ಸಂದರ್ಶನ: ಕಾರ್ಯಕರ್ತರೊಂದಿಗಿನ ನಿರಂತರ ಸಂಪರ್ಕ ತನಗೆ ಜಯ ತಂದುಕೊಡಲಿದೆ – ಜಯಪ್ರಕಾಶ್ ಹೆಗ್ಡೆ

Call us

Call us

ರಾಜ್ಯ ರಾಜಕಾರಣದಲ್ಲಿ ತನ್ನದೇ ಆದ ಸ್ಥಾನಮಾನ ಹಾಗೂ ಜನರ ವಿಶ್ವಾಸ ಹೊಂದಿರುವ ನೇರ ನುಡಿಯ, ಸರಳ ನಡೆಯ ರಾಜಕಾರಣಿಗಳ ಪೈಕಿ ಜಯಪ್ರಕಾಶ್ ಹೆಗ್ಡೆಯವರೂ ಒಬ್ಬರು. ಸ್ವತಂತ್ರ ಅಭ್ಯರ್ಥಿಯಾಗಿ ಸ್ವರ್ಧಿಸಿ ಜಯಕಂಡವರು. ಜನತಾ ಪರಿವಾರದ ಮೂಲಕ ರಾಜಕೀಯ ಪ್ರವೇಶಿಸಿ 1994ರಲ್ಲಿ ಬ್ರಹ್ಮಾವರ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ಬಂದರು ಮತ್ತು ಮೀನುಗಾರಿಕಾ ಸಚಿವರಾಗಿಯೂ ಕಾರ್ಯ ನಿರ್ವಹಿಸಿದ್ದರು. 1999 ಮತ್ತು 2004ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದ ಜಯ ಸಾಧಿಸಿದ್ದರು. ಆ ಬಳಿಕ ಕಾಂಗ್ರೆಸ್‌ ಪಕ್ಷ ಸೇರಿ 2007ರ ಉಡುಪಿ ಚಿಕ್ಕಮಂಗಳೂರು ಕ್ಷೇತ್ರದಿಂದ ಡಿ.ವಿ ಸದಾನಂದ ಗೌಡರ ವಿರುದ್ದ ಸ್ವರ್ಧಿಸಿ ಸೋಲುಂಡರೂ ಮತ್ತೆ 2012ರ ಉಪ ಚುನಾವಣೆಯಲ್ಲಿ ಅತ್ಯಂತ ಮಹತ್ವದ ಗೆಲುವು ತಂದುಕೊಟ್ಟು ಕಾಂಗ್ರೆಸ್ ನ ಸರಣಿ ಸೋಲಿಗೆ ಬ್ರೇಕ್ ಹಾಕಿದ್ದರು. ಇದೀಗ ಸ್ಥಳೀಯ ಸಂಸ್ಥೆಯಿಂದ ವಿಧಾನಪರಿಷತ್‌ಗೆ ನಡೆಯುವ ಚುನಾವಣೆಯಲ್ಲಿ ಉಡುಪಿ-ದಕ್ಷಿಣ ಕನ್ನಡ ಕ್ಷೇತ್ರದಿಂದ ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಫ‌ಲವಾಗಿ ಪಕ್ಷದಿಂದ ಆರು ವರ್ಷ ಉಚ್ಚಾಟನೆಯೂ ಆಗಿದ್ದಾರೆ. ಈ ಸೋಲು ಗೆಲುವಿನ ಲೆಕ್ಕಾಚಾರದಲ್ಲಿ ಜಯಪ್ರಕಾಶ್ ಹೆಗ್ಡೆ ಅವರ ಒಲವು-ನಿಲುವುಗಳೇನು ಎಂಬುದರ ಕುರಿತು ‘ಕುಂದಾಪ್ರ ಡಾಟ್ ಕಾಂ’ನೊಂದಿಗೆ ಮಾತನಾಡಿದ್ದಾರೆ.

