ಬೇರೆಯವರು ಹೇಗಿರುತ್ತಾರೆ ಅನ್ನೊದಕ್ಕಿಂತ ನಾವು ಹೇಗಿರುತ್ತೇವೆ ಅನ್ನೊದು ಮುಖ್ಯ: ಸಂತೋಷ್ ಕೋಣಿ

Call us

Call us

ಕುಂದಾಪುರದಲ್ಲಿ ಪತ್ರಿಕೆಗಳಿಗೆ ಬರವಿಲ್ಲ. ದಿನಪತ್ರಿಕೆ, ವಾರಪತ್ರಿಕೆ, ಪಾಕ್ಷಿಕ, ಮಾಸಿಕ, ತ್ರೈಮಾಸಿಕ, ಅರೆವಾರ್ಷಿಕ, ವಾರ್ಷಿಕ ಹೀಗೆ ಹತ್ತಾರು ಪತ್ರಿಕೆಗಳು ತಾಲೂಕಿನಿಂದ ಪ್ರಕಟಗೊಂಡು ಓದುಗನ ಹಸಿವನ್ನು ತಣಿಸಿ, ಜ್ಞಾನ ಭಂಡಾರವನ್ನು ಹೆಚ್ಷಿಸಿ ಸಾಮಾಜಿಕ ಕಾಳಜಿಯನ್ನು ಎತ್ತಿ ಹಿಡಿಯುತ್ತಿವೆ.

Call us

Call us

ಪತ್ರಿಕೆಗಳು ಹತ್ತಾರಿರಬಹುದು, ಒಂದೊಂದು ಒಂದೊಂದು ವಿಚಾರಗಳನ್ನು ವೈಭವಿಕರಿಸಬಹುದು. ಆದರೆ ಎಲ್ಲಾ ಪತ್ರಿಕೆಗಳ ಹಿಂದಿನ ಉದ್ದೇಶ ಒಂದೇ. ಅದು ಸ್ವಸ್ಥ ಸಮಾಜದ ನಿರ್ಮಾಣ. ಆ ನಿಟ್ಟಿನಲ್ಲಿ ಸಂಪಾದಕನೆನಿಸಿಕೊಂಡವನ ಸಾಮಾಜಿಕ ಬದ್ಧತೆ ಪ್ರಮುಖವಾದುದು

‘ನಮ್ಮೂರ ಸಂಪಾದಕರ ಸಂದರ್ಶನ’ ಎಂಬ ಲೇಖನ ಮಾಲಿಕೆಯನ್ನು ಕುಂದಾಪ್ರ ಡಾಟ್ ಕಾಂ ಆರಂಭಿಸುತ್ತಿದ್ದು ತನ್ಮೂಲಕ ಸಮಾಜದ ಸ್ಥಿತಿ ಗತಿ, ಅಗತ್ಯತೆಗಳ ಕುರಿತಾಗಿ ಚರ್ಚಿಸುವ, ವಸ್ತುಸ್ಥಿತಿಯನ್ನು ಓದುಗರ ಮುಂದಿಡುವ ಸಣ್ಣ ಪ್ರಯತ್ನ ನಮ್ಮದು.

ಮೊದಲ ಸಂದರ್ಶನದಲ್ಲಿ ಯುವ ಪತ್ರಕರ್ತ, ತಾಲೂಕಿನ ವಾರ ಪತ್ರಿಕೆಗಳಲ್ಲೊಂದಾದ ‘ಸುದ್ದಿಮನೆ’ಯ ಸಂಪಾದಕ ಸಂತೋಷ್ ಕೋಣಿ ಅವರನ್ನು ಕುಂದಾಪ್ರ ಡಾಟ್ ಕಾಂ ಸಂದರ್ಶಿಸಿತು.

Interview-with-Santhosh-Konಕುಂದಾಪ್ರ ಡಾಟ್ ಕಾಂ(*) ಕುಂದಾಪುರ ತಾಲೂಕನ್ನು ಸಂಪೂರ್ಣವಾಗಿ ಅವಲೋಕಿಸಿದಾಗ ಇಲ್ಲಿನ ಜನಜೀವನ ಹೇಗಿದೆ ಮತ್ತು ಯಾವ ದಿಕ್ಕಿನಲ್ಲಿ ಸಾಗಬೇಕಾಗಿದೆ ಎಂದೆನಿಸುತ್ತೆ?

