ಜೇಸಿ ವಲಯಾಧ್ಯಕ್ಷರಾಗಿ ಕೆ. ಕಾರ್ತಿಕೇಯ ಮಧ್ಯಸ್ಥ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಮಂಗಳೂರಿನ ಬಿಜೈ ಚರ್ಚ್ ಹಾಲ್‌ನಲ್ಲಿ ನಡೆದ ಜೇಸಿ ವಲಯ ಸಮ್ಮೇಳನದಲ್ಲಿ ಕೆ. ಕಾರ್ತಿಕೇಯ ಮಧ್ಯಸ್ಥ 2020 ರ ಸಾಲಿನ ಜೇಸಿ ವಲಯ 15ರ ನೂತನ ವಲಯ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

Call us

Call us

Visit Now

ಯುವ ಉದ್ಯಮಿಯಾಗಿರುವ ಇವರು ಸಂಘಟನಾ ಚತುರರಾಗಿದ್ದು, 2006ರಲ್ಲಿ ಜೇಸಿಐ ಕುಂದಾಪುರ ಸಿಟಿಯ ಸದಸ್ಯರಾಗಿ ಸೇರ್ಪಡೆಗೊಂಡು, ಜೇಸಿ ವಲಯದಲ್ಲಿ ಹೊಸ ಚೈತ್ಯನ್ಯ ಮೂಡಿಸಿದರು. ೨೦೦೮ ರಲ್ಲಿ ನಿರ್ದೇಶಕರಾಗಿ 2009ರಲ್ಲಿ ಉಪಾಧ್ಯಕ್ಷರಾಗಿ 2010 ರಲ್ಲಿ ಜೆಸಿಐ ಕುಂದಾಪುರ ಸಿಟಿಯ ಅಧ್ಯಕ್ಷರಾಗಿ ಮಾಡಿದ ದಾಖಲೆ ಕಾರ್ಯಕ್ರಮಗಳ ಸರಣಿ ಸಾಧನೆಗಾಗಿ ವಲಯ ಮಟ್ಟದ ಪ್ರಶಸ್ತಿಗಳ ಮಹಾಪೂರವೇ ಕುಂದಾಪುರಕ್ಕೆ ಹರಿದು ಬಂದಿತ್ತು.

Click here

Call us

Call us

2018ರ ವಲಯ ಅಭಿವೃದ್ಧಿ ಮತ್ತು ಬೆಳವಣಿಗೆಯ ನಿರ್ದೇಶಕರಾಗಿ ಕೆ. ಕಾರ್ತಿಕೇಯ ಮಧ್ಯಸ್ಥರ ನೇತೃತ್ವದಲ್ಲಿ ವಲಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಪ್ರಶಸ್ತಿಯನ್ನು ಗಳಿಸಿದ್ದು, 2019ರ ವಲಯ ಉಪಾಧ್ಯಕ್ಷರಾಗಿ ಇವರು ಮಾಡಿದ ಸಾಧನೆಗೆ ಇವರನ್ನು ವಲಯ 15ರ ಅಧ್ಯಕ್ಷ ಗಾಧಿ ಅಲಂಕರಿಸುವಂತೆ ಮಾಡಿತು. ಇವರು ೧೨ ವಲಯ ಸಮ್ಮೇಳನ ೩ ರಾಷ್ಟ್ರೀಯ ಸಮ್ಮೇಳನ ಹಾಗೂ ಡೆಲ್ಲಿಯಲ್ಲಿ ನಡೆದ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗವಹಿಸಿರುವ
ಮಧ್ಯಸ್ಥರು ರೋಟರಾಕ್ಟ್ ಕ್ಲಬ್ ಕೋಟೇಶ್ವರದ ಪೂರ್ವಾಧ್ಯಕ್ಷರು, ಭಂಡಾರ್ಕಾರ್ಸ್ ಕಾಲೇಜ್‌ನ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರು, ಯುವ ವಿಪ್ರ ವೇದಿಕೆ ಕುಂದಾಪುರ ತಾಲೂಕು ಪೂರ್ವಾಧ್ಯಕ್ಷರು, ಮಂಗಳೂರು ವಿಶ್ವ ವಿದ್ಯಾಲಯದ ಸರ್ವ ಕಾಲೇಜು ವಿದ್ಯಾರ್ಥಿ ಕ್ರಿಯಾ ಸಮಿತಿಯ ಪೂರ್ವಾಧ್ಯಕ್ಷರು, ಕುಂದಾಪುರ-ಉಡುಪಿ ಫ್ಯಾಷನ್ ಕೋರ್ಟ್‌ನ ನಿರ್ದೇಶಕರಾಗಿ ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದಾರೆ.

