ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕುಂದಾಪುರದಲ್ಲಿ ಪ್ರಧಾನ ಕಛೇರಿ ಹೊಂದಿರುವ ರೋಜರಿ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿಯ 2020-25ರ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಜೋನ್ಸನ್ ಡಿ’ಆಲ್ಮೇಡಾ ಪುನರಾಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಕಿರಣ್ ಮೆಲ್ವಿನ್ ಲೋಬೊ, ಪಡುಕೋಣೆ ಆಯ್ಕೆಯಾದರು. ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಫೆ.೧೫ರಂದು ನಡೆಯಿತು. ಈ ಸಂದರ್ಭದಲ್ಲಿ ನಿರ್ದೇಶಕರಾದ ಫಿಲಿಪ್ ಡಿಕೋಸ್ತಾ, ಬಸ್ರೂರು, ಜೇಕಬ್ ಡಿ’ಸೋಜ, ಕುಂದಾಪುರ, ವಿನೋದ್ ಕ್ರಾಸ್ಟೊ, ಕುಂದಾಪುರ, ಬ್ಯಾಪ್ಟಿಸ್ಟ್ ಡಾಯಸ್, ಸಂತೆಕಟ್ಟೆ, ಡಾಯ್ನಾ ಡಿ’ಆಲ್ಮೇಡಾ, ಕುಂದಾಪುರ, ಶಾಂತಿ ಆರ್. ಕರ್ವಾಲ್ಲೊ, ಕುಂದಾಪುರ, ಶಾಂತಿ ಡಾಯಸ್, ಬೈಂದೂರು, ಪ್ರಕಾಶ್ ಲೋಬೊ, ಗಂಗೊಳ್ಳಿ, ವಿಲ್ಸನ್ ಡಿ’ಸೋಜ, ಶಿರ್ವಾ, ಸಂತೋಷ್ ಓಜ್ವಾಲ್ಡ್ ಡಿ’ಸಿಲ್ವಾ, ಕಾರ್ಕಳ, ಓಝ್ಲಿನ್ ರೆಬೆಲ್ಲೊ, ತಲ್ಲೂರು, ವಿಲ್ಫ್ರೇಡ್ ಮಿನೇಜಸ್, ಹಂಗಳೂರು, ತಿಯೋದರ್ ಒಲಿವೆರಾ, ಕೋಟಾ, ಟೆರೆನ್ಸ್ ಸುವಾರಿಸ್, ಉಡುಪಿ, ಡೆರಿಕ್ ಡಿ’ಸೋಜ, ಸಾಸ್ತಾನ ಉಪಸ್ಥಿತರಿದ್ದರು.