Call us

ಸಂತೋಷ್ ಕೋಣಿ: ಯಾವುದೇ ನೈಜ ಸಾಮಾಜಿಕ ಸಮಸ್ಯೆಗಳಿಗೆ ಸ್ವಂದಿಸುವಲ್ಲಿ ಇಂದು ವಿಫಲರಾಗುತ್ತಿದ್ದೇವೆ. ಕೇವಲ ಸಂಘಟನೆಗಳನ್ನು ಮಾಡಿಕೊಂಡು ಕಾರ್ಯಕ್ರಮಗಳಿಗಾಗಿ ಕಾರ್ಯಕ್ರಮಗಳನ್ನು ರೂಪಿಸಿಕೊಂಡು ಮೆರೆಯುವ ಪ್ರವೃತ್ತಿ ಬೆಳೆಯುತ್ತಿದೆ ಹೊರತು ನೈಜ ಸಮಸ್ಯೆಗಳನ್ನು ಚಿತ್ರಿಸುವ ಪ್ರಕ್ರಿಯೆ ನಡೆಯುತ್ತಿಲ್ಲ. ಪ್ರಚಾರ, ಅಧಿಕಾರದ ದಾಹ, ಪ್ರತಿಷ್ಠೆಯ ಅಮಲಿನಿಂದ ಪರಸ್ಪರ ಪೈಪೋಟಿ ನಡೆಯುತ್ತಿದೆ ಎಂದೆನಿಸುತ್ತಿದೆ. ಮನುಷ್ಯ ಮನುಷ್ಯರ ನಡುವೆ ಪ್ರೀತಿ, ವಿಶ್ವಾಸ, ಬಾಂಧವ್ಯದ ಕೊಂಡಿಗಳಲ್ಲಿ ಬಿರುಕು ಮೂಡಿಸುತ್ತಿರುವ ಆಧುನಿಕರಣದ ಪ್ರಭಾವ ಇಲ್ಲಿಯೂ ಇದೆ. ವಿದ್ಯಾರ್ಥಿ ಸಮುದಾಯ ಯಂತ್ರಗಳಂತಾಗಿದ್ದಾರೆ. ಯುವ ಸಮುದಾಯ ಭವಿಷ್ಯದ ಬಗ್ಗೆ ಚಿಂತನೆಗಳೇ ಇಲ್ಲದೇ ಕೇವಲ ಕ್ಷಣಿಕ ಸುಖ, ಮೋಹ ಮುಂತಾದ ವಸ್ತು ವಿಷಯಗಳತ್ತ ಆಕರ್ಷಿತರಾಗಿ ನಾಗರೀಕ ಪ್ರಜ್ಞೆಯನ್ನು ಕಳೆದುಕೊಳ್ಳುತ್ತಿದ್ದಾರೆ ಎಂದೆನಿಸುತ್ತದೆ. ಮೇಲ್ನೊಟಕ್ಕೆ ಎಲ್ಲವೂ ಒಳಿತಿನಿಂದ ಕೂಡಿದೆ ಎಂದು ಕಂಡು ಬಂದರೂ ಕೂಡ ಎಲ್ಲೋ ಒಂದೆಡೆ ಸಮಾಜದ ವಾತಾವರಣ ಹಾಳಾಗಿದೆ.

Click here

Click Here

Call us

Call us

Visit Now

ನಾವು ಬದುಕಿನಲ್ಲಿ ಹಣಗಳಿಸುವುದೊಂದೇ ಮುಖ್ಯ ಉದ್ದೇಶವಲ್ಲ ಎನ್ನುವುದನ್ನು ಮನಗಾಣಬೇಕಾಗಿದೆ. ಪ್ರತಿಯೊಬ್ಬರೂ ಬದುಕಿನಲ್ಲಿ ಆದರ್ಶ, ಮೌಲ್ಯಗಳನ್ನು ಪಾಲಿಸಿಕೊಂಡು ಮುನ್ನಡೆದರೆ ಉತ್ತಮ ಸ್ಥಿತಿಯನ್ನು ತಲುಪಬಹುದು. ಪರಸ್ಪರ ದೋಷಿಸುವುದನ್ನು ಬಿಟ್ಟು ಸಮಾಜಕ್ಕೆ ನಾನೇನು ನಿಡಬಲ್ಲೆ ಎಂಬ ಚಿಂತನೆಗೆ ಒಳಗಾಗಬೇಕಾದುದು ಅವಶ್ಯ.

* ಕುಂದಾಪ್ರ ಕನ್ನಡದ ಸ್ಥಿತಿಗತಿಗಳು ಹೇಗಿದೆ?

