ಕನ್ನಡ ಸಾಹಿತ್ಯ ಪರಿಷತ್ ಶತಮಾನೋತ್ಸವ ಸಂಭ್ರಮ: ‘ನಾಗೂರಿನಲ್ಲಿ ಕನ್ನಡ ವರ್ಷಾಚರಣೆ’

Call us

Call us

[quote bgcolor=”#ffffff” bcolor=”#ffbb00″ arrow=”yes” align=”right”]ಅ.8: ಕಾರ್ಯಕ್ರಮಗಳ ವಿವರ:

Call us

Call us

Call us

ವಿಶೇಷ ಉಪನ್ಯಾಸದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ನಡೆದು ಬಂದ ದಾರಿ-ಸವಾಲುಗಳ ಬಗ್ಗೆ ಹಿರಿಯ ನ್ಯಾಯವಾದಿ ಎ.ಎಸ್.ಎನ್.ಹೆಬ್ಬಾರ್ ಮಾತನಾಡಲಿದ್ದಾರೆ. ಆಕಾಶವಾಣಿ ಕಲಾವಿದ ಚಂದ್ರ ಕೆ. ಹೆಮ್ಮಾಡಿ ಮತ್ತು ತಂಡದವರಿಂದ ಕನ್ನಡ ಗೀತೆಗಳು ಪ್ರಸ್ತುತಗೊಳ್ಳಲಿದೆ. ಅಪರಾಹ್ನ 2 ಗಂಟೆಯಿಂದ ಸಾಹಿತ್ಯ ಮತ್ತು ಸಂಸ್ಕೃತಿ ಎಂಬ ವಿಚಾರ ಸಂಕಿರಣದಲ್ಲಿ ಡಾ. ಕನರಾಡಿ ವಾದಿರಾಜ ಭಟ್, ಡಾ. ಜಗದೀಶ ಶೆಟ್ಟಿ, ಡಾ. ಪಿ. ಅಮ್ಮಾಜಿ ಭಾಗವಹಿಸಲಿದ್ದಾರೆ. ಮಹಿಳಾ ಸಂವೇದನೆ ಕುರಿತು ಡಾ. ಶುಭಾ ಮರವಂತೆ ಉಪನ್ಯಾಸ ನೀಡಲಿದ್ದಾರೆ. ಸಂಜೆ ಜರುಗುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನಾಟಕ-ಕೆರೆಗೆ ಹಾರ, ಯಕ್ಷಗಾನ-ಮಾಯಾಪುರಿ ಮಹಾತ್ಮೆ ಹಾಗೂ ಬೈಂದೂರು ರಿದಂ ನೃತ್ಯಶಾಲೆಯ ವಿದ್ಯಾರ್ಥಿಗಳಿಂದ ನೃತ್ಯ ವೈಭವ ನಡೆಯಲಿದೆ.[/quote]

Call us

Call us

ಬೈಂದೂರು: ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪನೆಯಾಗಿ ನೂರು ವರ್ಷ ತುಂಬುತ್ತಿರುವ ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ವ್ಯಾಪ್ತಿಯ ಕನ್ನಡ ವರ್ಷಾಚರಣೆ-ಕನ್ನಡ ಸಾಹಿತ್ಯ ಪರಿಷತ್ತಿನ ಶತಮಾನೋತ್ಸವ ಎಂಬ ಎರಡು ದಿನಗಳ ಸಾಹಿತ್ಯೋತ್ಸವವನ್ನು ಆಯೊಜಿಸಲಾಗಿದೆ. ಆರ್.ಕೆ.ಸಂಜೀವರಾವ್ ಜನ್ಮ ಶತಾಬ್ದಿ ಆಚರಣಾ ಸಮಿತಿಯ ಜಂಟಿ ಆಶ್ರಯದಲ್ಲಿ ಅಕ್ಟೋಬರ್ 8 ಮತ್ತು 9 ರಂದು ಕುಂದಾಪುರ ತಾಲೂಕಿನ ನಾಗೂರು ಸಂದೀಪನ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಉತ್ಸವ ಜರುಗಲಿದ್ದು. ಮಂಗಳವಾರ ಶಾಲೆಯ ಮುಖ್ಯಶಿಕ್ಷಕ ಬಿ.ವಿಶ್ವೇಶ್ವರ ಅಡಿಗ ಶಾಲಾ ಆವರಣದಲ್ಲಿ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು.

