ಅರ್ಜುನ್ ಸರ್ಜಾ ವಿರುದ್ಧ ಮೀಟೂ ಷಡ್ಯಂತ್ರ: ನಟಿ ತಾರಾ ಆರೋಪ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಅರ್ಜುನ್ ಸರ್ಜಾ ಅವರೊಂದಿಗೆ ಸಿನೆಮಾ ಮಾಡಿ ೨೨ ವರ್ಷವಾಯಿತು. ಅವರನ್ನು ಅಂದಿನಿಂದ ನೋಡಿಕೊಂಡೆ ಬಂದಿದ್ದೇನೆ. ಅವರ ನಡವಳಿಕೆಯ ಬಗ್ಗೆ, ಅವರ ಕುಟುಂಬದ ಬಗ್ಗೆಯೂ ವೈಯಕ್ತಿಕವಾಗಿ ಪರಿಚಯವಿದೆ. ಅವರ ಮಡದಿ ಹಾಗೂ ಮಗಳನ್ನೂ ಏಕವಚನದಲ್ಲಿ ಮಾತನಾಡಿಸಿದ್ದು ಕಂಡಿಲ್ಲ. ಅವರ ಹೆಸರು ಮೀಟೂ ಅಭಿಯಾನದಲ್ಲಿ ತಳುಕುಹಾಕಿಕೊಂಡಿರುವುದು ಬೇಸರವಾಗಿದೆ ಎಂದು ರಾಜ್ಯ ವಿಧಾನ ಪರಿಷತ್‌ ಸದಸ್ಯರಾಗಿರುವ, ಚಿತ್ರನಟಿ ತಾರಾ ಹೇಳಿದರು.

ಬೈಂದೂರಿನಲ್ಲಿ ಚುನಾವಣಾ ಪ್ರಚಾರದ ಅಂಗವಾಗಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ನಮ್ಮ ದೇಶದಲ್ಲಿ ಹೆಣ್ಣು ಮಕ್ಕಳು ಶೋಷಣೆಗೊಳಗಾದರೆ ಕಾನೂನು ಹಾಗೂ ಹೊರಗಡೆ ಮಾಡನಾಡುವ ಸ್ವಾತಂತ್ರ್ಯವಿದೆ. ವೀಟೂ ಅಭಿಯಾನ ಮಾತನಾಡಲು ಅವಕಾಶ ದೊರೆತಿದೆ ಎಂದರೆ ಒಳ್ಳೆಯದು ಅದರ ಬಗ್ಗೆ ಅಭ್ಯಂತರವಿಲ್ಲ. ಆದರೆ ನಿಜವಾದ ಸಂತ್ರಸ್ಥರಿಗೆ ಅನ್ಯಾಯವಾಗಬಾರದು. ಮೀಟೂ ಅಭಿಯಾನ ದಿಕ್ಕುತಪ್ಪಬಾರದು ಎಂದರು.

ಅರ್ಜುನ್ ಸರ್ಜಾ ಅವರ ವ್ಯಕ್ತಿತ್ವವನ್ನು ಹಾಳುಗೆಡವಲು ಮೀಟೂ ಅಭಿಯಾನವನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ. ಇದರ ಹಿಂದೆ ಕಾಣದ ಕೈಗಳು ಕೆಲಸ ಮಾಡಿದೆ ಎಂದವರು ಆರೋಪಿಸಿದರು.

 

Leave a Reply

Your email address will not be published. Required fields are marked *

19 − sixteen =