ಸಂತೋಷ್ ಕೋಣಿ: ಕುಂದಾಪ್ರ ಕನ್ನಡ ಉಳಿಯಬೇಕಿದ್ದರೆ ಪ್ರತಿಯೊಬ್ಬರ ಆಡುಭಾಷೆ ಅದೇ ಆಗಿರಬೇಕು. ನಮ್ಮೊಳಗೆ ಅಭಿಮಾನವಿಲ್ಲದೇ ಎಲ್ಲಿಯವರೆಗೆ ಮಾತನಾಡುವುದಿಲ್ಲವೋ ಅಲ್ಲಿಯ ತನಕ ಭಾಷೆ ಬೆಳೆಯಲು ಸಾಧ್ಯವಿಲ್ಲ. ಅಂತರ್ಗತವಾದ ಪ್ರೀತಿ ಇಲ್ಲದಿದ್ದರೆ ಭಾಷೆ ಅಳಿಯುವುದು ಸಾಮಾನ್ಯ. ಭಾಷೆ ಉಳಿವಿಗೆಂದು ಮಾಡುವ ಕಾರ್ಯಕ್ರಮಗಳಿಂದ ಏನೂ ಪ್ರಯೋಜನವಾಗದು. ಸಂಸ್ಕೃತಿಗಳು ಹರಿಯುವ ನೀರಿದ್ದಂತೆ. ಹೊಸ ನೀರಿಗೆ ಒಗ್ಗಿಕೊಳ್ಳಬೇಕಾದ್ದು ಕೂಡು ಅನಿವಾರ್ಯ. ಭಾಷೆ ನಮ್ಮ ಸಂವಹನದ ಕೊರತೆಯನ್ನು ನೀಗಿಸುವಂತಿದ್ದರೆ ಸಾಕು.

* ಕುಂದಾಪುರ ಇನ್ನೂ ಯಾವೆಲ್ಲ ಕ್ಷೇತ್ರದಲ್ಲಿ ಅಭಿವೃದ್ಧಿಯನ್ನು ಕಾಣಬೇಕಾಗಿದೆ?

ಸಂತೋಷ್ ಕೋಣಿ: ಕುಂದಾಪುರ ಎಲ್ಲಾ ಕ್ಷೇತ್ರಗಳಲ್ಲೂ ಸಾಕಷ್ಟು ಅಭಿವೃದ್ಧಿ ಸಾಧಿಸಬೇಕಿದೆ. ಪ್ರಮುಖವಾಗಿ ಗ್ರಾ. ಪಂ. ನಿಂದ ಹಿಡಿದು ಮೇಲ್ದರ್ಜೆಯ ಜನಪ್ರತಿನಿಧಿಗಳಿಗೆ ಮಾಹಿತಿ, ರಾಜಕೀಯ ಜ್ಞಾನದ ಕೊರತೆ ಇದೆ. ಯಾವುದೇ ಯೊಜನೆಗಳ ಬಗ್ಗೆ ಜನಪ್ರತಿನಿಧಿಗಳಿಗೆ ಸರಿಯಾದ ಮಾಹಿತಿ ಇಲ್ಲ ಮತ್ತು ಜನರಿಗೂ ಕೂಡ ಸರಿಯಾದ ಮಾಹಿತಿ ನೀಡುತ್ತಿಲ್ಲ. ಈ ಸ್ಥಿತಿ ಬದಲಾಗಬೇಕು. ಮಹಾನಗರದ ಸಂಸ್ಕೃತಿ ಇಲ್ಲಿಗೂ ತಲುಪಿದ್ದು ಶಿಕ್ಷಣ ಮಾರಾಟದ ಕೇಂದ್ರವಾಗುತ್ತಿದೆ. ಇಲ್ಲಿಯೂ ಪ್ರಮುಖವಾಗಿ ಬದಲಾವಣೆ ಆಗಬೇಕು. ಪಾಪ ಪುಣ್ಯಗಳ ಬಗ್ಗೆ ಶ್ರದ್ಧೆ, ಕರ್ಮ ಸಿದ್ಧಾಂತಗಳ ಬಗ್ಗೆ ನಂಬಿಕೆ ಕಡಿಮೆಯಾಗುತ್ತಿರುವುದು ಕೂಡ ಒಳ್ಳೆಯ ಬೆಳವಣಿಗೆ ಅಲ್ಲ.

