ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ಅಡಿಗ ಮನೆತನದ ಕಾಲುದೀಪವೊಂದು ಸಮುದ್ರೋಲ್ಲಂಘನ ಮಾಡಿ ವಿಶ್ವದ ದೊಡ್ಡಣ್ಣ ಎಂದೆನಿಸಿಕೊಂಡ ಅಮೇರಿಕಾ ಅಧ್ಯಕ್ಷರ ದೀಪಾವಳಿ ಸಂಭ್ರಮಕ್ಕೆ ಸಾಕ್ಷಿಯಾಗಿದೆ.
ಕುಂದಾಪುರ ತಾಲೂಕು ಕಕ್ಕುಂಜೆ ಗ್ರಾಮದ ಅಡಿಗ ಕುಟುಂಬದ ಕಾಲುದೀಪದಲ್ಲಿ ಅಮೆರಿಕಾದ ಪ್ರಥಮ ಪ್ರಜೆ ಜೋ ಬೈಡನ್ ದೀಪ ಬೆಳಗಿ ಶುಭಕೋರಿದ್ದರು. ಈ ದೀಪದ ಸಂಬಂಧ ಬೆಳೆಸಿದವರು ಜೋ ಬೈಡನ್ ಪತ್ನಿ ಜಿಲ್ ಬೈಡನ್. ಸಂಬಂಧ ಜೋಡಿಸಿದವರು ಅನಿವಾಸಿ ಭಾರತೀಯ ಕಕ್ಕುಂಜೆಯ ಮಾಲಾ ಅಡಿಗ.
ಮೂಲತಃ ಕಕ್ಕುಂಜೆಯವರಾದ ಮಾಲಾ ಅಡಿಗ ಅವರು ಅಮೇರಿಕಾದಲ್ಲಿಯೇ ನೆಲೆಸಿದ್ದು, ಜಿಲ್ ಬೈಡನ್ ಅವರ ನೀತಿ ನಿರ್ದೇಶಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ತಮ್ಮ ತಾಯಿಗೆ ಬಳುವಳಿಯಾಗಿ ಬಂದಿದ್ದ ಕಾಲುದೀಪವನ್ನು ತಮ್ಮ ಬಳಿ ಇರಿಸಿಕೊಂಡಿದ್ದ ಮಾಲಾ ಅಡಿಗ ಅವರಿಗೆ, ಅಧ್ಯಕ್ಷರ ಪತ್ನಿ ಜಿಲ್ ಬೈಡನ್ ದೀಪದ ಬೇಡಿಕೆ ಇಟ್ಟಿದ್ದರಿಂದ ತಮ್ಮ ಮನೆಯಲ್ಲಿದ್ದ ಕಾಲು ದೀಪ ಒದಗಿಸಿದ್ದರು. ಅದೇ ಕಾಲುದೀಪ ಜೋ ಬೈಡನ್ ಹಾಗೂ ಜಿಲ್ ಬೈಡನ್ ಬೆಳಗಿಸಿ ಭಾರತೀಯರಿಗೆ ಶುಭಾಶಯ ಕೋರಿದ್ದರು.
ಇದನ್ನೂ ಓದಿ:
► ಕುಂದಾಪುರದ ಮಾಲಾ ಅಡಿಗ ಅಮೇರಿಕಾ ಅಧ್ಯಕ್ಷರ ಪತ್ನಿಯ ನೀತಿ ನಿರ್ದೇಶಕಿ – https://kundapraa.com/?p=42575 .
► ಅಮೆರಿಕಾ ಪ್ರವಾಸದಲ್ಲಿ ಪ್ರಧಾನಿ ಮೋದಿಗೆ ಆಲೂರಿನ ಆನಂದ ಪೂಜಾರಿ ಆತಿಥ್ಯ – https://kundapraa.com/?p=52767 .
