9 ಮಂದಿ ಸಾಧಕರು ಹಾಗೂ 1 ಸಂಸ್ಥೆಗೆ ಕುಂದಾಪುರ ತಾಲೂಕು ಸಾಹಿತ್ಯ ಸಮ್ಮೇಳನದ ಸನ್ಮಾನ

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ವಿಜಯವಾಣಿ ದಿನಪತ್ರಿಕೆಯ ಹಿರಿಯ ವರದಿಗಾರ ಶ್ರೀಪತಿ ಹೆಗಡೆ ಹಕ್ಲಾಡಿ, ಯಕ್ಷಗಾನ ಪ್ರಸಂಗಕರ್ತ ಕಂದಾವರ ರಘುರಾಮ ಶೆಟ್ಟಿ, ರಂಗಭೂಮಿ ಕಲಾವಿದ ಯೋಗೀಶ ಬಂಕೇಶ್ವರ ಸಹಿತ ಒಂಬತ್ತು ಜನ ಸಾಧಕರು ಹಾಗೂ ಒಂದು ಸಂಘ ಸಂಸ್ಥೆ ಕುಂದಾಪುರ ತಾಲೂಕು ಸಾಹಿತ್ಯ ಸಮ್ಮೇಳನ ಸನ್ಮಾನ ಗೌರವಕ್ಕೆ ಪಾತ್ರರಾಗಿದ್ದಾರೆ.

Call us

Call us

ಕುಂದಾಪುರ ತಾಲೂಕು ಹಕ್ಲಾಡಿ ಕೊಳ್ಳೆಬೈಲು ಸೂರಪ್ಪ ಶೆಟ್ಟಿ ಪ್ರೌಢಶಾಲೆಯಲ್ಲಿ ಡಿ.೧೬ ಶನಿವಾರ ಹಾಗೂ ಭಾನವಾರ ನಡೆಯುವ ೧೬ನೇ ಕನ್ನಡ ಸಾಹಿತ್ಯ ಸಮ್ಮೇಳನ ಸಮಾರೋಪದಲ್ಲಿ ನಿವೃತ್ತ ಉಪನ್ಯಾಸಕ ಉಪೇಂದ್ರ ಸೋಮಯಾಜಿ ಸನ್ಮಾನಿಸಲಿದ್ದಾರೆ.

೧೬ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಆಯ್ಕೆಯಾದ ಬಿ. ಅಪ್ಪಣ್ಣ ಹೆಗ್ಡೆ ಅಧ್ಯಕ್ಷತೆಯಲ್ಲಿ ಎರಡು ದಿನ ಕಾರ‍್ಯಕ್ರಮ ನಡೆಯಲಿದ್ದು, ಸಾಹಿತಿಗಳು, ಜನಪ್ರತಿನಿಧಿಗಳ ಪಾಲ್ಗೊಳ್ಳಲಿದ್ದು, ಗೋಷ್ಠಿ, ಕವಿಸಮಯ ಹಾಗೂ ಸಾಂಸ್ಕೃತಿ ಕಾರ‍್ಯಕ್ರಮ ಜರುಗಲಿದೆ.

Call us

Call us

ಸನ್ಮಾನಿಸಲ್ಪಡುವವರು:
ಕುಂದಾಪುರ ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಬಾಳೆಮನೆ ಸಂತೋಷ ಕುಮಾರ್ ಶೆಟ್ಟಿ ಹಕ್ಲಾಡಿ, ಶೈಕ್ಷಣಿಕ ಕ್ಷೇತ್ರದಲ್ಲಿ ಗುರುತಿಸಿಕೊಂಡ ಆರ್. ಎನ್. ರೇವಣ್ಕರ್, ಯಕ್ಷಗಾನ ಪ್ರಸಂಗಕರ್ತ ಕಂದಾವರ ರಘುರಾಮ ಶೆಟ್ಟಿ, ಬಡಗುತಿಟ್ಟು ಯಕ್ಷಗಾನ ಕಲಾವಿದ ಐರ್‌ಬೈಲ್ ಆನಂದ ಶೆಟ್ಟಿ, ರಂಗಭೂಮಿ ಕಲಾವಿದ ಯೋಗೀಶ ಬಂಕೇಶ್ವರ, ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ನಾಗೇಶ್ ಶ್ಯಾನುಭಾಗ್ ಕೊಳೂರು, ಸಮಾಜ ಸೇವಕ ತಾರಾನಾಥ ಮೇಸ್ತ ಶಿರೂರು, ಜಾನಪದ ಕ್ಷೇತ್ರದ ಸಾಧಕ ಬೀಜಾಡಿ ಭಜನೆ ರಾಮ, ಬಟ್ಟೆಕುದ್ರು ಶ್ರೀ ರಾಮ ಯುವಕ ಮಂಡಳಿ ಸನ್ಮಾನಕ್ಕೆ ಆಯ್ಕೆಯಾಗಿದ್ದಾರೆ.

 

Leave a Reply

Your email address will not be published. Required fields are marked *

nineteen − one =