ಆಸ್ಟ್ರೇಲಿಯಾ ಅಥ್ಲೆಟಿಕ್ಸ್ : ಜಯಂತಿ ದೇವಾಡಿಗಗೆ ಪ್ರಶಸ್ತಿ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ
ಇಂದು ಆಸ್ಟ್ರೇಲಿಯಾದಲ್ಲಿ ನಡೆದ ಅಂತರಾಷ್ಟ್ರೀಯ ಮಾಸ್ಟರ್ ಅಥ್ಲೆಟಿಕ್ಸ್ ಸ್ವರ್ಧೆಯಲ್ಲಿ ಮುಂಬೈ ದೇವಾಡಿಗ ಸಂಘದ ಮಹಿಳಾ ವಿಭಾಗ ಕಾರ್ಯದರ್ಶಿ ಜಯಂತಿ ಎಂ. ದೇವಾಡಿಗ ಲಾಂಗ್ ಜಂಪ್ ವಿಭಾಗದಲ್ಲಿ ತೃತೀಯ ಬಹುಮಾನ ಗಳಿಸಿದ್ದಾರೆ. ಜಯಂತಿ ಮೂಲತಃ ದಕ್ಷಿಣಕನ್ನಡ ಜಿಲ್ಲೆಯ ಶಿಬರೂರಿನವರು.

Call us

Call us

ಅವರು ಇತ್ತಿಚಿಗೆ ಮುಂಬೈ ವಿಶ್ವವಿದ್ಯಾಲಯ ಕ್ರೀಡಾಂಗಣದಲ್ಲಿ ಜರುಗಿದ ಮೊದಲ ರಾಷ್ಟ್ರೀಯ ಮರ್ಕೆಂಟೈಲ್-ಕಾರ್ಪೊರೇಟ್ ಮಾಸ್ಟರ್ಸ್ ಟ್ರಾಕ್ ಮತ್ತು ಫಿಲ್ಡ್ -2015 ಇದರಲ್ಲಿ ಮೂರು ಚಿನ್ನದ ಪದಕ ಹಾಗೂ 2 ಬೆಳ್ಳಿಯ ಪದಕಗಳನ್ನು ಗಳಿಸಿ, ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿದ್ದ ಪ್ರೇಮಾ ಅವರೊಂದಿಗೆ ಚಾಂಪಿಯನ್ ಶಿಪ್ ಹಂಚಿಕೊಂಡಿದ್ದರು. ಹಲವು ಅಲ್ಲದೇ ಅಂತರಾಜ್ಯ ಕ್ರೀಡಾಕೂಟಗಳಲ್ಲೂ ಭಾಗವಹಿಸಿ ಪದಕ ಗಳಿಸಿದ್ದರು.

Call us

Call us

ಮುಂಬೈನಲ್ಲಿಯೇ ವಾಸವಿರುವ ಮಾಧವ ದೇವಾಡಿಗ ಅವರ ಪತ್ನಿಯಾದ ಜಯಂತಿ ದೇವಾಡಿಗ ಅವರಿಗೆ ಮೂವರು ಮಕ್ಕಳಿದ್ದಾರೆ. ಜಯಂತಿ ಅವರ ಕ್ರೀಡಾಕ್ಷೇತ್ರದಲ್ಲಿ ಈ ಸಾಧನೆಯನ್ನು ಅವರ ಬಂಧುಗಳು, ಸಮಾಜದ ಗಣ್ಯರು, ಅಭಿಮಾನಿಗಳು ಅಭಿನಂದಿಸಿದ್ದಾರೆ.

ವರದಿ: ಚರಣ್ ಬೈಂದೂರು

Jayanthi2 Jayanthi3 Jayanthi6

Leave a Reply

Your email address will not be published. Required fields are marked *

two × 4 =