ಬೈಂದೂರು: ಹೊಸವರ್ಷ ಆಚರಣೆಗೆ ಮುರೂರು ಕೊರಗರ ಕೇರಿಗೆ ಬರುತ್ತಾರೆ ಸಚಿವ ಆಂಜನೇಯ

Click Here

Call us

Call us

ಸುನಿಲ್ ಬೈಂದೂರು | ಕುಂದಾಪ್ರ ಡಾಟ್ ಕಾಂ ವರದಿ.
ಕುಂದಾಪುರ: ಹೊಸವರ್ಷವನ್ನು ಆಚರಿಸಲು ಮೋಚು ಮಸ್ತಿಗಾಗಿ ಜನರು ಐಶಾರಾಮಿ ತಾಣಗಳನ್ನು ಅರಸಿ ಹೋರಟರೆ, ಕರ್ನಾಟಕ ಸರಕಾರದ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಎಚ್. ಆಂಜನೇಯ ಈ ಭಾರಿ ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಾಲ್ತೋಡು ಗ್ರಾಪಂನ ಕೊರಗರ ಮನೆಯನ್ನು ಅರಸಿ ಬರಲಿದ್ದು, ಡಿ.೩೧ರಂದು ವಾಸ್ತವ್ಯ ಹೂಡಿ ಕೊರಗ ಸಮುದಾಯದ ಸಮಸ್ಯೆಗಳಿಗೆ ಕಿವಿಯಾಗುವ ಮೂಲಕ ಹೊಸವರ್ಷ ಆಚರಿಸಲಿದ್ದಾರೆ.

Call us

Call us

Click Here

Visit Now

ಕರ್ನಾಟಕದ ಸರಕಾರದ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಪ್ರತಿವರ್ಷಾಂತ್ಯದಲ್ಲಿ ನಿರ್ಗತಿಕರು, ಮೂಲಸೌಕರ್ಯ ವಂಚಿತರ ಮನೆಯಲ್ಲಿ ವಾಸ್ತವ್ಯ ಹೂಡಿ ಆ ಭಾಗದ ಜನರ ಸಮಸ್ಯೆಯನ್ನು ಅರಿಯಲು ಯತ್ನಿಸಿ ಸಮಸ್ಯೆಗೆ ಪರಿಹಾರೋಪಾಯವನ್ನು ಕಂಡುಕೊಂಡು ಸೂಕ್ತ ಕ್ರಮಕೈಗೊಳ್ಳುವ ಪರಿಪಾಠವನ್ನು ಸಚಿವ ಎಚ್. ಆಂಜನೇಯ ಅವರು ಈ ಭಾರಿಯೂ ಮುಂದುವರಿಸಿದ್ದಾರೆ. ಅದರಂತೆ ಸಚಿವರು ಈ ಭಾರಿ ಕಾಲ್ತೋಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಮೂರೂರು ಕೊರಗರ ಹಾಡಿಯನ್ನು ಆಯ್ದುಕೊಂಡು ವಾಸ್ತವ್ಯ ಹೂಡಲಿದ್ದಾರೆ.

Click here

Click Here

Call us

Call us

ಮೂರುರು ಕೊರಗರ ಹಾಡಿ:
ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮೂರೂರಿನ ಕೊರಗರ ಹಾಡಿಯಲ್ಲಿ ಹತ್ತು ಕೊರಗ ಕುಟುಂಬಗಳಿದ್ದು ಸುಮಾರು ೪೫ರಿಂದ ೫೦ ಸದಸ್ಯರು ವಾಸವಿದ್ದಾರೆ. ಈ ಪೈಕಿ ಮರ್ಲ ಕೊರಗ ಎಂಬುವವರ ಮನೆಯಲ್ಲಿ ಸಚಿವರು ವಾಸ್ತವ್ಯ ಹೂಡಿ, ಹೊಸ ವರ್ಷವನ್ನು ಸ್ವಾಗತಿಸಲಿದ್ದಾರೆ. ಇದರೊಂದಿಗೆ ಅಲ್ಲಿಯೇ ಸಚಿವರಿಂದ ಸಮಸ್ಯೆ ಆಲಿಕೆ, ಭೋಜನ ವ್ಯವಸ್ಥೆ ನಡೆಲಿದೆ. ಕುಂದಾಪ್ರ ಡಾಟ್ ಕಾಂ ವರದಿ.

ಸಚಿವರ ಭೇಟಿಗೆ ಪೂರ್ವಭಾವಿಯಾಗಿ ಉಡುಪಿ ಜಿಲ್ಲೆಯ ಕೊರಗ ಸಂಘಟನೆಗಳ ಮೂಲಕ ಜಿಲ್ಲೆಯ ಕೊರಗ ಸಮುದಾಯದ ಬೇಡಿಕೆಯನ್ನು ಆಲಿಸಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಕ್ಷೇತ್ರದ ಶಾಸಕರ ಮೂಲಕ ಕ್ರೀಯಾ ಯೋಜನೆ ರೂಪಿಸಲು ಜಿಲ್ಲಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಾಯೋನ್ಮುಖರಾಗಿದ್ದು, ಸಚಿವರನ್ನು ಬರಮಾಡಿಕೊಳ್ಳಲು ಸಕಲ ಸಿದ್ಧತೆ ನಡೆಯುತ್ತಿದೆ.

Leave a Reply

Your email address will not be published. Required fields are marked *

3 + 10 =