ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಕಥೆಗಾರ ಹಾಗೂ ಓದುಗ ಮುಖಾಮುಖಿಯಾಗಿ ಸಂವಾದಿಸಿದರೆ ಪ್ರಜ್ಞಾಪೂರ್ವಕ ಹಾಗೂ ಕ್ರೀಯಾಶೀಲವಗಿ ಬೆಳೆಯಲು ಸಾಧ್ಯವಿದೆ. ಕಥಾ ಓದು ಅಂತಹದ್ದೊಂದು ಅವಕಾಶ ಕಲ್ಪಿಸುತ್ತದೆ ಎಂದು ಲೇಖಕ, ಅಂಕಣಕಾರ ಸತೀಶ ಚಪ್ಪರಿಕೆ ಹೇಳಿದರು.
ಸಮುದಾಯ ಕುಂದಾಪುರ, ಕನ್ನಡ ಸಾಹಿತ್ಯ ಪರಿಷತ್ತಿನ ಬೈಂದೂರು ತಾಲ್ಲೂಕು ಘಟಕ, ನಾಯ್ಕನಕಟ್ಟೆಯ ಸಂವೇದನಾ ಟ್ರಸ್ಟ್ ಮತ್ತಿತರ ಸ್ಥಳೀಯ ಸಂಘಟನೆಗಳ ಆಶ್ರಯದಲ್ಲಿ ಭಾನುವಾರ ಖಂಬದಕೋಣೆಯಲ್ಲಿ ನಡೆದ ತಿಂಗಳ ಕಥಾ ಓದು ಕಾರ್ಯಕ್ರಮದಲ್ಲಿ ತಮ್ಮ ಮುಂಬರುವ ಕಥಾಸಂಕಲನ ಹೈಡ್ಪಾರ್ಕ್ನ ’ಗರ್ಭ’ ಕತೆ ಓದುವ ಮೊದಲು ಮಾತನಾಡಿದರು.
ಇದೇ ಪರಿಸರದಲ್ಲಿ ಹುಟ್ಟಿ, ಬಾಲ್ಯ ಕಳೆದು, ಆರಂಭಿಕ ಶಿಕ್ಷಣ ಪಡೆದ ತಮಗೆ ಇದೇ ಪರಿಸರದ ಹಿನ್ನೆಲೆಯಲ್ಲಿ ರಚಿಸಿದ ಕತೆ ಓದುವ ಅವಕಾಶ ಸಿಕ್ಕಿರುವುದು ಸಂತಸ ತಂದಿದೆ ಎಂದರು. ಉದಯ ಶೆಟ್ಟಿ, ಎಸ್. ಜನಾರ್ದನ, ಎಂ. ಗೋವಿಂದ ಕತೆಯ ಕುರಿತು ತಮ್ಮ ಅನ್ನಿಸಿಕೆ ವ್ಯಕ್ತಪಡಿಸಿ, ಕತೆಗಾರರೊಂದಿಗೆ ಸಂವಾದ ನಡೆಸಿದರು.
ಬೈಂದೂರು ವಲಯ ಶಿಕ್ಷಣ ಸಂಯೋಜಕ ಅಬ್ದುಲ್ ರವೂಫ್ ಚದುರಂಗರ ’ನಾಲ್ಕು ಮೊಳ ಭೂಮಿ’ ಕತೆ ಓದಿದರು. ಕುಂದಾಪುರದ ಬಿ.ಬಿ.ಹೆಗ್ಡೆ ಕಾಲೇಜಿನ ವಿದ್ಯಾರ್ಥಿಗಳು ವಾಸುದೇವ ಗಂಗೇರ ಬರೆದು ನಿರ್ದೇಶಿಸಿದ ರಂಗಪ್ರಸ್ತುತಿ ’ಮಹಾತ್ಮ’ ಪ್ರದರ್ಶಿಸಿದರು. ಸಮುದಾಯದ ಕಾರ್ಯದರ್ಶಿ ಸದಾನಂದ ಬೈಂದೂರು ಸ್ವಾಗತಿಸಿದರು.
ಅಧ್ಯಕ್ಷ ಉದಯ ಗಾಂವ್ಕರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ರವೀಂದ್ರ ದೇವಾಡಿಗ ವಂದಿಸಿದರು. ಸಂವೇದನಾ ಟ್ರಸ್ಟ್ ಅಧ್ಯಕ್ಷ ಡಾ. ಸುಬ್ರಹ್ಮಣ್ಯ ಭಟ್, ಇದ್ದರು.
ಓದಿ: ಸಂದರ್ಶನ – ಮನುಷ್ಯತ್ವ ಹಾಗೂ ಮನುಷ್ಯ ಸಂವೇದನೆಯ ಸಾಹಿತ್ಯವೇ ಮೇಲು: ಸತೀಶ ಚಪ್ಪರಿಕೆ – https://kundapraa.com/?p=21545