ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ಪ್ರಸಿದ್ಧ ಮೂಡಗಲ್ಲು ಕೇಶವನಾಥೇಶ್ವರ ದೇವಸ್ಥಾನಕ್ಕೆ ಮಂಗಳವಾರ ಕನ್ನಡದ ಖ್ಯಾತ ನಟ, ನಿರ್ದೇಶಕರುಗಳಾದ ರಕ್ಷಿತ್ ಶೆಟ್ಟಿ, ರಿಷಭ್ ಶೆಟ್ಟಿ ಭೇಟಿ ನೀಡಿದರು.
ಕುಟುಂಬಿಕರೊಂದಿಗೆ ದೇವಸ್ಥಾನಕ್ಕೆ ಮೊದಲ ಭಾರಿಗೆ ಆಗಮಿಸಿದ್ದ ರಕ್ಷಿತ್ ಶೆಟ್ಟಿ ಪೂಜೆ ಸಲ್ಲಿಸಿದರು. ನಟ ನಿರ್ದೇಶಕ ರಿಷಬ್ ಶೆಟ್ಟಿ ಅವರ ಕರೆಯ ಮೇರೆಗೆ ರಕ್ಷಿತ್ ಶೆಟ್ಟಿ ಆಗಮಿಸಿದ್ದರು. ಈ ಸಂದರ್ಭ ಪ್ರದೀಪ್ ಶೆಟ್ಟಿ, ದಿವ್ಯಾಧರ ಶೆಟ್ಟಿ, ಸುಹಾಸ್ ಶೆಟ್ಟಿ ಮೊದಲಾದವರು ಇದ್ದರು.