ಭಾಗದಲ್ಲಿ ಯಾವುದೇ ಸಿಸಿ ಕ್ಯಾಮೆರಾ ಇರಲಿಲ್ಲ.

ಘಟನೆ ಸ್ಥಳಕ್ಕೆ ಕುಂದಾಪುರ ಡಿವೈ‌ಎಸ್ಪಿ ಮಂಜುನಾಥ ಶೆಟ್ಟಿ, ಸರ್ಕಲ್ ಇನ್ಸ್‌ಪೆಕ್ಟರ್ ದಿವಾಕರ್, ಎಸ್ಸೈ ನಾಸೀರ್ ಹುಸೇನ್ ಮೊದಲಾದವರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಶ್ವಾನದಳ ಮತ್ತು ಬೆರಳಚ್ಚು ತಜ್ಞರು ಭೇಟಿ ನೀಡಿದ್ದು ತನಿಖೆ ನಡೆಯುತ್ತಿದೆ.

Leave a Reply

Your email address will not be published. Required fields are marked *

13 − 12 =