ಶಿಕ್ಷಕ ರಾಜು ಮಯ್ಯಾಡಿ ಅವರಿಗೆ ಜ್ಞಾನ ಜ್ಯೋತಿ ಪ್ರಶಸ್ತಿ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಇಲ್ಲಿನ ಮಯ್ಯಾಡಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ರಾಜು ಎಸ್. ಮಯ್ಯಾಡಿ ಅವರಿಗೆ ಜ್ಞಾನ ಜ್ಯೋತಿ ಪ್ರಶಸ್ತಿ ದೊರೆತಿದೆ. ಡಿ.22ರಂದು ಕಲಬುರಗಿ ಕನ್ನಡ ಭವನದಲ್ಲಿ ನಡೆಯಲಿರುವ ಶಿಕ್ಷಣ ಜ್ಞಾನ ಮಾಸಪತ್ರಿಕೆಯ 17ನೇ ವಾರ್ಷಿಕೋತ್ಸವ, ರಾಜ್ಯ ಮಟ್ಟದ ಶೈಕ್ಷಣಿಕ ಸಮಾವೇಶದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ.

Call us

Call us

Visit Now

ದೈಹಿಕ ಶಿಕ್ಷಣ ಶಿಕ್ಷಕರಾಗಿರುವ ರಾಜು ಎಸ್. ಅವರು ಮಯ್ಯಾಡಿ ಶಾಲೆಯ ಹಳೆ ವಿದ್ಯಾರ್ಥಿ. ಕಳೆದ 34 ವರ್ಷಗಳಿಂದ ಅದೇ ಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಉತ್ತಮ ಕ್ರೀಡಾಪಟುವೂ ಎಂದೆಸಿನಿಕೊಂಡಿರುವ ಅವರು ತಮ್ಮ ವಿದ್ಯಾರ್ಥಿಗಳು ವಿವಿಧ ಕ್ರೀಡೆಗಳಲ್ಲಿ ಜಿಲ್ಲೆ ಹಾಗೂ ರಾಜ್ಯ ಮಟ್ಟದಲ್ಲಿ ಪ್ರತಿನಿಧಿಸುವಲ್ಲಿ ಶ್ರಮವಹಿಸಿದ್ದಾರೆ. ದೈಹಿಕ ಶಿಕ್ಷಣ ಶಿಕ್ಷಕರ ಸಂಘದಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸಿ ಸಂಘಟನಾ ಕೌಶಲ್ಯವನ್ನೂ ಮೆರೆದಿದ್ದಾರೆ. ಅದರೊಂದಿಗೆ ಕಳೆದ 9 ವರ್ಷಗಳಿಂದ ತನ್ನ ವೃತ್ತಿಯ ಜೊತೆಗೆ ಶಾಲಾ ವಾಹನದ ಚಾಲಕರಾಗಿಯೂ ರಾಜು ಎಸ್. ಮಯ್ಯಾಡಿ ಅವರು ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಿದ್ದಾರೆ. /ಕುಂದಾಪ್ರ ಡಾಟ್ ಕಾಂ ಸುದ್ದಿ/

Click here

Call us

Call us

ಇದನ್ನೂ ಓದಿ:
► ಮಯ್ಯಾಡಿ ಶಾಲೆಯಲ್ಲಿ ಶಿಕ್ಷಕರೇ ಶಾಲಾ ವಾಹನದ ಚಾಲಕ – https://kundapraa.com/?p=29268 .

Leave a Reply

Your email address will not be published. Required fields are marked *

six + two =