* ಒಬ್ಬ ಸಾಮಾನ್ಯ ಪ್ರಜೆಯಾಗಿ ದೇಶದಲ್ಲಿ ಯಾವ ರೀತಿ ಆಡಳಿತವನ್ನು ಬಯಸುತ್ತಿರಾ?

ಸಂತೋಷ್ ಕೋಣಿ: ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ ಕೇವಲ ಓಟು ಹಾಕುವವರೆಗೆ ಮಾತ್ರ ಸೀಮಿತವಾಗಿದೆ. ನಂತರದ್ದೆಲ್ಲವೂ ಜನಪ್ರತಿನಿಧಿಗಳ ಮೂಗಿನ ನೇರಕ್ಕೆ ನಡೆಯುತ್ತದೆ. ಸಾಮಾನ್ಯರ ಸಮಸ್ಯೆಗಳಿಗೆ ಸರಿಯಾದ ಸ್ವಂದನೆ ಇಲ್ಲ. ಅಧಿಕಾರ ವಿಕೇಂದ್ರಿಕರಣಕ್ಕೆ ಹೆಚ್ಚು ಒತ್ತು ಕೊಡುವ ಮೂಲಕ ಜನಸಾಮಾನ್ಯರ ನೋವು ನಲಿವುಗಳಿಗೆ ಸ್ವಂದನೆ ಸಿಗುವ ಆಡಳಿತವಿದ್ದರೆ ಅದು ಸಂತೋಷದ ವಿಚಾರ. ಸರಕಾರದ ಸೌಲತ್ತುಗಳು ಹಲವು ಮಧ್ಯವರ್ತಿಗಳನ್ನು ಧಾಟಿ ಜನರನ್ನು ತಲುಪುವ ವೇಳೆಗೆ ಆಗುವ ಸೋರಿಕೆ ಮತ್ತು ವಿಳಂಬವನ್ನು ತಡೆಗಟ್ಟಿ, ಸರಕಾರದ ಪ್ರಯೋಜನಗಳು ಜನರಿಗೆ ಸೂಕ್ತ ಸಮಯದಲ್ಲಿ ತಲುಪಿಸುವಂತಹ ಬಿರುಸಿನ ಆಡಳಿತ ವ್ಯವಸ್ಥೆ ಬೇಕು. ಭಾರತ ಮುದುವರಿಯುತ್ತಿರುವ ರಾಷ್ಟ್ರವೆಂದು ನಾವು ಚಿಕ್ಕದಿರುವಾಗಲಿಂದ ಕೇಳುತ್ತಲೇ ಬಂದಿದ್ದೇವೆ. ಇಂದೂ ಕೂಡ ಅದನ್ನು ಮುಂದುವರಿದ ರಾಷ್ಟ್ರವನ್ನಾಗಿ ಮಾಡಲಾಗಿಲ್ಲ. ಓಟ್ ಬ್ಯಾಂಕ್ ರಾಜಕಾರಣ ಹಾಗೂ ಹೆಚ್ಚಾದ ರಾಜಕೀಯ ಪಕ್ಷಗಳ ಸಂಖ್ಯೆಗೆ ಕಡಿವಾಣ ಬಿಳಬೇಕು. ನಮ್ಮಲ್ಲಿ ಬಹಳಷ್ಟು ಸಂಪನ್ಮೂಲಗಳಿದ್ದು ಅದನ್ನು ಶಿಸ್ತುಬದ್ಧವಾಗಿ ವ್ಯಯಿಸಿ, ಸ್ವಚ್ಚ ಆಡಳಿತ ಕೊಡುವ ಸ್ವಾರ್ಥರಹಿತ ರಾಜಕಾರಣಿಗಳು ನಮಗೆ ಬೇಕು.