ಬಳಿಕ ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಸುದ್ದಿಗೊಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯ ಹಿರಿಯ ಸಾಹಿತಿ, ಬಹುಭಾಷಾ ವಿದ್ವಾಂಸ ಡಾ. ಯು.ಪಿ.ಉಪಾಧ್ಯಾಯ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ಕಸಾಪ ರಾಜ್ಯಾಧ್ಯಕ್ಷ ಪುಂಡಲೀಕ ಹಾಲಂಬಿ ಆಶಯ ನುಡಿಯನ್ನಾಡಲಿದ್ದಾರೆ. ಪರಿಷತ್ತಿನ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಪುಸ್ತಕಗಳನ್ನು ಬಿಡುಗಡೆ ಮಾಡಲಿದ್ದಾರೆ. ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ, ಜಿಪಂ ಸದಸ್ಯ ಟಿ. ಬಾಬು ಶೆಟ್ಟಿ, ಸಿಂಡಿಕೇಟ್ ಬ್ಯಾಂಕ್ ನಿವೃತ್ತ ಮಹಾಪ್ರಬಂಧಕ ಕೆ. ಎಸ್. ಪ್ರಕಾಶ ರಾವ್, ಕಿರಿಮಂಜೇಶ್ವರ ಗ್ರಾಪಂ ಅಧ್ಯಕ್ಷೆ ಲಲಿತಾ ಖಾರ್ವಿ, ವಿದ್ಯಾಂಗ ಉಪನಿರ್ದೇಶಕ ದಿವಾಕರ ಶೆಟ್ಟಿ, ಜಿಲ್ಲಾ ವಾರ್ತಾಧಿಕಾರಿ ರೋಹಿಣಿ, ಆರ್.ಕೆ.ಸಂಜೀವರಾವ್ ಜನ್ಮ ಶತಾಬ್ದಿ ಆಚರಣಾ ಸಮಿತಿಯ ಅಧ್ಯಕ್ಷ ಎಸ್. ಜನಾರ್ದನ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದಿರುವ ಜಿಲ್ಲೆಯ 11 ಮಂದಿ ಹಿರಿಯರಿಗೆ ಶತಮಾನೋತ್ಸವದ ಗೌರವಾರ್ಪಣೆ ನಡೆಯಲಿದೆ ಎಂದರು.

ಅ.9ರ ಸಂಜೆ 4 ಗಂಟೆಗೆ ಜಿಲ್ಲಾಧ್ಯಕ್ಷರ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ಜರುಗಲಿದೆ. ಎಸ್. ಜನಾರ್ದನ ಸಮಾರೋಪ ಭಾಷಣ ಮಾಡಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ವಿನಯಕುಮಾರ ಸೊರಕೆ, ಉಡುಪಿ ಜಿಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಗೌರಿ ದೇವಾಡಿಗ, ತಾಪಂ ಸದಸ್ಯ ಮಹೇಂದ್ರ ಪೂಜಾರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಬಿ.ದೇವದಾಸ ಪೈ, ಉತ್ತರಕನ್ನಡ ಜಿಲ್ಲಾ ಕಸಾಪ ಅಧ್ಯಕ್ಷ ರೋಹಿದಾಸ ನಾಯಕ್, ಆರ್.ಕೆ.ಸಂಜೀವರಾವ್ ಜನ್ಮ ಶತಾಬ್ದಿ ಆಚರಣಾ ಸಮಿತಿಯ ಕಾರ್ಯದರ್ಶಿ ಬಿ.ವಿಶ್ವೇಶ್ವರ ಅಡಿಗ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುತ್ತಾರೆ. ಈ ಸಂದರ್ಭದಲ್ಲಿ ಜಿಲ್ಲಾ ಸಾಹಿತ್ಯ ಪರಿಷತ್ತಿನ ಹಿಂದಿನ ಮತ್ತು ಇಂದಿನ ಪದಾಧಿಕಾರಿಗಳಿಗೆ ಗೌರವಾರ್ಪಣೆ ನಡೆಯಲಿದೆ. ಸಂಜೆ ಬೈಂದೂರಿನ ಲಾವಣ್ಯ ಕಲಾವಿದರಿಂದ ಮರಣ ಮೃದಂಗ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಮಾಹಿತಿ ನೀಡಿದರು.