Click Here

Call us

Call us

ಕುಂದಾಪ್ರ ಡಾಟ್ ಕಾಂ: ಕಾಂಗ್ರೆಸ್ ಓಟುಗಳು ನಿಮಗೆ ಸಿಗಲಿದೆ ಎಂಬ ವಿಶ್ವಾಸವಿದೆಯೇ?
ಜಯಪ್ರಕಾಶ ಹೆಗ್ಡೆ: ನಾನು ಜನಪ್ರತಿನಿಧಿಯಾಗಿದ್ದಾಗಲೂ ಜನಪ್ರತಿನಿಧಿ ಅಲ್ಲದೇ ಇರುವಾಗಲೂ ಸದಾ ಜನರು, ಕಾರ್ಯಕರ್ತರೊಂದಿಗೇ ಇದ್ದವನು. ಯಾವುದೇ ರಾಜಕೀಯ ಪಕ್ಷದ ನೆರಳಲ್ಲಿಯೂ ಇರಲು ಬಯಸದೆ ಪಕ್ಷೇತರನಾಗಿಯೇ ಹೋರಾಡಿದವನು. ಹಾಗಾಗಿ ಈಗಲೂ ಪಕ್ಷೇತರನಾಗಿಯೇ ಹೋರಾಡುತ್ತೇನೆ. ಜನರ ಆಶೀರ್ವಾದ, ಈಗಲೂ ನನ್ನ ಸಂಪರ್ಕದಲ್ಲಿರುವ ಕಾಂಗ್ರೆಸ್‌ ಕಾರ್ಯಕರ್ತರ ಬೆಂಬಲದಿಂದ ಖಂಡಿತಾ ಜಯ ಸಾಧಿಸುತ್ತೇನೆ ಎಂಬ ವಿಶ್ವಾಸವಿದೆ’. ಕಾರ‍್ಯಕರ್ತರಿಗಾಗಿ ಕಣದಲ್ಲಿದ್ದೇನೆ. ಸ್ವತಂತ್ರ ಅಭ್ಯರ್ಥಿಯಾಗಿನ ಕಣಕ್ಕೆ ಇಳಿದಿದ್ದೇನೆ ಹೊರತು ಬಂಡಾಯ ಅಭ್ಯರ್ಥಿಯಲ್ಲ.

Click here

Click Here

Call us

Visit Now

ಕುಂದಾಪ್ರ ಡಾಟ್ ಕಾಂ: ವಿಧಾನ ಪರಿಷತ್ ಚುನಾವಣೆ ಸ್ಪರ್ಧೆ ಹಿಂದಿನ ಉದೇಶ ಏನು?
ಹೆಗ್ಡೆ: ಟಿಕೆಟ್‌ಗೆ ಅರ್ಜಿ ಹಾಕದೇ ಇದ್ದವರಿಗೆ ಟಿಕೇಟ್ ಕೊಡುಯತ್ತಾರೆ ಅಂತಾದರೆ, ಮುಲಾಜಿಗೆ ಸಿಕ್ಕಿ ಅರ್ಜಿಹಾಕದೇ ಇರುವವರು ಬಹಳಷ್ಟು ಜನರಿದ್ದಾರೆ. ಅವರೆಲ್ಲರಿಗೂ ಟಿಕೆಟ್ ಕೊಡಲು ಸಾಧ್ಯವಾ? ಚುನಾವಣೆಗೆ ಸ್ಪರ್ಧಿಸುವುದಲ್ಲ ಎಂದು ಹೇಳಿದವರೆಗೆ ಮಣೆ ಹಾಕುತ್ತರೆ ಎಂದರೆ ಕಾಂಗ್ರೆಸ್‌ನಲ್ಲಿ ವಿಧಾನ ಪರಿಷತ್ ಚುವಾವಣೆಗೆ ಸ್ಪರ್ಧಿಸಲು ಅಭ್ಯರ್ಥಿಗಳೇ ಇಲ್ವಾ. ಕಾಂಗ್ರೆಸ್ ಬೇರೆ ಅಭ್ಯರ್ಥಿ ಹಾಕಿದ್ದರೆ ನಾನು ಸ್ಪರ್ಧಿಸುತ್ತಿರಲಿಲ್ಲ. ಕಾರ‍್ಯಕರ್ತರ ಒಮ್ಮತದ ಅಭಿಪ್ರಾಯಾಕ್ಕೆ ಬೆಲೆ ಕೊಟ್ಟು ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆ ಕಣಕ್ಕೆ ಇಳಿದಿದ್ದೇನೆ. (ಕುಂದಾಪ್ರ ಡಾಟ್ ಕಾಂ)

