ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಕಳವಾಡಿ ಶ್ರೀ ಈಶ್ವರ ಮಾರಿಕಾಂಬ ದೇವಸ್ಥಾನದಲ್ಲಿ ಮಾ.೨೭ ರಿಂದ ಎ.೪ರ ವರೆಗೆ ನಡೆಯುವ ನವೀಕೃತ ಗರ್ಭಗುಡಿ ಮತ್ತು ನೂತನ ಶಿಲಾಮಯ ತೀರ್ಥ ಮಂಟಪ ಸಮರ್ಪಣೆ ಹಾಗೂ ಅಷಬಂಧ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆಯನ್ನು ನಿವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಬಿ. ಜಗನ್ನಾಥ ಶೆಟ್ಟಿ ಬಿಡುಗಡೆಗೊಳಿಸಿದರು.
ಧಾರ್ಮಿಕ ಮುಖಂಡರಾದ ಬಿ. ಅಪ್ಪಣ್ಣ ಹೆಗ್ಡೆ, ಶ್ರೀ ಈಶ್ವರ ಮಾರಿಕಾಂಬ ದೇವಸ್ಥಾನದ ಆಡಳಿತ ಮಂಡಳಿ ಅನುವಂಶಿಯ ಮೊಕ್ತೇಸರರು ಕೆ ಚಂದ್ರಶೇಖರ ಶೆಟ್ಟಿ ಹಾಗು ಕೆ ವಸಂತ ಕುಮಾರ್ ಶೆಟ್ಟಿ ಕಾರಿಕಟ್ಟೆ, ಉತ್ಸವ ಸಮಿತಿ ಅಧ್ಯಕ್ಷರಾದ ಎಚ್ ವಸಂತ ಹೆಗ್ಡೆ ಕಳವಾಡಿ, ಜೀರ್ಣೋದ್ದಾರ ಸಮಿತಿ ಅಧ್ಯಕ್ಷರಾದ ದಿವಾಕರ್ ಹೆಗ್ಡೆ ಕಳವಾಡಿ, ಆಡಳಿತ ಮಂಡಳಿ ಅಧ್ಯಕ್ಷ ಕೆ. ರವೀಂದ್ರ ಶೆಟ್ಟಿ ಕಾರಿಕಟ್ಟೆ, ತಗ್ಗರ್ಸೆ ಟಿ. ನಾರಾಯಣ ಹೆಗ್ಡೆ, ವೆಂಕ್ಟ ಪೂಜಾರಿ ಸಸಿಹಿತ್ಲು, ವತ್ತಿನಕಟ್ಟೆ ದೇವಳದ ಗೌರವಾಧ್ಯಕ್ಷರಾದ ರಾಜು ಪೂಜಾರಿ ಯಡ್ತರೆ, ಅಧ್ಯಕ್ಷರಾದ ನಾಗರಾಜ ಶೆಟ್ಟಿ ನಾಕಟ್ಟೆ, ಜಗನ್ನಾಥ ಶೆಟ್ಟಿ, ವೆಂಕಟಾಚಲ ಮಯ್ಯ ಮತ್ತು ಗಣಪಯ್ಯ ಅರ್ಚಕರು, ಪ್ರಧಾನ ಕಾರ್ಯದರ್ಶಿ ಸಂಜೀವ ಆಚಾರ್ಯ, ಯುವ ಸಮಿತಿ ಅಧ್ಯಕ್ಷರಾದ ಬೈರಿಮನೆ ನಾಗರಾಜ ಮೊದಲಾದವರು ಉಪಸ್ಥಿತರಿದ್ದರು.