[box type=”custom” bg=”#ffffff” border=”#ffbb00″]ಅ. 9: ಕಾರ್ಯಕ್ರಮಗಳ ವಿವರ

ಬೆಳಿಗ್ಗೆ ಪ್ರಚಲಿತ ಸಮಸ್ಯೆಗಳ ಕುರಿತು ವಿಚಾರಗೋಷ್ಠಿ ನಡೆಯಲಿದ್ದು, ಪ್ರಗತಿಪರ ಕೃಷಿಕ ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ, ಟಿಎಂಎ ಪೈ ಶಿಕ್ಷಣ ಮಹಾವಿದ್ಯಾಲಯದ ಡಾ. ಮಹಾಬಲೇಶ್ವರ ರಾವ್, ಹಿರಿಯ ಪತ್ರಕರ್ತ ಶ್ರೀಪತಿ ಹೆಗಡೆ ಹಕ್ಲಾಡಿ ಮಾತನಾಡಲಿದ್ದಾರೆ. ಆರ್.ಕೆ.ಸಂಜೀವರಾವ್ ಬದುಕು-ಸಾಧನೆ ಎಂಬ ವಿಚಾರವಾಗಿ ಯು.ಚಂದ್ರಶೇಖರ ಹೊಳ್ಳ ಉಪನ್ಯಾಸ ನೀಡಲಿದ್ದಾರೆ. ಕವಿ ಕೆ.ಕೆ.ಕಾಳಾವರ್ಕರ್ ಅವರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಲಿದೆ. ಉದ್ಯಾವರ ಮಾಧವ ಆಚಾರ್ಯರ ‘ಒಂದು ನಾಟಕ ಪ್ರದರ್ಶನ’ವನ್ನು ಸಮೂಹ ಉಡುಪಿ ಕಲಾವಿದರಿಂದ ಪ್ರದರ್ಶನಗೊಳ್ಳಲಿದೆ.[/box]

???????????????????????????????ತಾಲೂಕು ಕಸಾಪ ಅಧ್ಯಕ್ಷ ಕುಂದಾಪುರ ನಾರಾಯಣ ಖಾರ್ವಿ, ಬೈಂದೂರು ಹೋಬಳಿ ಕಸಾಪ ಘಟಕದ ಅಧ್ಯಕ್ಷ ಡಾ. ಸುಬ್ರಹ್ಮಣ್ಯ ಭಟ್, ಕೋಟಾ ಹೋಬಳಿ ಕಸಾಪ ಘಟಕದ ಅಧ್ಯಕ್ಷ ಸುದರ್ಶನ್ ಶೆಟ್ಟಿ, ಖಂಬದಕೋಣೆ ಆರ್.ಕೆ.ಸಂಜೀವರಾವ್ ಜನ್ಮ ಶತಾಬ್ದಿ ಆಚರಣಾ ಸಮಿತಿಯ ಅಧ್ಯಕ್ಷ ಎಸ್. ಜನಾರ್ದನ್ ಮರವಂತೆ, ಲಾವಣ್ಯ ಕಾರ್ಯದರ್ಶಿ ನರಸಿಂಹ ಬಿ. ನಾಯಕ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

5 × two =