ಕುಂದಾಪುರ: ಬಹುನಿರೀಕ್ಷಿತ ‘ಕತ್ತಲೆ ಕೋಣೆ’ ಚಿತ್ರದ ಟೀಸರ್ ಬಿಡುಗಡೆ

Click Here

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕರಾವಳಿಯ ಯುವಕರಲ್ಲಿ ವಿಶೇಷವಾದ ಪ್ರತಿಭೆ ಇದೆ. ಏನನ್ನೂ ಸಾಧಿಸಬೇಕೆಂಬ ಛಲವಿದೆ. ಸಿನೆಮಾ ನಿರ್ಮಾಣ ನಿರ್ದೇಶನ ಎಂಬುದು ಬೆಂಗಳೂರಿಗೆ ಮಾತ್ರ ಸೀಮಿತವಾಗದೇ ಕುಂದಾಪುರ ಪರಿಸರದಲ್ಲಿಯೂ ಸಾಧ್ಯ ಎಂಬ ಛಲದೊಂದಿಗೆ ಈ ಭಾಗದ ಪ್ರತಿಭೆಗಳಿಗೂ ಅವಕಾಶ ನೀಡುತ್ತಿರುವ ಕಾರ್ಯ ಶ್ಲಾಘನೀಯ ಎಂದು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ಮಾಜಿ ಧರ್ಮದರ್ಶಿ ಬಿ.ಎಂ. ಸುಕುಮಾರ ಶೆಟ್ಟಿ ಹೇಳಿದರು.

Call us

Call us

Visit Now

ಅವರು ಕುಂದಾಪುರದ ನೇತಾಜಿ ಸಭಾ ಭವನದಲ್ಲಿ ಜರುಗಿದ ಮಿರಾಕಲ್ ಡಾನ್ಸ್ ಕ್ರೀವ್ ಉದ್ಘಾಟನಾ ಸಮಾರಂಭ ಹಾಗೂ ಕತ್ತಲೆಕೋಣೆ ಸಿನೆಮಾದ ಟೀಸರ್ ಬಿಡುಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮತನಾಡಿ ಕುಂದಾಪುರದ ಯುವಕರು ಏನನ್ನೂ ಸಾಧಿಸಬಲ್ಲರು. ಸಿನೆಮಾ ಕ್ಷೇತ್ರದಲ್ಲಿಯೂ ಈ ಭಾಗದ ನಿರ್ದೇಶಕರು ಹೆಸರು ಮಾಡುತ್ತಿರುವುದು ಕೇಳಿದ್ದೇನೆ. ಸಂದೇಶ್ ಶೆಟ್ಟಿ ಅಜ್ರಿ ಅವರ ನಿರ್ದೇಶನದ ಕತ್ತಲೆಕೋಣೆ ಸಿನೆಮಾ ಯಶಸ್ಸು ಕಾಣುವಂತಾಗಲಿ ಎಂದು ಹಾರೈಸಿದರು.

Click Here

Click here

Click Here

Call us

Call us

ಕಮಲಶಿಲೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಧರ್ಮದರ್ಶಿ ಸಜ್ಜಿದಾನಂದ ಚಾತ್ರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಚಿತ್ರದ ನಿರ್ಮಾಪಕ ಪಿ.ಆರ್ ಅಮೀನ್, ನ್ಯಾಯವಾದಿ ರವಿಕಿರಣ ಮುರ್ಡೇಶ್ವರ, ಜನಶ್ರೀ ನ್ಯೂಸ್‌ನ ಚಂದ್ರಕಲಾ ರಾಜೇಶ್, ಈಟಿವಿ ನ್ಯೂಸ್‌ನ ಮಲ್ಲಿಕಾರ್ಜುನ್, ಸವಿತಾ ಸಮಾಜದ ಜಿಲ್ಲಾ ಸಂಘಟಕ ಮಂಜುನಾಥ ಸಾಲಿಯಾನ್, ಅಂತರಾಷ್ಟ್ರೀಯ ಖ್ಯಾತಿಯ ಜಾದೂಗಾರ್ ಸತೀಶ್ ಹೆಮ್ಮಾಡಿ, ಸರಕಾರಿ ನೌಕರರ ಸಂಘದ ಕುಂದಾಪುರ ತಾಲೂಕು ಅಧ್ಯಕ್ಷ ದಿನಕರ್ ಶೆಟ್ಟಿ, ಉದ್ಯಮಿ ರಾಜೇಶ್ ಯರಗಟ್ಟಿ, ಸಿನೆಮಾ ನಟಿ ಚಂದ್ರಕಲಾ ಮುಂಬೈ ಮೊದಲಾದವರು ಉಪಸ್ಥಿತರಿದ್ದರು.

ಕತ್ತಲೆಕೋಣೆ ಚಿತ್ರದ ನಿರ್ದೇಶಕ ಸಂದೇಶ್ ಶೆಟ್ಟಿ ಆಜ್ರಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸುಕೇಶ್ ಕೋಟೇಶ್ವರ ಕಾರ್ಯಕ್ರಮ ನಿರೂಪಿಸಿದರು.

Kattale kone kannada film teaser released at Kundapur

Leave a Reply

Your email address will not be published. Required fields are marked *

19 − seventeen =