ಬೈಂದೂರು: ಜಲಶಕ್ತಿ ಅಭಿಯಾನ ವಿಶೇಷ ಮಾಹಿತಿ ಕಾರ್ಯಾಗಾರ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ,
ಬೈಂದೂರು:
ಕ್ಷೇತ್ರ ಜನಸಂಪರ್ಕ ಕಾರ್ಯಾಲಯ, ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯ, ಬೈಂದೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಮಾಜ ವಿಜ್ಞಾನ ಸಂಘ, ಇಕೋಕ್ಲಬ್, ರೋವರ್ ರಂಜರ್ ಘಟಕ, ಎನ್ಎಸ್ಎಸ್ ಘಟಕ ಇವರ ಸಂಯುಕ್ತ ಆಶ್ರಯದಲ್ಲಿ ಜಲಶಕ್ತಿ ಅಭಿಯಾನ ವಿಶೇಷ ಮಾಹಿತಿ ಕಾರ್ಯಾಗಾರವನ್ನು ಕಾಲೇಜಿನಲ್ಲಿ ಆಯೋಜಿಸಲಾಗಿತ್ತು.

Call us

Call us

ಕಾರ್ಯಕ್ರಮವನ್ನು ಉದ್ಘಾಟಿಸಿದ ಬೈಂದೂರು ತಹಶೀಲ್ದಾರ್ ಶೋಭಾಲಕ್ಷ್ಮಿ ಹೆಚ್. ಎಚ್ ಮಾತನಾಡಿ, ಶುದ್ಧ ಕುಡಿಯುವ ನೀರಿನ ಅವಶ್ಯಕತೆ ಹಾಗೂ ನಿರ್ವಹಣೆಯ ಕುರಿತು ತಿಳಿಸಿದರು.

ಕ್ಷೇತ್ರ ಜನಸಂಪರ್ಕ ಕಾರ್ಯಾಲಯ ಮಂಗಳೂರು ಇದರ ಕ್ಷೇತ್ರ ಪ್ರಚಾರ ಅಧಿಕಾರಿ ಜಿ. ತುಕಾರಾಮ ಗೌಡ ಅವರು ಜಲ ಜೀವನ್ ಮಿಷನ್ ಕಾರ್ಯಕ್ರಮ ಜಲಶಕ್ತಿ ಅಭಿಯಾನ ಇದರ ಔಚಿತ್ಯ ಹಾಗೂ ಪ್ರಾಮುಖ್ಯತೆಯ ಕುರಿತು ತಿಳಿಸಿದರು.

ಉಡುಪಿ ಜಿಲ್ಲಾ ಪಂಚಾಯತ್ ಜಿಲ್ಲಾ ಯೋಜನಾ ವ್ಯವಸ್ಥಾಪಕರು ಜೆಜೆಎಂ ಟಿವಿ ಗಿರೀಶ್ ಮಾತನಾಡಿ ಸರ್ಕಾರದ ಜಲ ಜೀವನ್ ಮಿಷನ್ ಯೋಜನೆ, ಉಡುಪಿ ಜಿಲ್ಲೆಯ ಜಲಮೂಲಗಳು, ಕುಡಿಯುವ ನೀರಿನ ಸಮಸ್ಯೆ, ನೀರಿನ ಸಂರಕ್ಷಣೆಗೆ ಸರ್ಕಾರದ ಯೋಜನೆ, ಮನೆಮನೆಗೂ ನೀರು ತಲುಪಿಸುವ ಯೋಜನೆ, ಹಾಗೂ ಜನಸಮುದಾಯದ ಜವಾಬ್ದಾರಿಗಳ ಕುರಿತು ವಿದ್ಯಾರ್ಥಿ ಸಮುದಾಯಕ್ಕೆ ಅರಿವು ಮೂಡಿಸುವ ಮಾಹಿತಿಗಳನ್ನು ಹಂಚಿಕೊಂಡು ಸಂವಾದ ನಡೆಸಿದರು.

