ಕನ್ನಡ ಸಾಹಿತ್ಯ ಪರಿಷತ್ ಕುಂದಾಪುರ ಘಟಕದ ಪದಗ್ರಹಣ ಸಮಾರಂಭ, ಸಂಸ್ಥಾಪನಾ ದಿನಾಚರಣೆ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಭಾಷೆಯನ್ನು ಬೆಳೆಸುವ ದಿನಗಳ ಬದಲಾಗಿ ಉಳಿಸಿಕೊಳ್ಳುವ ದಿನಗಳು ಬಂದಿವೆ. ಜಾಗತೀಕರಣ, ಉದಾರೀಕರಣದ ಕಾರಣದಿಂದ ಕೊಚ್ಚಿ ಹೋಗುತ್ತಿರುವ ಕನ್ನಡ ಭಾಷೆಯನ್ನು ಮತ್ತಷ್ಟು ಸಮೃದ್ಧಗೊಳಿಸುವ ಅಗತ್ಯತೆ ನಮ್ಮ ಮುಂದಿದೆ. ಕನ್ನಡಕ್ಕೆ ಅನ್ಯಾಯವಾದಾಗ ಪ್ರತಿಭಟಿಸುವ ಕೆಚ್ಚನ್ನು ಬೆಳೆಸಿಕೊಂಡು ಒಗ್ಗಟ್ಟಾಗಿ ಹೋರಾಡುವ ಕೆಲಸವಾಗಬೇಕಿದೆ ಎಂದು ಮನೋರೋಗ ತಜ್ಞ ಡಾ. ಕೆ.ಎಸ್. ಕಾರಂತ್ ಹೇಳಿದರು.

Call us

Call us

Call us

ಅವರು ಇಲ್ಲಿನ ಸಾಧನ ಸಂಗಮ ಟ್ರಸ್ಟ್ ಸಭಾಂಗಣದಲ್ಲಿ ನಡೆದ ೧೦೧ನೇ ಸಂಸ್ಥಾಪನಾ ದಿನಾಚರಣೆ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಸಾಹಿತ್ಯ ಪರಿಷತ್ತೆಂದರೆ ಸಾಹಿತ್ಯ ಹಾಗೂ ಸಾಹಿತಿಗಳಿಗೆ ಮಾತ್ರ ಸೀಮಿತವಾದುದಲ್ಲ. ಅದು ನಾಡು, ನುಡಿ, ಸಂಸ್ಕೃತಿ, ಸಾಹಿತ್ಯಕ್ಕೆ ಸಂಬಂಧಿಸಿದ್ದು. ಎಲ್ಲರನ್ನೂ ಒಳಗೊಳ್ಳುವ ಪ್ರಾತಿನಿಧಿಕ ಸಂಸ್ಥೆಯಾಗಿ ಕನ್ನಡ ಸಾಹಿತ್ಯ ಪರಿಷತ್ತು ಬೆಳೆದುಬಂದಿದ್ದು ಅದು ಹೀಗೆಯೇ ಮುಂದುವರಿಯಬೇಕಿದೆ ಎಂದವರು ಹೇಳಿದರು.

ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಆಶಯ ನುಡಿಗಳನ್ನಾಡಿ ಕನ್ನಡ ಭಾಷಾ ಸಂಪತ್ತು ಹಾಗೂ ಜ್ಞಾನ ಸಂಪತ್ತನ್ನು ಹೆಚ್ಚಿಸಬೇಕು ಎಂಬ ಉದ್ದೇಶದೊಂದಿಗೆ ಹುಟ್ಟಿಕೊಂಡದ್ದು ಕನ್ನಡ ಸಾಹಿತ್ಯ ಪರಿಷತ್ತು. ಇದು ಪ್ರತಿ ಕನ್ನಡಿಗನ ಪ್ರಾತಿನಿಧಿಕ ಸಂಸ್ಥೆ. ಉಡುಪಿ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿಯೂ ಕನ್ನಡವನ್ನು ಪಸರಿಸುವ ನೆಲೆಯಲ್ಲಿ ಒಂದಿಷ್ಟು ಕೆಲಸಗಳಾಗಿವೆ. ಮಕ್ಕಳಲ್ಲಿ ಓದುವ ಸಂಸ್ಕೃತಿ ಬೆಳೆಸುವ ನಿಟ್ಟಿನಲ್ಲಿ ಕಿರುಪುಸ್ತಕ ಪ್ರಕಟಿಸಿ ರಸಪಶ್ನೆ, ಪ್ರಬಂಧ ಸ್ವರ್ಧೆಗಳನ್ನು ಹಮ್ಮಿಕೊಳ್ಳುತ್ತಾ ಬರಲಾಗಿದೆ. ಸಾಹಿತ್ಯ ಪರಿಷತ್ತಿಗೆ ಉಡುಪಿಯಲ್ಲಿ ಕಛೇರಿಯಿಲ್ಲ. ಅಧ್ಯಕ್ಷರುಗಳ ನಿವಾಸವೇ ಕಛೇರಿಯಾಗಿದೆ. ಸರಕಾರ ಪರಿಷತ್ತಿಗೆ ನೀಡಿರುವ ೧೧.೫ಎಕರೆ ಭೂಮಿಯಲ್ಲಿ ಕನ್ನಡ ಭವನ ನಿರ್ಮಿಸಿ ಪ್ರತಿನಿತ್ಯವೂ ಕನ್ನಡದ ಕಾರ್ಯವಾಗುವಂತೆ ಮಾಡುವ ಕೆಲಸಕ್ಕೆ ಈ ಅವಧಿಯಲ್ಲಿ ಕಾಯೋನ್ಮಖರಾಗಿದ್ದೇವೆ ಎಂದರು.

ಕಸಾಪ ಕುಂದಾಪುರ ತಾಲೂಕು ಘಟಕದ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಘಟಕದ ನಿಕಟಪೂರ್ವಾಧ್ಯಕ್ಷ ಕುಂದಾಪುರ ನಾರಾಯಣ ಖಾರ್ವಿ, ಬೈಂದೂರು ಹಿರಿಯ ನಾಗರಿಕರ ವೇದಿಕೆ ಅಧ್ಯಕ್ಷ ವಸಂತ ಹೆಗ್ಡೆ ಉಪಸ್ಥಿತರಿದ್ದರು. ನೂತನ ಪದಾಧಿಕಾರಿಗಳು ಪ್ರತಿಜ್ಞಾವಿಧಿ ಸ್ವೀಕರಿಸಿದರು. ತಾಲೂಕು ಕಸಾಪ ಗೌರವ ಕಾರ್ಯದರ್ಶಿ ನಾರಾಯಣ ಐತಾಳ್ ಸ್ವಾಗತಿಸಿದರು. ಕಸಾಪ ವಂಡ್ಸೆ ಘಟಕದ ಅಧ್ಯಕ್ಷ ಚಂದ್ರ ಕೆ. ಹೆಮ್ಮಾಡಿ ಪ್ರಾರ್ಥಿಸಿದರು. ಬೈಂದೂರು ಘಟಕದ ಅಧ್ಯಕ್ಷ ಗಣಪತಿ ಹೋಬಳಿದಾರ್ ಕಾರ್ಯಕ್ರಮ ನಿರೂಪಿಸಿದರು.

Kannada sahitya parishath kundapura gataka installation program (2) Kannada sahitya parishath kundapura gataka installation program (3) Kannada sahitya parishath kundapura gataka installation program (4) Kannada sahitya parishath kundapura gataka installation program (5)

Leave a Reply

Your email address will not be published. Required fields are marked *

14 + 19 =