ಕಥೆ ಕೇಳಿ, ಅನಿಸಿಕೆ ಹೇಳಿ ಸ್ವರ್ಧೆ: ಕಾವ್ಯಾ ಹಂದೆ ಪ್ರಥಮ, ಕೀರ್ತಿ ಎಸ್. ದ್ವಿತೀಯ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಉಡುಪಿಯ ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ) ಸಂವಿಪ್ರ ಸಂಭ್ರಮ 2020ರ ಸಲುವಾಗಿ ಕಾಲೇಜು ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ. ಕಥೆ ಕೇಳಿ, ಅನಿಸಿಕೆ ಹೇಳಿ ಬಹುಮಾನ ಗೆಲ್ಲಿ ಸ್ಪರ್ಧೆಯಲ್ಲಿ ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನ ಕಾವ್ಯಾ ಹಂದೆ ಪ್ರಥಮ, ಇದೇ ಕಾಲೇಜಿನ ಕೀರ್ತಿ ಎಸ್. ದ್ವಿತೀಯ ಸ್ಥಾನಿಯಾಗಿದ್ದಾರೆ.

Click Here

Call us

Call us

ಕುಮಟಾ ಕಮಲಾ ಬಾಳಿಗಾ ಕಾಲೇಜಿನ ಸಂಗೀತಾ ಎನ್. ಶೆಟ್ಟಿ ಹಾಗೂ ಮಂಡ್ಯ ಕೆಎಂಪಿಇಎಸ್ ಪದವಿ ಕಾಲೇಜಿನ ದೀಕ್ಷಿತ್ ಕುಮಾರ್ ತೃತೀಯ ಸ್ಥಾನದ ವಿಜೇತರಾಗಿದ್ದಾರೆ. ಇವರೊಂದಿಗೆ ಚಿನ್ಮಯಿ ಅಡಿಗ ಉಡುಪಿ, ಗಾನವಿ ಜಿ. ಉಡುಪಿ, ನಿಶ್ಚಿತ ಪೂಜಾರಿ ಶಿರ್ವ, ಕವಿತಾ ಎಂ. ಅಂಗಡಿ ಹಾವೇರಿ ತೀರ್ಪುಗಾರರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

Click here

Click Here

Call us

Visit Now

ಈ ಕಥಾ ವಾಚನ ಸಪ್ತಾಹದಲ್ಲಿ ಕನ್ನಡದ ಪ್ರಸಿದ್ಧ ಕಥೆಗಾರರ ಕಥೆಗಳನ್ನು ರಂಗಭೂಮಿ ಕಲಾವಿದರು ವಾಚಿಸಿರುತ್ತಾರೆ. ಡಾ. ರಶ್ಮಿ ಕುಂದಾಪುರ, ಡಾ. ಪ್ರಜ್ಞಾ ಮಾರ್ಪಳ್ಳಿ ಕಥೆ ಕೇಳಿ, ಅನಿಸಿಕೆ ಹೇಳಿ ಸ್ಪರ್ಧೆಯ ತೀರ್ಪುಗಾರರಾಗಿದ್ದರು.

ವರದಿ: ವಿಧಾತ್ರಿ ಭಟ್ ಉಪ್ಪುಂದ

Leave a Reply

Your email address will not be published. Required fields are marked *

5 × 5 =