Click here

Click Here

Call us

Call us

Visit Now

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದ ಪ್ರಾಂಶುಪಾಲರಾದ ಡಾ. ರಘು ನಾಯ್ಕ ಕಾಲೇಜಿನಲ್ಲಿ ಜಲ ಸಂರಕ್ಷಣೆಗೆ ಕೈಗೊಂಡ ಕ್ರಮಗಳು ಹಾಗೂ ವಿದ್ಯಾರ್ಥಿಗಳು ತಮ್ಮ ಜನ ಸಮುದಾಯಗಳಲ್ಲಿ ನೀರಿನ ಸಂರಕ್ಷಣೆ ಕುರಿತು ಅರಿವು ಮೂಡಿಸಬೇಕೆಂದು ತಿಳಿಸಿದರು.

Call us

ಕ್ಷೇತ್ರ ಜನಸಂಪರ್ಕ ಕಾರ್ಯಾಲಯ ಮಂಗಳೂರು ಇದರ ಜಿಎಸ್ ರೋಹಿತ್ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಸ್ಪರ್ಧೆಯನ್ನು ನಡೆಸಿಕೊಟ್ಟರು.

ರಾಜ್ಯಶಾಸ್ತ್ರ ವಿಭಾಗ ಮುಖ್ಯಸ್ಥ ಡಾ. ಶಿವಕುಮಾರ ಪಿ ವಿ. ಕಾರ್ಯಕ್ರಮ ಸಂಯೋಜನೆ ಹಾಗೂ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಡಾ. ಅಶ್ವಥ್ ಡಿ. ನಾಯ್ಕ, ನಾಗರಾಜ ಶೆಟ್ಟಿ, ಮೋಹನ್ ಕುಮಾರ್ ಉಪಸ್ಥಿತರಿದ್ದರು.

ವಿದ್ಯಾರ್ಥಿನಿಯರಾದ ಅನುಶ್ರೀ, ಕಾರ್ಯಕ್ರಮವನ್ನು ನಿರೂಪಿಸಿದರು. ದೀಪಾಲಕ್ಷ್ಮಿ ಪ್ರಾರ್ಥಿಸಿದರು. ಮನಿಷಾ ಸ್ವಾಗತಿಸಿದರು. ಸುಶ್ಮಿತಾ ವಂದಿಸಿದರು.

ಇಂಗ್ಲಿಷ್ ಪ್ರಬಂಧ ಸ್ಪರ್ಧೆಯಲ್ಲಿ ಅನುಶ್ರೀ (ತೃತಿಯ ಬಿಎ) ಪ್ರಥಮ ಸ್ಥಾನ, ಲತಾ ಗಣಪತಿ ದೇವಾಡಿಗ (ದ್ವಿತೀಯ ಬಿಕಾಂ) ದ್ವಿತೀಯ ಸ್ಥಾನ ಪಡೆದರು.

ಕನ್ನಡ ಪ್ರಬಂಧ ಸ್ಪರ್ಧೆಯಲ್ಲಿ ಪ್ರಜ್ವಲ್ (ದ್ವಿತೀಯ ಬಿಎ) ಪ್ರಥಮ ಸ್ಥಾನ, ಚಿನ್ಮಯ್ (ದ್ವಿತೀಯ ಬಿಬಿಎ) ದ್ವಿತೀಯ ಸ್ಥಾನ ಪಡೆದರು.

ರಂಗೋಲಿ ಸ್ಪರ್ಧೆಯಲ್ಲಿ ಗಣೇಶ (ತೃತೀಯ ಬಿಕಾಂ) ಪ್ರಥಮ ಸ್ಥಾನ, ಚೈತ್ರ (ಪ್ರಥಮ ಬಿ ಕಾಂ) ದ್ವಿತೀಯ ಸ್ಥಾನ, ಗೌರೀಶ (ತೃತಿಯ ಬಿಎ) ತೃತೀಯ ಸ್ಥಾನ ಪಡೆದರು.

ರಸಪ್ರಶ್ನೆ ಸ್ಪರ್ಧೆಯಲ್ಲಿ ಅನುಶ್ರೀ, ಮಲ್ಲಿಕಾ, ಜಗದೀಶ, ಪ್ರೀತಿ, ಗಾಯತ್ರಿ, ದೀಪಿಕಾ ಗೊಂಡ, ಧನರಾಜ್, ಚಿನ್ಮಯ್ ವಿಜೇತರಾದರು.

Leave a Reply

Your email address will not be published. Required fields are marked *

2 × 1 =