ಕುಂದಾಪ್ರ ಡಾಟ್ ಕಾಂ: ಕಾಂಗ್ರೆಸ್ ಗೆ  ಹೆಗ್ಡೆ ಚುನಾವಣಾ ಅಭ್ಯರ್ಥಿಯಾಗಷ್ಟೇ ಕಂಡರು. ನಾಯಕರನ್ನಾಗಿ ಬೆಳೆಸಲಿಲ್ಲ ಎಂಬ ಆರೋಪವಿದೆಯಲ್ಲಾ?
ಹೆಗ್ಡೆ: ಕಾರ‍್ಯಕರ್ತರಲ್ಲೂ ಇದೇ ಭಾವನೆ ಇದೆ. ಮೊದಲು ವಿಧಾನ ಸಭಾ ಚುನಾವಣೆಗೆ ಸ್ಪರ್ಧಿಸುವಂತೆ ಹೇಳಿದರು ಸ್ಪರ್ಧಿಸಿ, ಸೋಲಾಯಿತು. ನಂತರ ಉಡುಪಿ ಚಿಕ್ಕಮಗಳೂರು ಲೋಕಸಭೆಗೆ ಸ್ಪರ್ಧಿಸಿದೆ. ಅಲ್ಪ ಮತದ ಅಂತರದಲ್ಲಿ ಸೋಲಾಯಿತು. ಇನ್ನಷ್ಟು ಪ್ರಯತ್ನ ಪಟ್ಟಿದ್ದರೆ ಗೆಲ್ಲಬಹುದಿತ್ತು ಎಂದರು. ನಂತರೆ ಮಧ್ಯಂತರ ಚುನಾವಣೆಯಲ್ಲಿ ಸಂಘಟಿಕ ಪ್ರಯತ್ನದಿಂದ ಗೆಲುವಾಯಿತು. ಮತ್ತೆ ಲೋಕಸಭೆಯಲ್ಲಿ ಸೋಲಾಯಿತು. ಸೋಲು, ಗೆಲವು ಎಲ್ಲವನ್ನೂ ಕಂಡಿದ್ದೇನೆ. ಅವಳಿ ಜಿಲ್ಲೆಯ ಕಾರ‍್ಯಕರ್ತರ ಬೆಂಬಲ, ಎರಡೂ ಜಿಲ್ಲೆಯ ಗ್ರಾಪಂ ಜೊತೆ ಇಟ್ಟಿಕೊಂಡ ಸಂಬಂಧ, ಮತ್ತು ಮಾಡಿದ ಅಭಿವೃದ್ಧಿ ಕೆಲಸ ವಿಧಾನ ಪರಿಷತ್ ಚುನಾವಣೆ ಮೇಲೆ ಪ್ರಭಾವ ಬೀರಲಿದೆ.

ಕುಂದಾಪ್ರ ಡಾಟ್ ಕಾಂ: ಬೇರೆ ಪಕ್ಷ ಸೇರ್ಪಡೆಯಾಗುವ ಯೋಚನೆ ಇದೆಯೇ?
ಹೆಗ್ಡೆ: ಅಂತಹ ಯೋಚನೆ ಇಲ್ಲ. ಸದ್ಯಕ್ಕೆ ಚುನಾವಣೆಯಲ್ಲಿ ಗೆಲ್ಲುವುದೇ ನನ್ನ ಉದ್ದೇಶ. ನಾನು ಪಕ್ಷೇತರನಾಗಿದ್ದ ಸಂದರ್ಭದಲ್ಲಿ ಸರಕಾರದ ಚಟುವಟಿಕೆ/ ಸರಕಾರದ ತಪ್ಪುಗಳ ವಿರುದ್ಧದ ಹೋರಾಟದಲ್ಲಿ ಸಕ್ರಿಯನಾಗಿರಲು ಸಾಧ್ಯವಾಗಿತ್ತು ಎಂದು ಹೆಗ್ಡೆ, ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದಾಗ ಸಚಿವನಾಗಲು ಆಹ್ವಾನಿಸಿದ್ದರು. ನಾನು ನಿರಾಕರಿಸಿದ್ದೆ. ಅಧಿಕಾರ ದಾಹ ನನಗಿಲ್ಲ. ಅಧಿಕಾರ ಮುಖ್ಯವಲ್ಲ. ನಮಗೆ ದೊರೆಯುವ ಅವಕಾಶವನ್ನು ಹೇಗೆ ಬಳಸಿಕೊಳ್ಳುತ್ತೇವೆ ಎನ್ನುವುದೇ ಮುಖ್ಯ. (ಕುಂದಾಪ್ರ ಡಾಟ್ ಕಾಂ)