ನೂತನ ವಲಯಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ಸಂದರ್ಭದಲ್ಲಿ ವಲಯಾಧ್ಯಕ್ಷ ಅಶೋಕ್ ಚಾಂತಾರ್, ನಿಕಟ ಪೂರ್ವಾಧ್ಯಕ್ಷ ಹಾಗೂ ಚುನಾವಣಾಧಿಕಾರಿ ರಾಕೇಶ್ ಕುಂಜೂರ್, ನಿಯೋಜಿತ ಉಪಾಧ್ಯಕ್ಷರಾದ ಆಶಾ ಅಲನ್ ವಾಜ್, ಸೌಜನ್ಯ ಹೆಗ್ಡೆ, ಸಂತೋಷ ಕುಮಾರ್, ಲೋಕೇಶ್ ರೈ, ಪ್ರದೀಪ್ ಬಾಕಿಲ, ಸಮದ್ ಖಾನ್, ಪೂರ್ವಾಧ್ಯಕ್ಷರಾದ ಚಂದ್ರಹಾಸ ರೈ, ಅರವಿಂದ್ ರಾವ್, ಪುರಂದರ ರೈ, ಕಿರಣ್ ಹೆಗ್ಡೆ, ಜೋನ್ ಆರ್ ಡಿಸಿಲ್ವ, ವೈ. ಸುಕುಮಾರ್, ಸದಾನಂದ ನಾವಡ, ಚಿತ್ತರಂಜನ್ ಶೆಟ್ಟಿ, ಹರಿಶ್ಚಂದ್ರ ಅಮೀನ್, ಮುರಳಿಶಾಮ್, ಕೃಷ್ಣಮೋಹನ್, ಚಂದ್ರಶೇಖರ್ ನಾಯರ್, ಅನಿಲ್ ಕುಮಾರ್, ಅಶಿತ್ ಜೈನ್, ಉದಯಕುಮಾರ್ ಶೆಟ್ಟಿ, ಸಂಪತ್ ಸುವರ್ಣ, ಅಲನ್ ವಾಜ್, ಶ್ರೀಧರ್ ಪಿ.ಎಸ್, ಸಂದೀಪ್ ಕುಮಾರ್, ಸಂತೋಷ ಪಿ., ಜೆಸಿಐ ಕುಂದಾಪುರ ಸಿಟಿಯ ಸ್ಥಾಪಕಾಧ್ಯಕ್ಷ ಹುಸೇನ್ ಹೈಕಾಡಿ, ಅಧ್ಯಕ್ಷ ಪ್ರಶಾಂತ್ ಹವಾಲ್ದಾರ್, ವಲಯಾಧಿಕಾರಿ ಜಯಚಂದ್ರ ಶೆಟ್ಟಿ, ಪೂರ್ವಾಧ್ಯಕ್ಷರಾದ ರಾಘವೇಂದ್ರ ಚರಣ್ ನಾವಡ, ನಾಗೇಂದ್ರ ಪೈ, ನಿತಿನ್ ಅವಭ್ರತ, ಮಂಜುನಾಥ್ ಕಾಮತ್, ಚಂದ್ರಕಾಂತ್, ಗಿರೀಶ್ ಹೆಬ್ಬಾರ್, ನಿಯೋಜಿತ ಅಧ್ಯಕ್ಷ ನಾಗೇಶ್ ನಾವಡ, ಕಾರ್ಯದರ್ಶಿ ಮಹೇಶ್ ಶೇಟ್, ಸದ್ಯಸರಾದ ಶಿಲ್ಪಾ ಮಧ್ಯಸ್ಥ, ರಾಘವೇಂದ್ರ ಭಟ್ ಇನ್ನಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

fifteen + nine =