ಕುಂದಾಪುರ: ಅಭಿನವ ಕಲಾತಂಡದ ಕರ್ಕಾಟಿ ಅಮಾಸಿ ಕಿರುಚಿತ್ರ ಬಿಡುಗಡೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಅಭಿನವ ಕಲಾತಂಡದ ಕರ್ಕಾಟಿ ಅಮಾಸಿ ಕಲಾತ್ಮಕ ಕಿರುಚಿತ್ರ ಬಿಡುಗಡೆ ಹಾಗೂ ಅಭಿನವ ಪ್ರಶ್ನಾವಳಿ ಪ್ರಶಸ್ತಿ ಪ್ರದಾನ ಸಮಾರಂಭ ಮತ್ತು ವಿಶ್ವ ಕುಂದಾಪುರ ಕನ್ನಡ ದಿನಾಚರಣೆಯನ್ನು ಇಲ್ಲಿನ ಶ್ರೀ ಕಾರ್ತಿಕೇಯ ಕೃಪಾ ಸಭಾಭವನದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೆ. ರಾಮಚಂದ್ರ ಉಡುಪ, ಕಲಾತಂಡದಿಂದ ಪ್ರದರ್ಶಿಸಲ್ಪಟ್ಟ ರತ್ನ ಶಾಮಿಯಾನ ನಾಟಕ ಅದೊಂದು ಯಶಸ್ವೀ ನಾಟಕ, ಕರೋಣ ಕಾರಣದಿಂದ ಪ್ರದರ್ಶನದಿಂದ ವಂಚಿತರಾದರೂ ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಹಲವಾರು ಹಾಸ್ಯ ಚಿತ್ರಗಳು, ಕಿರುಚಿತ್ರ ಹಾಗೂ ತಮ್ಮ ತಂಡದ ಕಲಾವಿದರು ಮಾತ್ರವಲ್ಲದೆ ಬೇರೆ ತಂಡಗಳ ಕಲಾವಿದರನ್ನು ಕೂಡಿಕೊಂಡು ಕಲಾತ್ಮಕ ಕಿರುಚಿತ್ರಗಳನ್ನು ಮಾಡಿ ಜನ ಮನ್ನಣೆಗೆ ಪಾತ್ರವಾಗಿದೆ ಎಂದು ಶ್ಲಾಘಿಸಿದರು.

ಉಡುಪಿ ಜಿಲ್ಲಾ ಸಾಹಿತ್ಯ ಪರಿಷತ್ ನ ಪೂರ್ವಧ್ಯಕ್ಷರಾದ ಎ. ಎಸ್. ಏನ್. ಹೆಬ್ಬಾರ್ ಕಿರುಚಿತ್ರ ಬಿಡುಗಡೆಗೊಳಿಸಿ ಮಾತನಾಡಿ, ಇದೊಂದು ಅಭೂತ ಪೂರ್ವ ಕಿರುಚಿತ್ರ ಇದನ್ನು ನೋಡಿದಷ್ಟು ಇನ್ನೊಮ್ಮೆ ನೋಡಬೇಕಿನಿಸುವಷ್ಟು ಸಂದೇಶದ ಹಂದರವಿದೆ ಎಂದು ಹರ್ಷ ವ್ಯಕ್ತಪಡಿಸಿ, ಅಭಿನವ ಕಲಾ ತಂಡದ ಯೂಟ್ಯೂಬ್ ಚಾನೆಲ್ ಅಲ್ಲಿ ಎಲ್ಲರೂ ನೋಡಿ ಹರಸಿ ಹಾರೈಸಿ, ಹಂಚಿ ಎಂದು ಹೇಳಿದರು.

ಸಂಸ್ಥೆಯ ಮುಖ್ಯಸ್ಥರಾದ ನಾಗರಾಜ್ ವಿಠ್ಠಲವಾಡಿ ಸಂಸ್ಥೆಯ ವರದಿವಚನ ಗೈದರು. ಗುರು ಕುಂದಾಪುರ್ ಹಾಗೂ ಎಲ್ಲಾ ಕಿರುಚಿತ್ರ ಕಲಾವಿದರು ಇಡೀ ಕಿರುಚಿತ್ರ ತಂಡಕ್ಕೆ ಅಭಿನಂದನೆ ಸಲ್ಲಿಸಿದರು.

ಅಭಿನವ ಕಲಾತಂಡ ದ ಹಿರಿಯ ಕಲಾವಿದ ಶ್ರೀನಿವಾಸ್ ಪೈ ಮಾತನಾಡಿ ಮುಂದಿನ ದಿನಗಳಲ್ಲಿ ಹೊಸತ್ತೊಂದು ಕಥಾ ಹಂದರದೊಂದಿಗೆ ನಿಮ್ಮ ಮುಂದೆ ಬರಲಿದೆ ಅಭಿನವ ತಂಡ ಎಂದು ಹರ್ಷ ವ್ಯಕ್ತ ಪಡಿಸಿದರು . ಅಭಿನವ ಪ್ರಶ್ನಾವಳಿಯ ವಿಜೇತರಾದ ಸಂಸ್ಥೆಯ ಕಲಾವಿದರದ ಸತೀಶ್ ಪೂಜಾರಿ ಮಾವಿನಕಟ್ಟೆ ಇವರನ್ನು ಗುರುತಿಸಿ ಗೌರವಿಸಲಾಯಿತು, ಭಾಗವಹಿಸಿದ ಎಲ್ಲಾ ಕಲಾವಿದರನ್ನು ಗುರುತಿಸಿ ಅಭಿನಂದನಾ ಪಾತ್ರ ನೀಡಲಾಯಿತು. ಭೂಮಿಕಾ ಉಡುಪ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದ ಗಣ್ಯರನ್ನು ಸಂಸ್ಥೆಯ ಕಲಾವಿದೆ ಚೈತ್ರ ಸ್ವಾಗತಿಸಿದರು. ಸಂಸ್ಥೆಯ ಕಲಾವಿದರದ ಮಂಜುನಾಥ್ ನೆಂಪು ಧನ್ಯವಾದಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

twelve − 8 =