Call us

ಕುಂದಾಪ್ರ ಡಾಟ್ ಕಾಂ: ಮುಂದಿನ ನಿಮ್ಮ ನಡೆ ಏನು?
ಹೆಗ್ಡೆ: ನಾನು ಭಂಡಾಯ ಅಭ್ಯರ್ಥಿಯಲ್ಲ ಸ್ವತಂತ್ರ ಅಭ್ಯರ್ಥಿ. ಚುನಾವಣೆ ಬಳಿಕವೂ ಸ್ವತಂತ್ರ ಅಭ್ಯರ್ಥಿಯಾಗಿ ಈ ಭಾಗದ ಸಮಸ್ಯೆ ಅಭಿವೃದ್ಧಿಗಳ ಬಗ್ಗೆ ಶ್ರಮಿಸುತ್ತೇನೆ. ನನ್ನ ಸ್ಪರ್ಧೆಯಿಂದ ಗ್ರಾಪಂ. ಕಡೆ ಮುಖಹಾಕದವರೂ ಗ್ರಾಪಂ. ಬಾಗಿಲು ಬಡೆಯುತ್ತಿದ್ದು, ಇದಕ್ಕೆ ನಾನು ಗ್ರಾಪಂ ಜೊತೆ ಇಟ್ಟುಕೊಂಡ ಸಂಪರ್ಕ ಕಾರಣ. ನಾನು ಸ್ವತಂತ್ರ ಅಭ್ಯರ್ಥಿಯಾಗಿ ಉಳಿಯುತ್ತೇನೆ. ಹೆಗ್ಡೆ ಅವರ ಬೇರೆ ಪಕ್ಷ ಸೇರುತ್ತಾರೆ ಎನ್ನೋದು ವಿರೋಧಿಗಳ ಕಪೋಲಕಲ್ಪತ. ಸ್ವತಂತ್ರ ಅಭ್ಯರ್ಥಿ ಬೇರೆ ಪಕ್ಷ ಸೇರಿದರೆ ಸ್ಥಾನ ರದ್ದಾಗುತ್ತದೆ ಎಂಬ ಚಿಕ್ಕ ಜ್ಞಾನ ಇಲ್ಲದಿರುವುದು ಬೇಸರದ ಸಂಗತಿ. ಕಾರ‍್ಯಕರ್ತರ ಭಾವನೆಗೆ ಸ್ಪಂದಿಸಿ ಸ್ಪರ್ಧೆ.

ಮತದಾನದ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ ಎಂಬ ಮಾತು ಕೇಳಿಬರುತ್ತಿದೆ. ಅದು ನಿಮ್ಮ ಗಮನದಲ್ಲಿದೆಯೇ?
ಹೆಗ್ಡೆ: ವಿರೋಧಿಗಳು ಮತ ಯಾರಿಗೆ ಯಾರು ಮಾಡಿದ್ದಾರೆ ಎಂದು ತಿಳಿಯುತ್ತದೆ. ಮತದಾನ ಮಾಡುವಾಗಿ ಇಬ್ಬಿಬ್ಬರು ಹೋಗಿ ತೋರಿಸಿ ಮತದಾನ ಮಾಡುವಂತೆ ಪ್ರಚಾರ ಮಾಡಲಾಗುತ್ತಿದೆ. ಇದಕ್ಕೆ ಚುನಾವಣೆ ಅಧಿಕಾರಿಗಳ ಅವಕಾಶ ನೀಡಬಾರದು. ಹಾಗೆ ವಿಧಾನ ಪರಿಷತ್ ಚುನಾವಣೆ ಮತದಾನದ ನಂತರ ಎಲ್ಲ ಮತ ಒಟ್ಟುಮಾಡಿ ಕಟ್ಟುಕಟ್ಟಿ ನಂತರ ಎಣಿಕೆ ಮಾಡುವುದರಿಂದ ಯಾವ ಯಾವ ಕೇತ್ರದಲ್ಲಿ ಎಷ್ಟು ಮತದಾನ ಎಂದು ತಿಳಿಯಲು ಸಾಧ್ಯವಿಲ್ಲ. ಒಟ್ಟಾರೆ ಅವಳಿ ಜಿಲ್ಲೆಯ ವಾತಾವಗರಣ ನನಗೆ ಪೂರಕವಾಗಿದೆ.

[box type=”custom” color=”#ff0547″ bg=”#ffffff” fontsize=”15″ radius=”5″ border=”#1e73be”]Note: Copy / reproduction of published contents of Kundapra.com, without consent is illegal. Such persons will be prosecuted.[/box]

Leave a Reply

Your email address will not be published. Required fields are marked *

two × four =