*ಯುವ ಪತ್ರಕರ್ತ ಮಿತ್ರರುಗಳಿಗೆ ನಿಮ್ಮ ಮಾತು…

ಸಂತೋಷ್ ಕೋಣಿ: ಮೌಲ್ಯಯುತ ಬದುಕಿನ ಕುರಿತಾಗಿ ಅರ್ಥೈಸಿಕೊಳ್ಳಬೇಕಾದ ಅವಶ್ಯಕತೆ ಇದೆ. ಕೆಲವರು ಕೇವಲ ಸಮಾರಂಭಗಳ ವರದಿ ಮಾಡುವುದಷ್ಟೇ ಪತ್ರಿಕೋದ್ಯಮ ಎಂದು ಭಾವಿಸಿದ್ದಾರೆ. ಪತ್ರಕರ್ತನೆನಿಸಿಕೊಂಡವನು ಸಮಾಜಕ್ಕೆ ಅಗತ್ಯಗಳಿಗೆ ಸ್ವಂದಿಸಬೇಕಾದುದು ಅವಶ್ಯ. ಪತ್ರಕರ್ತ ಎಂದು ಅನ್ನಿಸಿಕೊಳ್ಳುವುದರಿಂದ ಏನು ಪ್ರಯೋಜನವಿಲ್ಲ. ಆತ ಸಮಾಜದ ದೃಷ್ಟಿಯಾಗಿ ಕಾರ್ಯನಿರ್ವಹಿಸಿದಾಗ ಸಮಾಜದ ಬದಲಾವಣೆ ಸಾಧ್ಯ. ತನ್ಮೂಲಕ ಈ ವೃತ್ತಿಗೆ ಗೌರವ ತಂದುಕೊಡಬಹುದಾಗಿದೆ. ಬಂಡವಾಳಶಾಹಿಗಳ ಹಿಡಿತದಲ್ಲಿರುವ ಪತ್ರಿಕೋದ್ಯಮದ ನಿಲುವುಗಳು ಸಾಮಾಜಿಕ ಕಾಳಜಿಯನ್ನು ಮರೆಮಾಚುವಂತಿದ್ದರೂ ಇದರ ನಡುವೆಯೂ ಪತ್ರಕರ್ತ ಸಾಮಾಜಿಕ ಬದ್ಧತೆಯನ್ನು ಪಾಲಿಸುವುದು ಹೆಮ್ಮೆಯ ಸಂಗತಿ.

* ಸಾಮಾಜಿಕ ತಾಣಗಳು ಸಮಾಜದ ಮೇಲೆ ಯಾವ ರೀತಿಯ ಪರಿಣಾಮ ಬೀರಿದೆ?

ಸಂತೋಷ್ ಕೋಣಿ: ಸಾಮಾಜಿಕ ತಾಣದ ಒಳಿತುಗಳಿಗಿಂತ ಕೆಡುಕುಗಳೇ ಜಾಸ್ತಿ. ಅದು ಸಂಬಂಧಗಳ ಕೊಂಡಿಯಾಗುತ್ತಿದೆ ಎನ್ನುವುದಕ್ಕಿಂತ ಹೆಚ್ಚಾಗಿ ನೀರಸ ಪ್ರಕ್ರಿಯೆಯಾಗಿ ಪರಿಣಮಿಸಿದೆ. ಮತ್ತೊಬ್ಬರ ಖಾಸಗಿ ಜೀವನದ ಮೇಲೆ ದುಷ್ಪರಿಣಾಮಗಳಾಗುತ್ತಿದೆ. ಯಾಂತ್ರಿಕತೆ ಹಾಗೂ ಸಾಮಾಜಿಕ ತಾಣದ ಗೀಳು ಹತ್ತಿಸಿಕೊಂಡವರಿಗೆ ಸಹಜವಾದ ಪ್ರಾಕೃತಿಕ ಸೌಂದರ್ಯವನ್ನು ಸವಿಯುವ ಮನಸ್ಥಿತಿಯೂ ಇಲ್ಲದಂತಾಗಿದೆ. ನಮ್ಮಲ್ಲಿರುವ ವಿಕೃತಿಗಳನ್ನು ಕಡಿಮೆ ಮಾಡಿಕೊಂಡು ವಿಶ್ವಾಸ, ಸಂಬಂಧಗಳು ವೃದ್ಧಿಯಾಗುವಂತಹ, ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡುವಂತಹ ವಿಚಾರಗಳನ್ನು ಸಾಮಾಜಿಕ ತಾಣದಲ್ಲಿ ಹಂಚಿಕೊಳ್ಳಬೇಕು. ಬೇರೆಯವರು ಹೇಗೆ ಇರುತ್ತಾರೆ ಎನ್ನುವುದಕ್ಕಿಂತ ನಾವು ಹೇಗಿರುತ್ತೆವೆ ಎನ್ನುವುದಷ್ಟೇ ಮುಖ್ಯ. ಸಿಕ್ಕ ಅವಕಾಶವನ್ನು ಹೇಗೆ ಉಪಯೋಗಿಸಿಕೊಳ್ಳುತ್ತೆವೆ ಎನ್ನುವುದು ಅವರವರಿಗೆ ಬಿಟ್ಟದ್ದು..

Leave a Reply

Your email address will not be published. Required fields are marked *

six + 13 =